ಚಿತ್ತ ಬಿತ್ತಿಯ ಚಿತ್ತಾರಗಳು

Author : ಬಸವರಾಜ ಎಸ್. ಕಲೆಗಾರ

Pages 125

₹ 120.00




Year of Publication: 2020
Published by: ಮಾತೋಶ್ರೀ ಈರಮ್ಮ ವಡ್ಡನಕೆರಿ ಪ್ರಕಾಶನ
Address: ಕಲಬುರಗಿ

Synopsys

ಚಿತ್ತ ಬಿತ್ತಿಯ ಚಿತ್ತಾರಗಳು,  ಕಲಾವಿದ, ಲೇಖಕ ಬಸವರಾಜ ಎಸ್. ಕಲೆಗಾರ ಅವರ ದೃಶ್ಯಕಲೆಯ ಸಂಶೋಧನ ಲೇಖನಗಳ ಸಂಕಲನ. ಅವರು ಬೇರೆ ಬೇರೆ ಸಂದರ್ಭಗಳಲ್ಲಿ ಬರೆದ 19 ಲೇಖನಗಳು ಸಂಕಲನಗೊಂಡಿವೆ.

ಇಲ್ಲಿಯ ಲೇಖನಗಳಲ್ಲಿ ಆಳದ ಏಕ ಸೂತ್ರ ಇದೆ. ಕಲೆಯ ಬಗೆಗಿನ ಪ್ರಬುದ್ಧ ತಿಳಿವಳಿಕೆ ಮತ್ತು ಕಲಾವಿದನಿಗಿರಬೇಕಾದ ಸಾಮಾಜಿಕ ಬದ್ಧತೆ, ಇವು ಲೇಖನಗಳಿಗೂ ತೂಕ ತಂದುಕೊಟ್ಟಿದೆ. ಬ್ರಷ್ ಬಳಸುವಲ್ಲಿ ಸಾಧಿಸಿಕೊಂಡಿರುವ ಪರಿಣಿತಿಯನ್ನು ಪೆನ್ನು ಬಳಸುವುದರಲ್ಲಿಯೂ ಸಮರ್ಥವಾಗಿ ದುಡಿಸಿಕೊಂಡಿದ್ದಾರೆ.

 

About the Author

ಬಸವರಾಜ ಎಸ್. ಕಲೆಗಾರ
(06 July 1984)

ಡಾ. ಬಸವರಾಜ ಎಸ್. ಕಲೆಗಾರ ಮೂಲತಃ ಯಾದಗಿರಿ ಜಿಲ್ಲೆಯವರು. ಕವಿ, ಲೇಖಕ, ಚಿತ್ರಕಲಾವಿದರು. ಎಂ.ವಿ.ಎ, ಎಂ.ಫಿಲ್, ಪಿಹೆಚ್.ಡಿ ಪದವೀಧರರು. ಹಂಪಿ ಕನ್ನಡ ವಿವಿಯಲ್ಲಿ ದೂರ ಶಿಕ್ಷಣ ನಿರ್ದೇಶನಾಯ ಮೂಲಕ ಪತ್ರಿಕೋದ್ಯಮ ಡಿಪ್ಲೋಮಾ ಪೂರ್ಣಗೊಳಿಸಿದ್ದಾರೆ. ಕರ್ನಾಟಕ ಶಿಲ್ಪಕಲಾ ಅಕಾಡೆಮಿಯಿಂದ 2015-16ನೇ ಸಾಲಿನ ವಿಶೇಷ ಘಟಕ ಯೋಜನೆಯಡಿ ಸಂಶೋಧನೆ ಕೈಗೊಂಡಿದ್ದು, ಸಂಶೋಧನಾ ಅಧ್ಯಯನ ವಿಷಯ ‘ಸಗರನಾಡಿನ ಜನಪದ ಶಿಲ್ಪಿಗಳ ಕಲೆ ಮತ್ತು ಬದುಕು: ಒಂದು ಅಧ್ಯಯನ’ ಪ್ರಬಂಧ ಸಲ್ಲಿಸಿದ್ದಾರೆ. ಪ್ರಕಟಿತ ಕೃತಿಗಳು- ನೀ ಮರೆಯಾದ ಕ್ಷಣಗಳು, ಬೆಳಕು, ಸಂಗಣ್ಣ ಎಂ. ದೋರನಹಳ್ಳಿ ಕಲೆ ಮತ್ತು ಬದುಕು(ಸಂಶೋಧನೆ), ಕಲಾನ್ವೇಷಣೆ, ಚಿತ್ರಶಿಲೆಯಲ್ಲಿ ಬುದ್ಧ, ಗಡಿನಾಡ ಚಿತ್ರಶಾಲೆ, ದೃಶ್ಯ ...

READ MORE

Related Books