ನುಡಿ ಹಮ್ಮುಗೆ

Author : ಆನಂದ್ ಜಿ.

₹ 200.00




Published by: ಬನವಾಸಿ ಬಳಗ

Synopsys

ಲೇಖಕ ಆನಂದ್ ಜಿ. ಅವರ ಕೃತಿ ʻನುಡಿಹಮ್ಮುಗೆʼ- ಇದು ಕನ್ನಡಕ್ಕೊಂದು ಕೈದೀವಿಗೆ. ಪುಸ್ತಕದ ಬಗ್ಗೆ ಲೇಖಕರು, “ಈ ಪುಸ್ತಕದಲ್ಲಿ ಕನ್ನಡಕ್ಕೆ ಏಕಾಗಿ ನುಡಿಹಮ್ಮುಗೆ ಬೇಕು ಎಂಬುದನ್ನು ಚರ್ಚಿಸಲಾಗಿದೆ. ಅಲ್ಲದೇ ಇದುವರೆಗೆ ಕನ್ನಡದ ನುಡಿಹಮ್ಮುಗೆಯಲ್ಲಿ ನಡೆದ ಪ್ರಯತ್ನಗಳ ಬಗ್ಗೆ, ನಾಳೆಗಳಿಗೆ ಆಗಿರುವ ಸಿದ್ಧತೆಗಳ ಬಗ್ಗೆ ಚರ್ಚಿಸಿದ್ದೇನೆ. ನಂತರ ಕನ್ನಡದಲ್ಲಿ ನುಡಿಹಮ್ಮುಗೆಯನ್ನು ಹೇಗೆಲ್ಲಾ ಹಮ್ಮಿಕೊಳ್ಳಬಹುದು ಎಂಬುದರ ಕುರಿತಂತೆ ನನ್ನ ಆಲೋಚನೆಗಳನ್ನೂ, ಸಲಹೆಗಳನ್ನೂ, ನನಗೆ ಅನ್ನಿಸಿದ ವಿಧಾನಗಳನ್ನೂ ಮುಂದಿಟ್ಟಿದ್ದೇನೆ. ಮುಂದೊಮ್ಮೆ ಕನ್ನಡಿಗರು ಈ ವಿಷಯಗಳ ಬಗ್ಗೆ ಗಂಭೀರವಾಗಿ ಚರ್ಚಿಸಿ, ಸಮಾಲೋಚಿಸಿ ಸರಿಯಾದ ಗಟ್ಟಿಯಾದ ಯೋಜನೆಯೊಂದನ್ನು ಸಂಬಂಧಿಸಿದ ತಜ್ಞರುಗಳನ್ನೆಲ್ಲಾ ಸೇರಿಸಿಕೊಂಡು ರೂಪಿಸುತ್ತಾರೆ ಎನ್ನುವ ಆಶಾವಾದ ನನ್ನಲ್ಲಿದೆ” ಎಂದು ಹೇಳಿದ್ದಾರೆ.

About the Author

ಆನಂದ್ ಜಿ.

ಕನ್ನಡ ಭಾಷೆ-ಸಂಸ್ಕೃತಿಯ ಬಗ್ಗೆ ವಿಶೇಷ ಆಸಕ್ತಿ ಹಾಗೂ ಕಾಳಜಿ ಹೊಂದಿರುವ ಆನಂದ ಜಿ. ಅವರು ಬನವಾಸಿ ಬಳಗದ ಸಕ್ರಿಯ ಸದಸ್ಯರು. ಕನ್ನಡ-ಕರ್ನಾಟಕ ಕುರಿತು ಕೆಲವು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ನಮ್ಮ ಮೆಟ್ರೋ ಹಿಂದಿ ಬೇಡ, ಕನ್ನಡಿಗ ಮರೆವು ಅರಿವು, ಸ್ವತಂತ್ರ ಭಾರತದಲ್ಲಿ ಅತಂತ್ರ ಕರ್ನಾಟಕ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ...

READ MORE

Related Books