’ಬಿಡಿ ಚಿತ್ರಗಳು’ ಪಾರ್ವತೀಶ ಬಿಳಿದಾಳೆ ಅವರ ಲೇಖನಗಳ ಸಂಕಲನವಾಗಿದೆ. ಈ ಸಂಕಲನದಲ್ಲಿ ಸಮಕಾಲೀನ ಮತ್ತು ಇತಿಹಾಸದ ಹಾಗೂ ಕೆಲ ವ್ಯಕ್ತಿಗಳ ಕುರಿತ ಬರಹಗಳಿವೆ. ವ್ಯಕ್ತಿ ಚಿತ್ರ, ದುರಂತ, ತಮಾಷೆ ಇತ್ಯಾದಿ ವಿಚಾರಗಳ ವಸ್ತುಗಳಾಗಿವೆ. ಹಾಗಾಗಿ ಇವು ಬಿಡಿಚಿತ್ರಗಳು. ಒಟ್ಟಾರೆಯಾಗಿ ಇದನ್ನು ಜೀವನಪ್ರೀತಿ ಪೊರೆಯುವ ಬರಹ ಅಂದುಕೊಂಡರು ಆಕ್ಷೇಪಣೆಯಿಲ್ಲ ಎನ್ನುತ್ತಾರೆ ಲೇಖಕರು.
ಈ ಕೃತಿಯಲ್ಲಿನ 27 ಶೀರ್ಷಿಕೆಗಳು ಹೀಗಿವೆ: ಬಾಂಬ್ ಬದಲು ಕೀಟ, ಮತ್ತೊಂದು 'ಇದು' ದುರಂತ ಬೇಡ, ಟೀಪೂ ವಂಶಸ್ಥೆ ನೂರ್ ಉನ್ನೀಸಾಳ ದುರಂತ ಕತೆ, ನನ್ನ 'ತಾಯಿ'ಗೆ ನೂರು ವರ್ಷ, ಮಕ್ಕಳು ದಾರಿ ತಪ್ಪಿದ್ದೆಲ್ಲಿ?, ಹೇ ಬಾಸ್ ಕಿಸ್ ಮೈ ಫುಟ್ ಹೈದರ್. ಒಡೆಯರ್ ಮೀಸೆ ಜಗಳ, ಚೇ ಇಂಡಿಯಾಗೆ ಬಂದಿದ್ದಾಗ, Ten Tiny Toe, ಅರುಣ ಕಿಡ್ನಾಪ್ ಆಗಿರಲಿಲ್ಲ..ಹಾಗಾದರೆ, ಸಫರ್ ಅಚ್ಛಾ ರಹಾ.. ಹಂಸಫರ್ ಅಚ್ಛಾ ರಹಾ, ಶಾಮಣ್ಣನ ಮೂರನೆ ಮಗಳು, ಸೆರೆಮನೆಯ ಬೆಂಕಿಕೆಂಡ, ಅರಮನೆಯ ಮಂಜುಗಡ್ಡೆ, ಹುತಾತ್ಮ ದಿನದಂದು ಮಹಾತ್ಮ ಹ.ಗೌಡರ ನೆನೆಯದಿದ್ದರೆ, ಅರವತ್ತು ರೂಪಾಯಿ ಕೂಲಿ ಕೆಲಸಕ್ಕೆ ಬಂದ ಸಿಟಿ ಪತ್ರಕರ್ತರು, ಕನಕಪುರದಲ್ಲಿ ಕಂಡ ಮನುಷ್ಯ ವ್ಯಾಪಾರ, ಖುದ್ ಮರೆ ತಕ್ ಖುದಾ ನಹಿ ಮಿಲೇಗಾ, ಚಾರುಮತಿಯ ಪುಟ್ಟ ಅಂಗೈ ಮೇಲೆ ಜಾಗತೀಕರಣದ ಗಾಯ, ಇನ್ನೊಂದು ಫೆಬ್ರವರಿ 6, ಚಿಕ್ಕೀರಮ್ಮನ ತ್ರಂಕು... ತಂಕೂ, ಜೇಡ್ ಗೂಡಿ- ಸಾವಿನೆದಿರೂ ಸಂಭ್ರಮ, ತೇಜಸ್ವಿ - ರಾಮದಾಸ್ ಪತ್ರಗಳು, ಟಿಪ್ಪು ಮಡಿದ ಆ ದಿನ, ನಾಗತಿಹಳ್ಳಿ ರಂಗ ಪ್ರವೇಶ ವೈಖರಿ, ರಾಮಾಚಾರಿಯಿಂದ ಬನ್ನಂಜೆ ಗೋವಿಂದಾಚಾರಿವರೆಗೆ, ಇಲ್ಲದ ತೀರದತ್ತ ಇರುವವರ ಚಿತ್ರ, 'ಅವಳನ್ನು ಕರೆಯುತ್ತಿದ್ದೀರಿ ಎಲ್ಲಿಗೆ?', ದಾಂತೇವಾಡ ಪೊಲೀಸ್ ಸಾವು ಚೇತನನಿಗೊಂದು ಪತ್ರ.
ಪಾರ್ವತೀಶ ಹಾಗೂ ಬಿಳಿದಾಳೆ ಈಶ ಎಂಬ ಹೆಸರಿನಲ್ಲಿ ಬರೆಯುವ ಪತ್ರಕರ್ತ- ಲೇಖಕ ಪಾರ್ವತೀಶ್ ಜನಿಸಿದ್ದು 1967ರಲ್ಲಿ. ಬಾಲ್ಯ- ಪ್ರಾಥಮಿಕ ಶಿಕ್ಷಣ ಪಡೆದದ್ದು ಆನೇಕಲ್, ಮಾಲೂರು, ದೊಡ್ಡ ಬಳ್ಳಾಪುರದಲ್ಲಿ. ಬಿ.ಕಾಂ. ಪದವಿ ಪೂರ್ಣಗೊಳಿಸಿರುವ ಅವರು ಎಂ.ಎ. ಪತ್ರಿಕೋದ್ಯಮ ಕೋರ್ಸ್ ಅನ್ನು ಅರ್ಧಕ್ಕೆ ನಿಲ್ಲಿಸಿದವರು. ಕನಕಪುರ ತಾಲ್ಲೂಕಿನ ಬಿಳಿದಾಳೆ ಗ್ರಾಮದವರಾದ ಅವರು ಅರೆಕಾಲಿಕ ರೈತರೂ ಹೌದು. ಕೆಲಕಾಲ ಸರ್ಕಾರಿ ನೌಕರಿ ಮಾಡಿದ ಪಾರ್ವತೀಶ್ ಅವರು ನಂತರ ಕರ್ನಾಟಕ ಪ್ರಗತಿರಂಗ ಹಾಗೂ ಕರ್ನಾಟಕ ವಿಮೋಚನಾ ರಂಗದ ಸಕ್ರಿಯ ಕಾರ್ಯಕರ್ತರಾಗಿದ್ದರು. ಲಂಕೇಶ್ ಪತ್ರಿಕೆ, ಗೌರಿ ಲಂಕೇಶ್ ಪತ್ರಿಕೆಗಳಲ್ಲಿ ವರದಿಗಾರನಾಗಿ ಕೆಲಸ ಮಾಡಿರುವ ಅವರು ಸಾಕೇತ್ ...
READ MORE