‘ಶಿವರಾಮ ಕಾರಂತರ ಲೇಖನಗಳು ಸಂಪುಟ-8’ ಕನ್ನಡದ ಬಹುಮುಖ್ಯ ಲೇಖಕರಲ್ಲಿ ಒಬ್ಬರಾದ ಶಿವರಾಮ ಕಾರಂತರ ಸೃಜನಶೀಲ ಬಿಡಿಬರಹಗಳ ಸಂಕಲನ. ಈ ಕೃತಿಯನ್ನೂ ಲೇಖಕಿ ಮಾಲಿನಿ ಮಲ್ಯ ಅವರು ಸಂಪಾದಿಸಿದ್ದಾರೆ. ಇಲ್ಲಿ ಹರಟೆ, ವಿಡಂಬನೆಗಳು, ಹಾಸ್ಯ, ಚಟೂಕ್ತಿಗಳು, ಸಣ್ಣಕತೆಗಳು, ನಾಟಕಗಳು ಎಂಬ ಮೂರು ವಿಭಾಗಗಳಲ್ಲಿ ಸುಮಾರು 63 ಲೇಖನಗಳು ಸಂಕಲನಗೊಂಡಿವೆ. ಅವು ಶಿವರಾಮ ಕಾರಂತರ ಸೃಜನಶೀಲ ಬರಹಗಳಿಗೆ ಸಾಕ್ಷಿ ನುಡಿಯುತ್ತವೆ.
ಶಿವರಾಮ ಕಾರಂತರ ಬದುಕು ಬರಹಗಳನ್ನು ಕನ್ನಡ ಓದುಗರಿಗೆ ಉಣಬಡಿಸಿ, ಕಾರಂತರ ವೈಚಾರಿಕ ನೆಲೆ, ಜೀವನ ಪ್ರೀತಿಯನ್ನು ಮತ್ತಷ್ಟು ಅರ್ಥೈಸಿಕೊಳ್ಳುವಲ್ಲಿ ಕೊಡುಗೆ ನೀಡಿದವರು ಕಾದಂಬರಿಗಾರ್ತಿ ಮಾಲಿನಿ ಮಲ್ಯ .ಮೂಲತಃ ಉಡುಪಿಯವರು. ಭಾರತೀಯ ಜೀವವಿಮಾನಿಗಮದ ನಿವೃತ್ತ ಉದ್ಯೋಗಿ. ಕೃತಿಗಳು: ನಾನು ಕಂಡ ಕಾರಂತರು (ವ್ಯಕ್ತಿಚಿತ್ರ), ಗೊಂದಲಪುರದ ನಿಂದಲರು (ಕಾದಂಬರಿ), ದಾಂಪತ್ಯ ಗಾಥೆ (ಕಿರುಕಾದಂಬರಿ), ಶಿವರಾಮಕಾರಂತರ ಕಿನ್ನರಲೋಕ (ಲೇಖನ ಸಂಗ್ರಹ), ಚಿಣ್ಣರ ಲೋಕದಲ್ಲಿ ಕಾರಂತರು ಭಾಗ 1 ಮತ್ತು 2, ಸಾಹಿತ್ಯೇತರ ಕಾರಂತರು, ಕಾರಂತ ಉವಾಚ, ’ಶಿವರಾಮ ಕಾರಂತರ ವಾಙ್ಮಯ ವೃತ್ತಾಂತ, ಶಿವರಾಮ ಕಾರಂತರ ಕೃತಿ ಕೈಪಿಡಿ, ಶಿವರಾಮ ಕಾರಂತರ ಲೇಖನಗಳು-8 ಸಂಪುಟಗಳು, ಪಕ್ಷಿಗಳ ಅದ್ಭುತ ...
READ MORE