ಕಂಡದ್ದು ಕಾಡಿದ್ದು ಸಮಾಜವಾದಿ ಸಂಕಥನಗಳ ಪುಸ್ತಕವನ್ನು ಲೇಖಕ ಡಿ.ಎಸ್. ನಾಗಭೂಷಣಸ್ವಾಮಿ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ ಎಲ್ಲ ತರಹದ ಸಾಹಿತ್ಯಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಬರಹಗಳಿವೆ. ಹಾಗಾಗಿ ಇದನ್ನು ಸಮಾಜವಾದಿ ಸಂಕಥನಗಳು ಎಂದು ಲೇಖಕರು ಕರೆದಿದ್ದಾರೆ. ದಿನನಿತ್ಯದ ಬದುಕಿನ ಅನುಭವಗಳ ಮೇಲೆ ನಿರಂತರ ಪುನರಾವಿಷ್ಕರಿಸಿಕೊಳ್ಳುತ್ತಿರುವ ನೋಟ ಕ್ರಮಗಳನ್ನು ಈ ಕೃತಿಯಲ್ಲಿ ಕಾಣಬಹುದಾಗಿದೆ. ಈ ಸಂಗ್ರಹದ ಅನೇಕ ಲೇಖನಗಳು ಸಮಕಾಲೀನ ವಿದ್ಯಮಾನಕ್ಕೆ ಸಂಬಂಧಿಸಿದರೆ ಕೆಲವು ಲೇಖನಗಳು ದಲಿತ ಮತ್ತು ರೈತ ಚಳುವಳಿಗಳಿಗೆ ಸಂಬಂಧಿಸಿದ್ದಾಗಿವೆ. ಕವಿತೆಗಳತ್ತ ಸಾಗುವ ಮುನ್ನ, ಕಾದಂಬರಿಕಾರ ಗೆಳೆಯರೊಬ್ಬರಿಗೆ ಪತ್ರ, ದೇವನೂರರ ಕನ್ನಡ ಶಿಕ್ಷಣಪರ ಪ್ರತಿಭಟನೆ ಕುರಿತು, ರಾಜಕೀಯ ವಾರಸುದಾರಿಕೆಯೂ,ಒಂದಿಷ್ಟು ಪತ್ರಗಳು, ಅನಂತಮೂರ್ತಿ ಎಂಬ ವಿಶಿಷ್ಟ ವಿದ್ಯಮಾನ, ಅಣ್ನಾ ಹಾಜಾರೆ ಆಂದೋಲನ, ಹಲವು ಪ್ರಶ್ನೆಗಳು ಮತ್ತು ಸಂಗತಿಗಳು ,ಮುಂತಾದ ಪ್ರಬಂಧಗಳನ್ನು ಈ ಪುಸ್ತಕವು ಒಳಗೊಂಡಿದೆ.
ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಡಿ.ಎಸ್.ನಾಗಭೂಷಣ ಅವರು 1952 ಫೆಬ್ರವರಿ 1 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲ್ಲೂಕಿನ ತಿಮ್ಮಸಂದ್ರದಲ್ಲಿ ಜನಿಸಿದರು. ದೆಹಲಿ ಆಕಾಶವಾಣಿಯಲ್ಲಿ ಕನ್ನಡ ವಾರ್ತಾ ವಾಚಕರಾಗಿ1975ರಿಂದ 1981ರವರೆ ಸೇವೆ ಸಲ್ಲಿಸಿದ್ದ ಅವರು ಆನಂತರದಲ್ಲಿ ಸಹಾಯಕ ನಿಲಯ ನಿರ್ದೇಶಕರಾಗಿ 7 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. 2005ರಲ್ಲಿ ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದರು. ಓದು, ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡಿರುವ ಅವರು ‘ಇಂದಿಗೆ ಬೇಕಾದ ಗಾಂಧಿ’, ‘ಲೋಹಿಯಾ ಜೊತೆಯಲ್ಲಿ’, ‘ರೂಪ ರೂಪಗಳನು ಧಾಟಿ’, ‘ಕುವೆಂಪು ಒಂದು ಪುನರನ್ವೇಷಣೆ’, ‘ಕುವೆಂಪು ಸಾಹಿತ್ಯ ದರ್ಶನ’, ‘ಜಯ ಪ್ರಕಾಶ ನಾರಾಯಣ ...
READ MORE