ಮೌನದ ಚಿಪ್ಪಿನೊಳಗೆ

Author : ಧಾರಿಣಿ ಮಾಯಾ

Pages 146

₹ 180.00




Year of Publication: 2022
Published by: ಸಾಹಿತ್ಯಲೋಕ ಪಬ್ಲಿಕೇಷನ್ಸ್‌
Address: #745, 12ನೇ ಮುಖ್ಯ ರಸ್ತೆ,ರಾಜಾಜಿನಗರ ಬೆಂಗಳೂರು 560010

Synopsys

ಮೌನದ ಚಿಪ್ಪಿನೊಳಗೆ ಧಾರಿಣಿ ಮಾಯಾ ಅವರ ಕೃತಿಯಾಗಿದೆ. ಬದಲಾದ ಕಾಲ ಮತ್ತು ಬದಲಾದ ಮನಸ್ಥಿತಿಗಳ ನಡುವೆ ಬದಲಾಗದ ಸ್ತ್ರೀತ್ವದ ಇರುವಿಕೆ ಕುರಿತ ಪ್ರಶ್ನೆಗಳು ಈ ಬರಹಗಳ ಮೂಲ ಧಾತುವಾಗಿದೆ. ಒಂದಕ್ಕೊಂದು ಅದರ ಹಿಂದಿನ ಭಾಗದ ಲೇಖನದ ಮುನ್ನಡೆಯುವಿಕೆಯ ಸರಣಿ ಎನ್ನಿಸುವ ಇಲ್ಲಿನ ಲೇಖನಗಳ ಮತ್ತೊಂದು ಗುಣ ಎಂದರೆ ಸಂವಾದೀ ರೂಪದ, ರಂಪ ರಚ್ಚೆ ರಗಳೆ ಎನಿಸದ ಪಿಸುಮಾತು. ಇಡಿ ಬರಹ ಮಾಲೆಯ ಹಿಂದಿನ ಟ್ಯಾಗ್ ಲೈನ್ ಎಂದರೆ ‘ಮೌನ ಕೊಲ್ಲುತ್ತದೆ.’ ಯಾರನ್ನು ಕೊಲ್ಲುತ್ತದೆ ಎಂಬ ಪ್ರಶ್ನೆಗೆ ಉತ್ತರ ಹುಡುಕ ಹೊರಟರೆ ಅದು ಇಡೀ ವ್ಯವಸ್ಥೆಯತ್ತ ಬೆರಳು ಮಾಡಿ ತೋರಿಸುತ್ತದೆ. ಅವಳ ಮೌನ ಅವಳ ಇರುವಿಕೆಯನ್ನು ಮಾತ್ರವಲ್ಲದೆ ಜಗತ್ತಿನ ಆಡಬೇಕಾದ ಮಾತು ಮತ್ತು ಕೇಳಬೇಕಾದ ಪ್ರಶ್ನೆ ಅದು ಹಿಡಿದು ಕೊಡಬೇಕಾದ ಸತ್ಯವನ್ನೂ ಕೊಲ್ಲುತ್ತದೆ. ಇದನ್ನು ಧಾರಿಣಿ ಅವರು ಬಹಳ ಸೂಕ್ಷಮಾಗಿ ಅನಾವರಣ ಮಾಡುತ್ತಾರೆ.ಎಂದು ವಾಸುದೇವ ನಾಡಿಗ್ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಧಾರಿಣಿ ಮಾಯಾ

ಧಾರಿಣಿ ಮಾಯಾ ಅವರು ಮೈಸೂರಿನ ಪತ್ರಿಕೋದ್ಯಮ ವಿಭಾಗದಲ್ಲಿ ಪದವಿ ಹಾಗೂ ಇಂಗ್ಲೀಷ್ ವಿಭಾಗದಲ್ಲಿ ಸ್ನಾತ್ತಕೋತ್ತರ ಪದವಿ ಪಡೆದಿದ್ದು, ಓದು- ಬರಹದಲ್ಲಿ ಆಸಕ್ತಿ, ಬರವಣಿಗೆಯನ್ನು ಪ್ರಾರಂಭಿಸಿ ಹವ್ಯಾಸಿ ಬರಹಗಾರ್ತಿಯಾಗಿ, ಸಾಹಿತ್ಯ ಕಣಜವು ಕಥೆ, ಕವನ, ಲೇಖನ ಹಾಗೂ ಲಲಿತ ಪ್ರಬಂಧಗಳ ಪ್ರಕಾರಗಳನ್ನು ಒಳಗೊಂಡಿದೆ. ಬಹುತೇಕ ಬರಹಗಳು ಭೂಮಿಕಾ, ಸುಧಾ, ತರಂಗ, ವಿಶ್ವವಾಣಿ, ವಿಜಯ ಕರ್ನಾಟಕ, ಮಂಗಳ, ಕರ್ಮವೀರ, ಹಾಗೂ ವಿನಯವಾಣಿ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. 'ನೇಯ್ದೆನುಡಿ' ಎಂಬ ಮಾಸಿಕ ಪತ್ರಿಕೆಯಲ್ಲಿ ಇವರ ಅಂಕಣ ಬರಹಗಳು ಕಳೆದ ಮೂರು ವರ್ಷಗಳಿಂದ ಸತತವಾಗಿ ಮೂಡಿ ಬರುತ್ತಿವೆ. ಚಿತ್ರಕಲೆ, ವಾಲ್ ಪೇಂಟಿಂಗ್, ಅಡುಗೆ, ಸ್ಟ್ರೀಟ್ ಫೋಟೋಗ್ರಾಫಿ ...

READ MORE

Related Books