'ಬನ್ನಿ ಒಮ್ಮೆ ಪ್ರಯತ್ನಿಸೋಣ' ಲೇಖಕ ಗಿರೀಶ್ ಕುಮಾರ್ ಎಚ್.ಆರ್. ಅವರ ಲೇಖನ ಸಂಕಲನ. ಈ ಪುಸ್ತಕದಲ್ಲಿ ಮೂವತ್ತು ಲೇಖನಗಳವೆ. ಈ ಕೃತಿಗೆ ಬೆನ್ನುಡಿ ಬರೆದಿರುವ ಲೇಖಕ ಗಿರಿಮನೆ ಶ್ಯಾಮರಾವ್ ಈ ಪುಸ್ತಕದಲ್ಲಿ ಮೂವತ್ತು ಲೇಖನಗಳಿವೆ ಪ್ರತಿಯೊಂದು ಲೇಖನವೂ ಅರಿವು ಮೂಡಿಸುವಂತಿದೆ. ಗೊತ್ತಿದ್ದೋ ಗೊತ್ತಿಲ್ಲದೆಯೋ 'ಪ್ರತಿದಿನ ಬದುಕಿನಲ್ಲಿ ನಡೆಯುವ ತಪ್ಪುಗಳೆಷ್ಟು " ಎನ್ನುವುದರತ್ತ ಬೆಳಕು ಚೆಲ್ಲಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಎಲ್ಲ ಮತ್ತು ಹೇಗೆ ತಿದ್ದಿಕೊಳ್ಳಬೇಕು ಎನ್ನುವುದನ್ನು ಸರಳವಾಗಿ ಮನದೊಳಗೆ ನಾಟುವಂತೆ ತಿಳಿಸಿದ್ದಾರೆ. ಗಿಲೀಶ್ ಕುಮಾರ್ ರವರಿಗೆ ಶುಭವಾಗಲಿ ಮತ್ತು ಅವರಿಂದ ಇನ್ನಷ್ಟು ಇಂತಹ ಕೃತಿಗಳು ಮೂಡಿಬರಲಿ ಎಂದು ಹಾರೈಸಿದ್ದಾರೆ.
ಗಿರೀಶ್ ಕುಮಾರ್ ಎಚ್.ಆರ್. ಹುಟ್ಟಿದ್ದು ಹೊಳೇನರಸೀಪುರದಲ್ಲಿ ತಾಯಿ - ಸತ್ಯಭಾಮ, ತಂದೆ- ರಂಗನಾಥ. ವೃತ್ತಿಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿರುವ ಗಿರೀಶ್ ಕುಮಾರ್ ಪ್ರವೃತ್ತಿಯಾಗಿ ಸಾಹಿತ್ಯ ಕೃಷಿ ಮಾಡುತ್ತಿದ್ದಾರೆ. ಪ್ರಕಟಿತ ಕೃತಿಗಳು: ನಿರೀಕ್ಷೆ (ಪ್ರಾಸಬದ್ಧ ಕವಿತೆಗಳು) ಬನ್ನಿ ಒಮ್ಮೆ ಪ್ರಯತ್ನಿಸೋಣ(ಲೇಖನ ಸಂಕಲನ) ...
READ MORE