‘ಅಜ್ಞಾತ ಚಿತ್ತದತ್ತ ಒಂದು ಹೆಜ್ಜೆ’ ಡಾ.ಕೆ. ಎನ್. ಗಣೇಶಯ್ಯ ಅವರ ಲೇಖನ ಸಂಕಲನ. ಅರಿವು ಗೆದ್ದಷ್ಟೂ ಅದು ಅಜ್ಞಾತದ ಮುಂದೆ ಮಂಡಿಯೂರುತ್ತದೆ. ಕಾರಣ ಅಜ್ಞಾತದ ಕತ್ತಲು ಬಗೆದಷ್ಟೂ ದಟ್ಟವೂ ಅನಂತವೂ ಆಗುತ್ತದೆ. ನಮ್ಮ ಚಿತ್ತದ ಸುತ್ತ ಆವರಿಸಿಕೊಂಡಿರುವ ಅಜ್ಞಾತದ ಕತ್ತಲಿನೆಡೆಗೆ ಬೆಳಕು ಚೆಲ್ಲುವ ಒಂದೇ ದಾರಿ ಎಂದರೆ, ನಮ್ಮ ಚಿತ್ತದಿಂದಲೇ - ಅರಿಯಲು ಪ್ರಯತ್ನಿಸುವುದು. ಆಗ ಮೂಡುವ ಮಂದಬೆಳಕಲ್ಲಿ ಜೀವ ಜಗತ್ತಿನ ಅದ್ಭುತಗಳು ಮಬ್ಬು ಮಬ್ಬಾಗಿ ಕಾಣತೊಡಗುತ್ತವೆ.
ಅಸೂಯೆ, ದ್ವೇಷ ಮುಂತಾದವು ನಮ್ಮನ್ನು ಗೆದ್ದುಕೊಂಡಿರುವ ಪರಿ, ನಾವು ನಾವಲ್ಲ ಎಂಬ ಅಚ್ಚರಿ, ರಾವಣನಂತಹ ಶತ್ರುಗಳೇ ನಮ್ಮ ರಕ್ಷಕರಾಗಿರುವ ವೈಚಿತ್ರ್ಯ.... ಮುಂತಾದವುಗಳ ಅಸ್ಪಷ್ಟ ಪರಿಚಯವಾಗತೊಡಗುತ್ತದೆ. ನಮ್ಮ ಚಿತ್ರದ ಅಜ್ಞಾತದತ್ತ ಒಂದು ಹೆಜ್ಜೆ ನಡೆಯುವುದೇ ಇಲ್ಲಿನ ಲೇಖನಗಳ ಉದ್ದೇಶ.
ವೃತ್ತಿಯಿಂದ ಕೃಷಿ ವಿಜ್ಞಾನಿ ಆಗಿರುವ ಕೆ.ಎನ್. ಗಣೇಶಯ್ಯ ಅವರು ಮೂಲತಃ ಕೋಲಾರ ಜಿಲ್ಲೆಯವರು. ಕಳೆದ ೩೦ ವರ್ಷಗಳಿಂದ ತಳಿ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವ ಅವರು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು. ಪ್ರಾಣಿ ಮತ್ತು ಸಸ್ಯಗಳ ವರ್ತನೆಗೆ ಮೂಲಭೂತವಾದ ಜೀವವಿಕಾಸದ ತತ್ವಗಳನ್ನು ಅನ್ವೇಷಿಸುವುದು ಇವರ ಮತ್ತೊಂದು ಸಂಶೋಧನಾಸಕ್ತಿ. ಭಾರತದ ಪ್ರಮುಖ ಜೀವ ವೈವಿಧ್ಯ ತಾಣಗಳಲ್ಲಿನ ಸಸ್ಯಗಳ ಮತ್ತು ದೇಶದ ಜೀವ ಸಂಪತ್ತಿನ ಬಗ್ಗೆ ಇವರು ತಯಾರಿಸಿರುವ ಮಾಹಿತಿಯ ಖಜಾನೆಯ ಸಿ.ಡಿ.ಗಳು ಮತ್ತು ಅಂತರ್ಜಾಲ ಒಂದು ಅಪೂರ್ವ ಹೆಜ್ಜೆ. ಇನ್ನೂರಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧ ಬರೆದಿರುವ ಅವರು ಆರು ವೈಜ್ಞಾನಿಕ ಕೃತಿಗಳನ್ನು ...
READ MORE