ಲೇಖಕ-ವಿಮರ್ಶಕ ಎಸ್. ಆರ್.ವಿಜಯಶಂಕರ ಅವರ ವಿಮರ್ಶಾ ಲೇಖನಗಳ ಸಂಕಲನ-ನಿಧಾನ ಶ್ರುತಿ ಮತ್ತು ಇತರ ಲೇಖನಗಳು’ ಕೃತಿಯು ಸಂಸ್ಕ್ರತಿಯ ಕಥನವಾಗಿದೆ.
ಖ್ಯಾತ ವಿಮರ್ಶಕ ಡಾ. ಟಿ. ಪಿ ಅಶೋಕ ಅವರು ಬೆನ್ನುಡಿ ಬರೆದು ‘ ಲೇಖಕ ಕ್ರಮೇಣ ಕೃತಿನಿಷ್ಠ ಬರವಣಿಗೆಯ ಆಚೆಗೂ ತಮ್ಮ ಆಸಕ್ತಿಯನ್ನು ವಿಸ್ತರಿಸಿಕೊಂಡಿದ್ದಾರೆ. ಸಾಹಿತ್ಯ ಕೃತಿಯಿಂದ ಪಡೆದ ಅನುಭವವನ್ನು ಸಂಸ್ಕೃತಿಯ ಇತರ ಮುಖ್ಯ ಪ್ರಶ್ನೆಗಳೊಂದಿಗೆ ವಿಮರ್ಶಾ ಲೇಖನಗಳ ಸಂಕಲನ- ಜೋಡಿಸಿ ಕಥನಗಳನ್ನು ಕಟ್ಟುತ್ತಿದ್ದಾರೆ. ಹಾಗೆಯೇ ಇತರ ಜ್ಙಾನ ಶಿಸ್ತುಗಳಿಂದ ಮತ್ತು ಅನುಭವ ವಲಯಗಳಿಂದ ಸಾಹಿತ್ಯ ವಿಮರ್ಶೆಗೆ ಹೊಸ ಪರಿಕರಗಳನ್ನೂ ಒಳನೋಟಗಳನ್ನೂ ತರುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಾಹಿತಿ ಹಾಗೂ ಕವಿ ಜಯಂತ ಕಾಯ್ಕಿಣಿ ಅವರು ಕೃತಿಗೆ ಬೆನ್ನುಡಿ ಬರೆದು ‘ ವಿಮರ್ಶೆ ಎಂದರೆ ಜನಪ್ರಿಯ ದಿನ ಪತ್ರಿಕೆಗಳ ವಾರಾಂತ್ಯದ ಅರಿಂಚಿನ ಅರೆಮನಸ್ಕ ಟಿಪ್ಪಣಿ ಎಂಬಂಥ ಪರಿಸ್ಥಿತಿ ಬಲವಾಗುತ್ತಿರುವಾಗ, ಈಗಲೂ ಗಾಂಧಿ ಬಜಾರ್, ಸಂಚಯ, ದೇಶಕಾಲ, ನೀನಾಸಂ ಮಾತುಕತೆ ಇಂತಹ ಕಿರುಪತ್ರಿಕೆಗಳಲ್ಲಿ ತೀವ್ರ ಮುತುವರ್ಜಿಯಿಂದ, ಹೊಣೆಗಾರಿಕೆಯಿಂದ ಬರೆಯುತ್ತಿರುವ ವಿಮರ್ಶಕರಲ್ಲಿ ವಿಜಯಶಂಕರ ಕೂಡಾ ಒಬ್ಬರು’ ಎಂದು ಪ್ರಶಂಸಿಸಿದ್ದಾರೆ.
ಸಾಹಿತಿ ಎನ್.ವಿದ್ಯಾಶಂಕರ್ ಅವರು, ‘ವಿಜಯಶಂಕರ ಅವರ ಇಲ್ಲಿನ ಬರಹಗಳು ಪ್ರಜಾಪ್ರಭುತ್ವದ ಸಾಂಸ್ಥಿಕ, ನೈತಿಕತೆಯನ್ನು ಸಾಮುದಾಯಿಕ ಜವಾಬ್ದಾರಿಗಳನ್ನು ಹಾಗೂ ವೈಯುಕ್ತಿಕ ಆದರ್ಶಗಳನ್ನು ಉಳಿಸುವ ಅವುಗಳ ಬಗ್ಗೆ ತಿಳಿವಳಿಕೆಯನ್ನು ವಿಸ್ತರಿಸುವ ದಿಕ್ಕಿನಲ್ಲಿ ಮಾಡಿರುವ ಪ್ರಯತ್ನವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಎಸ್. ಆರ್. ವಿಜಯಶಂಕರ್ ಒಬ್ಬ ವಿಮರ್ಶಕರು. ಬೆಂಗಳೂರಿನಲ್ಲಿ ವಾಸವಿರುವ ಅವರು, ಸಾಹಿತ್ಯ , ಸಂಸ್ಕೃತಿ, ವಿಮರ್ಶಾ ಬರಹಗಳಿಂದ ಕನ್ನಡ ಓದುಗರಿಗೆ ಪರಿಚಿತರಾಗಿದ್ದಾರೆ. ಇಂಟೆಲ್ ಟೆಕ್ನಾಲಜಿ ಯಲ್ಲಿ ದಕ್ಷಿಣ ಏಷ್ಯಾದ ಸಂವಹನ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು, ಜನಪ್ರಿಯ ನಿಯತಕಾಲಿಕೆಗಳಲ್ಲಿ ಲೇಖನಗಳನ್ನೂ ಅಂಕಣಗಳನ್ನೂ ಬರೆಯುತ್ತಾ ಬಂದಿದ್ದಾರೆ. ಇತ್ತೀಚೆಗೆ ಅವರು ತಮ್ಮ ಹೆಚಿನ ಬರಹಗಳನ್ನು ಸಾಹಿತ್ಯಿಕ ಕಿರುಪತ್ರಿಕೆಯಲ್ಲಿ ಪ್ರಕಟಿಸುತ್ತಿದ್ದಾರೆ. ಹಿಂದಿನ ಕೃತಿಗಳ ಮರು ಓದುಗರಿಗೆ ಗಮನ ಕೊಡುತ್ತಿರುವ ವಿಜಯ ಶಂಕರ್, ಕವಿ ಗೋಪಾಲಕೃಷ್ಣ ಅಡಿಗರ ಮರು ಓದಿನ 'ಪ್ರತಿಮಾ ಲೋಕ', ಕೃತಿಯನ್ನು ಸಂಪಾದಿಸಿದ್ದಾರೆ. ...
READ MORE