“ಆಡಿದ ಮಾತು ನನಗೇ ಆಡಿಕೊಂಡ ಮಾತಾಗಿರುವಂತೆ’ ಬರೆಯುವ ಅನಂತಮೂರ್ತಿಯವರ ಸೃಜನಕ್ರಿಯೆಯಲ್ಲಿ ಒಂದು ಮ್ಯಾಜಿಕ್ ಇದೆ. ಇದನ್ನು ’ಸಂವಾದಶೀಲತೆ' ಎನ್ನಬಹುದೇನೋ, ಅದು ಓದುಗರನ್ನು/ಕೇಳುಗನನ್ನು ಸುಮ್ಮನೆ ಓದಿಕೊಳ್ಳಲು ಬಿಡದೆ ಅವನನ್ನೂ ಒಳಗೊಳಿಸಿಕೊಂಡು ಮುಂದುವರೆಯುತ್ತದೆ. ಬಹುಶಃ ಇದರಿಂದಾಗಿಯೇ ಅವರ ಲೇಖನಗಳೆಲ್ಲವೂ ಅವರ ಸೃಜನಶೀಲ ಕೃತಿಗಳ ಮುಂದುವರಿಕೆಯಾಗಿಯೋ, ಅದರ ಹಿನ್ನೆಲೆಯಾಗಿಯೇ ಕಾಣಿಸುತ್ತದೆ.
ಆರು ದಶಕಗಳ ತಮ್ಮ ಬರೆವಣಿಗೆಯ ಅವಧಿಯಲ್ಲಿ ಕನ್ನಡದ ಎಲ್ಲ ಮುಖ್ಯ ವಾಗ್ವಾದಗಳನ್ನು ಹುಟ್ಟು ಹಾಕಿದ ಖ್ಯಾತಿ ಅನಂತಮೂರ್ತಿ ಅವರದ್ದು. ಈ ವಾಗ್ವಾದಗಳು ರೂಪುಗೊಳ್ಳಲು ಬಹಳ ಮುಖ್ಯ ಕಾರಣ ಮೊದಲೇ ಹೇಳಿದಂತೆ ಅನಂತಮೂರ್ತಿಯವರ ’ಪೊಲಿಟಿಕಲೀ ಕರೆಕ್ಟ್’ ಆಗಿ ಇರದ ನಿಲುವುಗಳು. ಒಂದೊಮ್ಮೆ ಡಾ. ಆಶಾದೇವಿಯವರು ಗುರುತಿಸಿದಂತೆ ತನ್ನ ಕಾಲದ ಅಪ್ರಿಯ ಸತ್ಯಗಳಿಗೆ ಎದುರಾಗುವುದೇ ತನ್ನ ಸಮುದಾಯದ ಸೌಷ್ಠವವನ್ನು ಕಾಯುವ ಬಗೆ ಎಂದು ಗಾಢವಾಗಿ ನಂಬಿರುವ ವ್ಯಕ್ತಿ ಅನಂತಮೂರ್ತಿ. ಹೀಗೆ ಅಪ್ರಿಯ ಸತ್ಯಗಳಿಗೆ ಅವರು ಎದುರಾಗಿರುವ ಬಗೆಯ ಆಯ್ಕೆ ಮಾದರಿಗಳು ಇದರ ಜೊತೆಯಲ್ಲೇ ತನ್ನ ಪೂರ್ವಸೂರಿಗಳು, ಸಮಕಾಲೀನರು ಮತ್ತು ಕಿರಿಯರ ಬರೆಹಗಳಿಗೆ ಅವರು ಪ್ರತಿಕ್ರಿಯಿಸಿದ ಬಗೆಯನ್ನು ಹೇಳುವ ಕೆಲವು ಬರೆಹಗಳೂ ಇಲ್ಲಿವೆ.
ಕಥೆ-ಕಾದಂಬರಿ ಮತ್ತು ವೈಚಾರಿಕ ಚಿಂತನೆಗಳ ಮೂಲಕ ಕನ್ನಡ- ಭಾರತದ ಸಾಹಿತ್ಯ-ಸಾಂಸ್ಕೃತಿಕ ಚಿಂತನೆಯನ್ನು ಶ್ರೀಮಂತಗೊಳಿಸಿದವರು ಯು.ಆರ್. ಅನಂತಮೂರ್ತಿ. ತಂದೆ ಉಡುಪಿ ರಾಜಗೋಪಾಲಾಚಾರ್ಯ ತಾಯಿ ಸತ್ಯಮ್ಮ. ತೀರ್ಥಹಳ್ಳಿಯ ಮೇಳಿಗೆಯಲ್ಲಿ 1932ರ ಡಿಸೆಂಬರ್ 21 ಜನಿಸಿದರು. ದೂರ್ವಾಸಪುರದಲ್ಲಿ ಸಾಂಪ್ರದಾಯಿಕ ಪದ್ಧತಿಯಲ್ಲಿ ಸಂಸ್ಕೃತ ಕಲಿತು ಶಾಲಾ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿ ಪಡೆದು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು. ಬರ್ಮಿಂಗ್ ಹ್ಯಾಂ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ (1966) ಪದವಿ ಪಡೆದರು. ಹಾಸನದ ಕಾಲೇಜಿನಲ್ಲಿ ಅಧ್ಯಾಪಕ (1956) ರಾದ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ನಂತರ ಕೇರಳದ ಮಹಾತ್ಮಗಾಂಧಿ ವಿಶ್ವವಿದ್ಯಾಲಯದ ಕುಲಪತಿ (1987-91) ಗಳಾಗಿ ...
READ MORE