‘ಹೊಂಬೆಳಕು’ ಸುಧಾ ನಾಗೇಶ್ ಅವರ ಚಿಂತನ ಬರಹಗಳ ಸಂಕಲನವಾಗಿದೆ. ಇದಕ್ಕೆ ಸೂರ್ಯನಾರಾಯಣ ಭಟ್ ಪಿ ಎಸ್ ಅವರ ಬೆನ್ನುಡಿ ಬರಹವಿದೆ: ಹೊಂಬೆಳಕು ಅನ್ನುವ ಈ ಕೃತಿಯಲ್ಲಿ ಚಿಂತನ ಬರಹಗಳ ಒಂದು ಹೂಗುಚ್ಛವಿದೆ. ಜೀವನದ ನಾನಾ ಮುಖಗಳನ್ನು ಪ್ರತಿನಿಧಿಸುವ ಬರಹಗಳು ಇದರಲ್ಲಿ ಇದ್ದರೂ, ಮುಖ್ಯವಾಗಿ ಇಲ್ಲಿನ ಬರಹಗಳಲ್ಲಿ ಮಹಿಳೆ ಮತ್ತು ವಿದ್ಯಾರ್ಥಿಗಳ ಜನ ಜೀವನದೊಂದಿಗೆ ಬೆರೆತುಕೊಂಡ ಚಿಂತನೆಗಳು ಎದ್ದು ಕಾಣುತ್ತವೆ. ಒಬ್ಬ ಶಿಕ್ಷಕಿಯಾಗಿ ಮಕ್ಕಳನ್ನು ತಿದ್ದಿ ಸರಿದಾರಿಗೆ ಕೊಂಡು ಹೋಗುವ ಜವಾಬ್ದಾರಿಯ ಜೊತೆ ಒಬ್ಬ ಲೇಖಕಿಯಾಗಿ ಸಮಾಜದ ಓರೆ ಕೋರೆಗಳನ್ನು ಸರಿ ಮಾಡುವ ತುಡಿತವನ್ನು ಅವರ ಈ ಸಂಕಲನದಲ್ಲಿ ನೋಡಬಹುದು.
ಕವಯತ್ರಿ ಸುಧಾ ನಾಗೇಶ್ ಅವರು ಮೂಲತಃ ಮಂಗಳೂರಿನವರು. 'ಶಾರದಾವಾಣಿ' ಹಸ್ತಪತ್ರಿಕೆಯ ಸಂಪಾದಕಿ. ’ಮೂಡಲಮನೆ -ಹನಿ ಕವನಗಳು, ಹೃದಯರಾಗ, ಮಿನಿ ಎನ್‌ಸೈಕ್ಲೋಪೀಡಿಯ, ಹೀಗೆ ಸುಮ್ಮನೆ - ಹಾಸ್ಯ ಬರಹ, ಶಾರದಾವಾಣಿ - ಸಂಪಾದಿತ ಕೃತಿಗಳು. ’ಚುಟುಕಶ್ರೀ ಪ್ರಶಸ್ತಿ, ಹಾಸ್ಯ ಸರ್ಧೆಯಲ್ಲಿ ಬಹುಮಾನ, ಬೋಧನೋಪಕರಣ ಸರ್ಧೆಯಲ್ಲಿ ಎರಡು ಬಾರಿ ಬಹುಮಾನ ಪಡೆದಿದ್ದಾರೆ. ...
READ MORE