ಮಾನವ ಜನ್ಮ ದೊಡ್ಡದು

Author : ಗೊರೂರು ಅನಂತರಾಜು

Pages 164

₹ 145.00




Year of Publication: 2020
Published by: ವಿಜಯಲಕ್ಷ್ಮೀ ಪ್ರಕಾಶನ
Address: ಕುವೆಂಪು ನಗರ ಮೈಸೂರು 570023
Phone: 9886765816

Synopsys

‘ಮಾನವ ಜನ್ಮ ದೊಡ್ಡದು’ ಕೃತಿ ಗೊರೂರು ಅನಂತರಾಜು ಅವರ ರಚನೆಯಲ್ಲಿ ಇತ್ತೀಚಿನದು. ಹಾನಿಮಾಡಬೇಡಿ ಹುಚ್ಚಪ್ಪಗಳಿರಾ..! ಎಂಬ ಎಚ್ಚರಿಕೆಯ ದಾಸರವಾಣಿಯ ಸಾಲಿನಲ್ಲಿ ‘ಮಾನವ ಜನ್ಮ ದೊಡ್ಡದು’ ಎಂಬ ಶಿರೋನಾಮೆಯಲ್ಲಿ ಹಲವಾರು ಹಿರಿಯ ರಂಗಕಲಾವಿದರ ಸಾರ್ಥಕ ಬದುಕುಗಳನ್ನು ಕೃತಿಯಲ್ಲಿ ದಾಖಲಿದ್ದಾರೆ. ನಿತ್ಯ ಜೀವನಕ್ಕೆ ಅಳವಡಿಕೆಯಾಗುವ ವಿಭಿನ್ನ, ವಿಶೇಷ ಮೌಲ್ಯಾಧಾರಿತವಾಗಿ ವೈವಿಧ್ಯಮಯವಾದ ವಿಷಯಸೂಚಿಯಾಗಿ ಕೈಪಿಡಿಯಾಗುವಂತಹ, ಸರ್ವೋಪಯೋಗಿಯಾಗುವಂತಹ ಕೃತಿ ಇದಾಗಿದೆ. ಕೃತಿಯ ಮೊದಲ ಲೇಖನದಲ್ಲಿ ನಾವು ಬಯಸಿ ಹುಟ್ಟಿದವರಲ್ಲ ಇಚ್ಛಿಸಿ ಹೋಗುವವರೂ ಅಲ್ಲ ಎನ್ನುವ ಮೂಲಕ ಕವಿ ದ.ರಾ. ಬೇಂದ್ರೆಯವರು ಹೇಳಿರುವಂತೆ ಹುಸಿ ನಗುತ ಬಂದೇವ, ನಸುನಗುತ ಬಾಳೋಣ, ತುಸು ನಗುತ ತೆರಳೋಣ, ಯಾಕಾಗಿ ಕೆರಳೋಣ, ಬನ್ನಿ ನಗುನಗುತ ಬಾಳು ಸಾಗಿಸೋಣ., ಬದುಕು ಆನಂದಿಸಲೂ ಇದೆ.

About the Author

ಗೊರೂರು ಅನಂತರಾಜು
(13 May 1961)

ಹಾಸನ ಜಿಲ್ಲೆಯ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದ ಚಿರಪರಿಚಿತರಾದ ಗೊರೂರು ಅನಂತರಾಜು ಸಾಹಿತಿಯಾಗಿ, ನಾಟಕಕಾರರಾಗಿ, ರಂಗಭೂಮಿಯ ಕಲಾವಿದರಾಗಿ, ಹವ್ಯಾಸಿ ಪತ್ರಕರ್ತರಾಗಿ ಪ್ರಸಿದ್ದಿ ಪಡೆದವರು.ಇವರು ಹುಟ್ಟಿ ಬೆಳೆದದ್ದು ಗೊರೂರು ಗ್ರಾಮದಲ್ಲಿ. 13-05-1961 ಜನಿಸಿದ ಇವರ ತಂದೆ ಬಸವರಾಜು ಮತ್ತು ತಾಯಿ ಪುಟ್ಟಲಕ್ಕ್ಷ್ಮಮ್ಮ . ಪ್ರಾಥಮಿಕ ಶಿಕ್ಷಣದಿಂದ ಪದವಿಪೂರ್ವ ಶಿಕ್ಷಣದವರೆಗೆ ಸ್ವಗ್ರಾಮ ಗೊರೂರಿನಲ್ಲಿ ವಿದ್ಯಾಭ್ಯಾಸ ಮಾಡಿದ ಇವರು ಹಾಸನದ ಸರ್ಕಾರಿ ಕಲಾ ಕಾಲೇಜಿನಲ್ಲಿ ಬಿಕಾಂ ಪದವಿಯನ್ನು ಪಡೆದು ಹೇಮಾವತಿ ನೀರಾವರಿ ನಿಗಮದಲ್ಲಿ ಗುಮಾಸ್ತರಾಗಿ ಕರ್ತವ್ಯ ನಿರ್ವಹಿಸುತ್ತಲೇ ಹಾಸನದ ಕೃಷ್ಣ ಸಂಜೆ ಕಾಲೇಜಿನಲ್ಲಿ ಎಲ್‌ಎಲ್‌ಬಿ ಪದವಿ ವ್ಯಾಸಂಗ ಮಾಡಿದ್ದಾರೆ. ಪ್ರಥಮ ಧರ್ಜೆ ...

READ MORE

Related Books