ಲೇಖಕ ಲಕ್ಷ್ಮೀಕಾಂತ ಗೌರಿಪುರ ಅವರ ’ಅಸ್ಮಿತೆ’ ಕೃತಿಯಲ್ಲಿ ದೇಶಿ ಓದಿನ ಒಟ್ಟು 22 ಲೇಖನಗಳಿವೆ. ಕೃತಿಗೆ ಮುನ್ನುಡಿ ಬರೆದ ರಾಜಪ್ಪ ದಳವಾಯಿ, ‘’ಅನೇಕ ಕ್ಷೇತ್ರಗಳ ಅನೇಕ ವಿಷಯಗಳ ಅನುಸಂಧಾನದೊಂದಿಗೆ ವಿಮರ್ಶೆ, ಸಂಶೋಧನೆ ಎರಡೂ ಒಂದರೊಳಗೊಂದು ಬೆರೆತು ಯಾವುದನ್ನು ಯಾವುದರಿಂದಲೂ ಬೇರ್ಪಡಿಸಲಾರದಂತೆ ಮಿಳಿತವಾಗಿವೆ. ಇದು ಈ ಕೃತಿಯ ಹೆಗ್ಗಳಿಕೆಯೂ ಆಗಿದೆ. ಸಾಂಸ್ಕೃತಿಕ ವಿಮರ್ಶೆಯ ಹಲವು ನೆಲೆಗಳನ್ನು ಇಲ್ಲಿ ಕಾಣುತ್ತೇವೆ. ಅಧ್ಯಯನ, ವರದಿ, ವಿಶ್ಲೇಷಣೆ, ಅವಲೋಕನ ಮುಂತಾದ ಎಲ್ಲ ಬಗೆಯ ಲೇಖನಗಳೂ ಇಲ್ಲಿವೆ. ಈ ಕೃತಿಯ ಗುಂಟ ಹಾಯ್ದು ಈಚೆಯಿಂದ ಆಚೆಗೆ ಹೋದಾಗ ಒಂದು ಅಸ್ಮಿತೆಯ ಜತೆ ಅನುಸಂಧಾನ ಮಾಡಿದ ಅನುಭವ ನಮ್ಮದಾಗುತ್ತದೆ. ’ ಎಂದು ಪ್ರಶಂಸಿದ್ದಾರೆ.
ಲಕ್ಷ್ಮೀಕಾಂತ ಗೌರಿಪುರ ಅವರು 1985 ಮೂಲತಃ ತುಮಕೂರು ತಾಲ್ಲೂಕಿನ ಗೌರಿಪುರ ಗ್ರಾಮದಲ್ಲಿ ಜನಿಸಿದರು. ಗೌರಿಪುರ, ಕೌತಮಾರನಹಳ್ಳಿ ಹಾಗೂ ಹರಳೂರು ಗ್ರಾಮದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಪೂರೈಸಿದ್ದಾರೆ. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಬಿ.ಎ. ಪದವಿ, ತುಮಕೂರು ವಿಶ್ವವಿದ್ಯಾಲಯದಿಂದ ಬಿ.ಇಡಿ., ಹಾಗೂ ಕನ್ನಡದಲ್ಲಿ ಎಂ.ಎ. ಪದವಿಗಳನ್ನು ಪಡೆದಿದ್ದಾರೆ. ಹಲವು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ ಪ್ರಬಂಧಗಳನ್ನು ಮಂಡಿಸಿದ್ದಾರೆ. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ 'ಕರ್ನಾಟಕ ಗ್ರಾಮ ಚರಿತ್ರಾ ಕೋಶ' ಯೋಜನೆಯ ಕುಣಿಗಲ್ಲು ತಾಲ್ಲೂಕಿನ ಕ್ಷೇತ್ರ ತಜ್ಞರಾಗಿ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಕನ್ನಡ ವಿಶ್ವವಿದ್ಯಾಲಯ, ಹಂಪಿಯಲ್ಲಿ ಜೆ.ಆರ್.ಎಫ್. ಫೆಲೋ ಆಗಿ 'ಪಂಪ-ಕುಮಾರವ್ಯಾಸರ ಕಾವ್ಯಗಳಲ್ಲಿ ಮಹಿಳಾ ...
READ MORE