ಡಿ. ಎಸ್. ನಾಗಭೂಷಣ ಅವರ `ಇದು ಭಾರತ! ಇದು ಭಾರತ!!, ಸಮಾಜವಾದಿ ಸಂಕಥನಗಳು-2’ ಕೃತಿಯು ಲೇಖನಗಳ ಸಂಕಲನವಾಗಿದೆ. ಬಜೆಟ್ ಬೂಟಾಟಿಕೆ, ರಾಜ್ ಕುಮಾರ್ ಎಂಬ ಪವಾಡ, ಅವನತಿಗೊಳ್ಳುತ್ತಿರುವ ನಮ್ಮ ಸಾಮಾಜಿಕ ಚಳುವಳಿಗಳು, ನಾರಾಯಣಮೂರ್ತಿ ಮಾದರಿ: ಬಾಣಲೆಯಿಂದ ಬೆಂಕಿಗೆ, ಮುಳುಗುತ್ತಿರುವ ಆದರೆ ಮುಳುಗಬಾರದ ಹಡಗು: ಕಾಂಗ್ರೆಸ್, ಪರ್ಯಾಯ ರಾಜಕಾರಣದ ಸಾಧ್ಯತೆಗಳು, ಇದು ಭಾರತ! ಇದು ಭಾರತ!!, ಮಾಧ್ಯಮಗಳ ಮಾಯಾಬಜಾರ್, ‘ಮಾಯಾವತಿ ವಿಜಯದ’ ಹಿಂದಿನ ಸತ್ಯಗಳು, ‘ಅನುದೇವಾ, ಜಾತಿ ವ್ಯವಸ್ಥೆ ಕುರಿತ ಹೊಸ ನೋಟದತ್ತ, ಅವನತಿಗೊಳ್ಳುತ್ತಿರುವ ಸಂವಾದ ಸಂಸ್ಕೃತಿ, ರೈತರ ಆತ್ಮಹತ್ಯೆ: ತುಕ್ಕು ಹಿಡಿದ ಚರ್ಚೆ, ಇನ್ನೆಲ್ಲಿ ಆ ಶಾಪ: ಆ ಬೆಳಕು, ಇಂದು ಕಡಿದಾಳು ಶಾಮಣ್ಣ... ನಾಳೆ!, ಬುದ್ಧ ಮತ್ತು ಹಿಂದೂ ಧರ್ಮ: ಕೆಲವು ಚಿಂತನೆಗಳು ಸೇರಿದಂತೆ ಹಲವಾರು ಅಧ್ಯಯನಗಳನ್ನು ಈ ಕೃತಿಯು ಒಳಗೊಂಡಿದೆ.
ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಡಿ.ಎಸ್.ನಾಗಭೂಷಣ ಅವರು 1952 ಫೆಬ್ರವರಿ 1 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲ್ಲೂಕಿನ ತಿಮ್ಮಸಂದ್ರದಲ್ಲಿ ಜನಿಸಿದರು. ದೆಹಲಿ ಆಕಾಶವಾಣಿಯಲ್ಲಿ ಕನ್ನಡ ವಾರ್ತಾ ವಾಚಕರಾಗಿ1975ರಿಂದ 1981ರವರೆ ಸೇವೆ ಸಲ್ಲಿಸಿದ್ದ ಅವರು ಆನಂತರದಲ್ಲಿ ಸಹಾಯಕ ನಿಲಯ ನಿರ್ದೇಶಕರಾಗಿ 7 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. 2005ರಲ್ಲಿ ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದರು. ಓದು, ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡಿರುವ ಅವರು ‘ಇಂದಿಗೆ ಬೇಕಾದ ಗಾಂಧಿ’, ‘ಲೋಹಿಯಾ ಜೊತೆಯಲ್ಲಿ’, ‘ರೂಪ ರೂಪಗಳನು ಧಾಟಿ’, ‘ಕುವೆಂಪು ಒಂದು ಪುನರನ್ವೇಷಣೆ’, ‘ಕುವೆಂಪು ಸಾಹಿತ್ಯ ದರ್ಶನ’, ‘ಜಯ ಪ್ರಕಾಶ ನಾರಾಯಣ ...
READ MORE