ಕರುಳ ಕೊರಳ ಹಾಡು

Author : ನಿಂಗಪ್ಪ ಮುದೇನೂರು

Pages 300

₹ 265.00




Year of Publication: 2022
Published by: ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ
Address: ಸರಸ್ವತಿ ಗೋದಾಮು, ಕಲಬುರಗಿ, -585101
Phone: 9731828999

Synopsys

ಲೇಖಕ ನಿಂಗಪ್ಪ ಮುದೇನೂರ ಅವರ ಲೇಖನಗಳ ಸಂಗ್ರಹ ‘ಕರುಳ ಕೊರಳ ಹಾಡು. ಕಲಬುರಗಿಯ ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನದ ಸಾಹಿತ್ಯಮಾಲಿಕೆಯಲ್ಲಿ ಮೂಡಿಬಂದ ಕೃತಿಯಿದು. ಒಂದಿಷ್ಟು ದೀರ್ಘವೇ ಎನ್ನಿಸಿದ ಆಯಾ ಕಾಲ,ಸಂದರ್ಭಗಳಲ್ಲಿ ಬರೆದ 30ಕ್ಕೂ ಹೆಚ್ಚು ಸಂಶೋಧನ ಬರಹಗಳುಳ್ಳ ಕೃತಿಯಿದು.

ಪ್ರೊ ಶಿವರಾಜ ಪಾಟೀಲ ಅವರು ಈ ಖೃತಿಗೆ ಬೆನ್ನುಡಿಯನ್ನು ಬರೆದಿದ್ದಾರೆ. ಅವರು ಹೇಳುವಂತೆ, ‘ಡಾ. ನಿಂಗಪ್ಪ ಮುದೇನೂರ ಅವರು ರಚಿಸಿದ ಸಂಶೋಧನಾತ್ಮಕವಾದ ಅತ್ಯಂತ ಶ್ರೇಷ್ಠ ದರ್ಜೆಯ ಪ್ರೌಢ ಪ್ರಬಂಧಗಳಾಗಿದೆ. ಈ ಕೃತಿಯ ಲೇಖನಗಳು ಸಂಶೋಧಕರಿಗೆ ಬುದ್ದಿ ಜೀವಿಗಳಿಗೆ ಆಹಾರವಾಗುತ್ತವೆ ಮತ್ತು ಅತ್ಯುತ್ತಮ ಆಕರ ಸಾಮಗ್ರಿಗಳಾಗಿವೆ. ಇವು ಏಕಕಾಲದಲ್ಲಿ ರಚಿತವಾಗದಿದ್ದರೂ, ಕಾಲಘಟ್ಟದಲ್ಲಿ ರಚನೆಯಾದರೂ, ಇದರಲ್ಲಿ ಒಂದು ಆಂತರಿಕ ಶಕ್ತಿಯಾಗಿ 'ದಲಿತತ್ವ ಉದ್ದಕ್ಕೂ ಕಾಣಿಸಿಕೊಂಡು, ಚಿಂತನಾ ಲಹರಿಯಾಗಿ ಹೊರ ಹೊಮ್ಮಿದೆ. ಶೂದ್ರತ್ವವು ಒಂದು ಸಿದ್ಧಾಂತವಾಗಿ ಕಾಣಿಸಿಕೊಂಡಿದೆ. ಬೆಂಕಿ ಬೆಳಕಾಗುವ ಪರಿ ಇದರಲ್ಲಡಗಿದೆ. ದತ ಸಂಸ್ಕೃತಿಯ ಬೇರು ಹುಡುಕುವ ವಿಶೇಷ ಕಣ್ಣಿದೆ. ಸಂಶೋಧನಾತ್ಮಕ ಲೇಖನಗಳು ಹೇಗಿರಬೇಕು? ಹೇಗೆ ಬರೆಯಬೇಕು ಯಾವ ತರಹ ಚಿಂತನಾ ಲಹರಿ ಇರಿಸಿಕೊಂಡು, ಹೇಗೆ ಲೇಖನಗಳಲ್ಲಿ ವಿಷಯ ಪ್ರತಿಪಾದಿಸಬೇಕೆಂಬುದಕ್ಕೆ ಇವು ಮಾದರಿಯಾಗಿದೆ. ಜನಪದ ಹಾಗೂ ದ್ರಾವಿಡ ಸಂಸ್ಕೃತಿಯ ಮೇಲೆ ಮೈಲಾರನೆಂಬ ದೈವೀಶಕ್ತಿಯ ಬೆಳಕು ಚೆಲ್ಲಿದ ಈ ಕೃತಿ ಶ್ರೇಷ್ಠ ದರ್ಜೆಯ ಚಿಂತನಗಳ ಮೌಲಿಕತೆಯ ಕೃತಿಯಾಗಿದೆ. ಮುದೇನೂರ ಒಬ್ಬ ಶ್ರೇಷ್ಠ ಸಂಶೋಧನಾತ್ಮಕ ಲೇಖಕರೆಂಬುದು ಈ ಕೃತಿಯಿಂದ ಸಾಬೀತಾಗುತ್ತದೆ’ ಎಂದಿದ್ದಾರೆ.

About the Author

ನಿಂಗಪ್ಪ ಮುದೇನೂರು
(01 June 1970)

ಲೇಖಕ, ಕವಿ ನಿಂಗಪ್ಪ ಮುದೇನೂರು ಅವರು ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕು ಮುದೇನೂರು ಗ್ರಾಮದಲ್ಲಿ 1970 ಜೂನ್‌ 01ರಂದು ಜನನ. ಸಾಹಿತ್ಯ ಮಾತ್ರವಲ್ಲದೆ ಸಂಗೀತದಲ್ಲಿಯೂ ಆಸಕ್ತಿ ಹೊಂದಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ಸಹಾಯಕ ಪ್ರಧ್ಯಾಪಕರಾಗಿ ಕಾರ್ಯನಿರ್ವಹಣೆ.  ಮಗುವಿನ ಧ್ಯಾನದಲ್ಲಿ, ಮಣ್ಣಿನ ಕವಿತೆ, ಕಡಲ ಕವಿತೆ, ನನ್ನ ಗಾಂಧಿ’ ಅವರ ಪ್ರಮುಖ ಕವನ ಸಂಕಲನಗಳು. ಜೀ.ಶಂ.ಪ ರವರ 'ಜನಪದ ಖಂಡಕಾವ್ಯಗಳು’, ಕುವೆಂಪು ಅವರ 'ಶೂದ್ರ ತಪಸ್ವಿ', ಜಾಗತೀಕರಣ ಮತ್ತು ಗಾಂಧಿ, ಸಂಸ್ಕೃತಿ ದರ್ಶನ, ಅಕ್ಷರ ಮತ್ತು ಅರಿವು ಅವರ ವಿಮರ್ಶಾ ಕೃತಿಗಳು. ‘ಬುರ್ರಕಥಾ ಈರಮ್ಮ: ಅಲೆಮಾರಿಯ ಆತ್ಮಕಥನ’ -  ದರೋಜಿ ಈರಮ್ಮ ಅವರ ಆತ್ಮಕಥನವನ್ನು ನಿರೂಪಿಸಿದ್ದಾರೆ. ಸಾಹಿತ್ಯದ ...

READ MORE

Related Books