‘ಡೇಟಾ ದೇವರು ಬಂದಾಯ್ತು’ ಕೃತಿಯು ಗುರುರಾಜ್ ಎಸ್. ದಾವಣಗೆರೆ ಅವರ ಲೇಖನಗಳ ಸಂಕಲನವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ನಾಗೇಶ ಹೆಗಡೆ ಅವರು, ಭಕ್ತ ಪ್ರಹ್ಲಾದನ ಎದುರು ಹಿರಣ್ಯಕಶ್ಯಪುವಿನ ಗರ್ಜನೆಯನ್ನು ನೆನಪಿಸಿಕೊಳ್ಳಿ. ‘ದೇವರು ಎಲ್ಲಿದ್ದಾನೆ? ನೀರಿನಲ್ಲಿ? ಗಾಳಿಯಲ್ಲಿ? ನಿನ್ನಲ್ಲಿ? ನನ್ನಲ್ಲಿ? ಈ ಕಂಬದಲ್ಲಿ?’ ಈ ಯುಗದ ಡೇಟಾ ದೇವರ ಬಗೆಗೂ ಅಂಥದೇ ಪ್ರಶ್ನೆಗಳನ್ನು ನೀವು ಮಕ್ಕಳಿಗೆ ಕೇಳಿ ನೋಡಿ: ‘ಹಾರುವ ಡ್ರೋನಲ್ಲಿ? ಪೇಸ್ ಮೇಕರಲ್ಲಿ? ವಾಷಿಂಗ್ ಮಷಿನ್ನಲ್ಲಿ? ಎಟಿಮ್ಮಲ್ಲಿ ?ಸಿಸಿ ಕ್ಯಾಮೆರವನ್ನು ಸಿಕ್ಕಿಸಿದ ಆ ಕಂಬದಲ್ಲಿ?’ ಪುಟ್ಟ ಪ್ರಹ್ಲಾದನ ಉತ್ತರವೇ ಈಗಿನ ಎಲ್ಲ ಮಕ್ಕಳದ್ದೂ ಆಗಿರುತ್ತದೆ. ಹೌದು, ಹೌದು, ಹೌದು, ಡೇಟಾ ದೇವರು ಅಲ್ಲೆಲ್ಲ ಬಂದಾಗಿವೆ. ಇಂದಿನ ಟೆಕ್ನಾಲಜಿಯ ಅಂತಹ ಹತ್ತಾರು ಮುಖಗಳನ್ನು ನಾವು ಈ ಪುಸ್ತಕದಲ್ಲಿ ಕಾಣುತ್ತೇವೆ. ನಾಳಿನ ಪೀಳಿಗೆಯನ್ನು ರೂಪಿಸುವ ಶಿಕ್ಷಕರಿಗೆ, ಇಂದಿನ ವಿದ್ಯಾರ್ಥಿಗಳಿಗೆ, ಅವರ ಪಾಲಕರಿಗೆ ಹಾಗೂ ಒಟ್ಟಾರೆ ಕನ್ನಡ ಓದುಗರಿಗೆ ಈಚೀಚಿನ ತಂತ್ರಜ್ಞಾನ ಲೋಕದ ಆಗುಹೋಗುಗಳ ಸ್ಥೂಲ ನೋಟ ಇಲ್ಲಿದೆ. ಇಲೆಕ್ಟ್ರಾನಿಕ್ಸ್, ಕಂಪ್ಯೂಟರ್, ಅಲ್ಗೊರಿದಮ್, ಬಿಗ್ ಡೇಟಾ, ರೊಬೊಟಿಕ್ಸ್ ನಿಂದ ಹಿಡಿದು ಬಾಹ್ಯಾಕಾಶ ತಂತ್ರಜ್ಞಾನದವರೆಗೆ ಎಲ್ಲೆಲ್ಲಿ ಏನೇನಾಗುತ್ತಿದೆ ಎಂಬುದನ್ನು ಅರಿಯ ಬಯಸುವವರಿಗೆ ಇದೊಂದು ಕೈಮರ ಆಗುವಂತಿದೆ ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಲೇಖಕ ಗುರುರಾಜ್ ಎಸ್. ದಾವಣಗೆರೆ ಅವರು ಮೂಲತಃ ದಾವಣಗೆರೆಯ ಹಲುವಾಗಿಲು ಗ್ರಾಮದವರು. ಗಣಿತ ಅಧ್ಯಾಪಕರು. ಬೆಂಗಳೂರಿನ ಪೂರ್ಣಪ್ರಜ್ಞಾ ಕಾಲೇಜಿನ ಪ್ರಿನ್ಸಿಪಾಲ್ ಆಗಿದ್ದಾರೆ. ಪ್ರಮುಖ ಪತ್ರಿಕೆಗಳಿಗೆ ವಿಜ್ಞಾನ -ತಂತ್ರಜ್ಞಾನ ಪರಿಸರ ಕುರಿತ ಬರಹ ಇವರ ಆಸಕ್ತಿ. ಪಕ್ಷಿವೀಕ್ಷಣೆ, ಆಕಾಶ ವೀಕ್ಷಣೆ, ವನ್ಯಜೀವಿ ಗಣತಿ, ಛಾಯಾಗ್ರಹಣ, ಟ್ರೆಕ್ಕಿಂಗ್, ಭಾಷಣ, ಚರ್ಚೆ-ಸಂವಾದಗಳಲ್ಲಿ ನಿರಂತರ ಭಾಗಿ, ಆಧುನಿಕ ವಿಜ್ಞಾನ-ತಂತ್ರಜ್ಞಾನ ಮತ್ತು ಸಮಕಾಲೀನ ಶೈಕ್ಷಣಿಕ ಚಿಂತನೆ ಮತ್ತು ಅನುಷ್ಠಾನಗಳ ಕುರಿತು ವಿಶೇಷ ಆಸಕ್ತಿ. ಕೃತಿಗಳು : ಡೇಟಾ ದೇವರು ಬಂದಾಯ್ತು ...
READ MOREಗುರುರಾಜ್ ಎಸ್ ದಾವಣಗೆರೆ ಅವರು ತಮ್ಮ ಕೃತಿಯಾದ "ಡೇಟಾ ದೇವರು ಬಂದಾಯ್ತು" ಕುರಿತು ಮಾತನಾಡಿದ್ದಾರೆ.