ಬ್ಯಾಂಕರ್ಸ್ ಡೈರಿ

Author : ಶುಭಶ್ರೀ ಪ್ರಸಾದ್‌

Pages 140

₹ 130.00




Year of Publication: 2023
Published by: ಐಡಿಯಲ್‌ ಪಬ್ಲಿಕೇಷನ್ಸ್‌
Address: ಲಕ್ಷ್ಮೀ ಜನಾರ್ದನಸ್ವಾಮಿ ದೇವಸ್ಥಾನದ ರಸ್ತೆ, ಮಂಡ್ಯ-571401

Synopsys

‘ಬ್ಯಾಂಕರ್ಸ್ ಡೈರಿ’ ಶುಭಶ್ರೀ ಪ್ರಸಾದ್‌ ಅವರ ರಚನೆಯ ಬರಹಗಳ ಸಂಗ್ರಹವಾಗಿದೆ. ಈ ಸಂಕಲನದಲ್ಲಿ ಬ್ಯಾಂಕೊಂದರ ಕ್ಯಾಷ್ ಕೌಂಟರಿನ ಹಿಂದೆ ಹಣಕಾಸು ಲೆಕ್ಕಾಚಾರದಲ್ಲಿರುವ ತಾಯಿ ಮನಸೊಂದು ಆ ಕೂಡು ಕಳೆಯುವಿಕೆಗಳ ಒತ್ತಡದ ನಡುವೆಯೇ ಮನುಷ್ಯ ಜಗತ್ತಿನ ಒಂಟಿತನ, ವೃದ್ಧಾಪ್ಯ, ದುರಾಸೆ, ಮಮತೆ ಮತ್ತು ತಮಾಷೆಗಳನ್ನು ಪದಗಳಲ್ಲಿ ಇಳಿಸಿರುವುದು ಚೇತೋಹಾರಿಯಾಗಿದೆ. ಮಂಡ್ಯ ಭಾಗದ ಹಳ್ಳಿಗಾಡಿನ ಬಡ ಮತ್ತು ಮಧ್ಯಮ ವರ್ಗದ ಬದುಕು ಪಿಂಚಣಿ, ಸಾಲ, ಚೆಕ್ಕು, ಪಾಸ್ ಬುಕ್ಕುಗಳ ಮೂಲಕ ಈ ಪುಸ್ತಕದಲ್ಲಿ ಅನಾಯಾಸವಾಗಿ ಅನಾವರಣಗೊಳ್ಳುತ್ತದೆ. ಯಾವುದೇ ಬಿಡುಬೀಸು ಹೇಳಿಕೆಗಳಿಲ್ಲದೆ ಬದುಕಿನ ಕಟು ಸತ್ಯಗಳನ್ನು ಬಿಚ್ಚಿಡುವ ಬರಹಗಳು .

About the Author

ಶುಭಶ್ರೀ ಪ್ರಸಾದ್‌

ಶುಭಶ್ರೀ ಪ್ರಸಾದ್‌ ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಥೆ ಕವನ ರಚನೆ, ಚಿತ್ರಗ್ರಹಣ, ವಾರ್ತಾವಾಚನ, ಕಾರ್ಯಕ್ರಮ ನಿರೂಪಣೆ, ಪತ್ರಿಕೆಗಳಿಗೆ ಲೇಖನ/ಪ್ರಬಂಧ ಬರೆಯುದು ಅವರ ಹವ್ಯಾಸವಾಗಿದೆ. ಕೃತಿಗಳು: ಕನ್ನಡ ಸಾಹಿತ್ಯದಲ್ಲಿ ದೇಗುಲ ಪರಿಕಲ್ಪನೆ (ಮಹಾಪ್ರಬಂಧ) ,ಹಣತೆ ಬೆಳಕು (ಕವನ ಸಂಕಲನ) ಒಡಲ ಕರೆಗೆ ಓಗೊಟ್ಟು (ಕಥಾ ಸಂಕಲನ), ಒಳಮನ (ಲೇಖನ ಸಂಗ್ರಹ) , ಹೂದಂಡೆಯ ಬೇಲಿ (ಕವನ ಸಂಕಲನ) ,ಮಂಜಿನ‌ಮಧುಪಾತ್ರೆ (ಪ್ರವಾಸ ಕಥನ) ಕಲ್ಲುಹಾಸಿನ ಮೇಲೆ ತಕಧಿಮಿ (ಲಲಿತ ಪ್ರಬಂಧಗಳು) ಶುಭನುಡಿ (ಮುಕ್ತಕಗಳು) . ಪ್ರಶಸ್ತಿಗಳು: ಡಾ. ಹೆಚ್.ಡಿ.ಚೌಡಯ್ಯ ರಾಜ್ಯಮಟ್ಟದ ಸಾಹಿತ್ಯ ಪ್ರಶಸ್ತಿ, ಜೀ.ಶಂ.ಪ ವೇದಿಕೆಯಿಂದ ...

READ MORE

Related Books