ಲೇಖಕ ಗಂಗಾಧರ ರಾವ್ ಅವರ ಭೌತ ಶಾಸ್ತ್ರೀಯ ವಿಶ್ಲೇಷಣೆ ‘ದೇವರು ಮತ್ತು ವಿಶ್ವ’. ಈ ಕೃತಿಗೆ ಆರ್ಷ ವಿದ್ಯಾಕೇಂದ್ರದ ಸಿ.ವಿ.ಗಿರಿಧರ ಶಾಸ್ತ್ರೀ ಅವರು ಮುನ್ನುಡಿ ಬರೆದಿದ್ದಾರೆ. ಪುಸ್ತಕದ ಒಳಪುಟದಲ್ಲಿ ದೇವರು, ದೇಶ-ಕಾಲ, ಅಸ್ಥಿರ ವಿಶ್ವ, ಕಣತರಂಗ ದ್ವಂದ್ವ ಮೂಲಭೂತಕಣಗಳು ಮತ್ತು ನಿಸರ್ಗದಲ್ಲಿನ ಬಲಗಳು, ಕಪ್ಪುರಂದ್ರಗಳು, ವಿಶ್ವದ ಮೂಲ ಮತ್ತು ಭವಿಷ್ಯ, ಉಪಸಂಹಾರ ಎಂಬ ಶೀರ್ಷಿಕೆಗಳಿವೆ.
ಲೇಖಕ ಡಾ. ಗಂಗಾಧರ ರಾವ್ ಅವರು ದಿವಂಗತ ಮಾರ್ಪಳ್ಳಿ ರಾಮದಾಸ ರಾವ್ ಮತ್ತು ಲಕ್ಷ್ಮೀಬಾಯಿ ಅವರ ಆರನೆಯ ಪುತ್ರರು. ಇವರು ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಪದವೀಧರರಾಗಿದ್ದು ಹೀಟ್ ಇಂಜಿನಿಯರಿಂಗ್‌ನಲ್ಲಿ ಪವರ್ ಸ್ನಾತಕೋತ್ತರ ಪದವಿ ಪಡೆದಿರುತ್ತಾರೆ. ಇವರು ಪರ್ಯಾಯ ಇಂದನ ಕ್ಷೇತ್ರದಲ್ಲಿ ಕೈಗೊಂಡ ಸಂಶೋಧನೆಗೆ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಸುರತ್ಕಲ್ ಸಂಸ್ಥೆಯು ಇತ್ತೀಚೆಗೆ ಪಿಎಚ್.ಡಿ. ಪದವಿ ನೀಡಿ ಗೌರವಿಸಿರುತ್ತದೆ. ಪ್ರಸ್ತುತ ಇವರು ಮಂಗಳೂರಿನ ವಳಚ್ಚಿಲ್‌ನಲ್ಲಿರುವ ಶ್ರೀನಿವಾಸ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಲೇಖಕರಿಗೆ ಅಧ್ಯಾತ್ಮ ಕ್ಷೇತ್ರದಲ್ಲಿ ಹೆಚ್ಚಿನ ಒಲವಿದ್ದು 'ದೇವರು ಮತ್ತು ವಿಶ್ವ ಎಂಬ ಈ ಕೃತಿಯು ...
READ MORE