ಕವಿ ಹಾಗೂ ಲೇಖಕ ಎ ಎಸ್ ಮಕಾನದಾರ ಅವರ ಲೇಖನಗಳ ಸಂಕಲನ-ನೆಲದ ನುಡಿ. ಬೇರೆ ಬೇರೆ ಸಂದರ್ಭಗಳಲ್ಲಿ ಬರೆದ ಕೆಲ ವ್ಯಕ್ತಿ ಚಿತ್ರ ಗಳು, ಆಸಕ್ತಿಯಿಂದ ಅಭ್ಯಾಸ ಮಾಡಿದ ಕೊಪ್ಪಳ ಜಿಲ್ಲೆಯ ಸೂಫಿಗಳು, ಪ್ರೇಮಿಯ ಹೃದಯದ ಭಾಷೆ ಕಲಿಸಿದ ಜಲಾಲುದ್ದೀನ್ ರೂಮಿ ಲೇಖನ ಗಳು, ಇನ್ನೂ ಕೆಲವು ಲಲಿತ ಪ್ರಬಂಧಗಳಾದ ಪೃಥ್ವಿ ರಾಜ್, ಮಾತು: ಭವಿಷ್ಯತ್ತಿನ ಬೆಳೆ ಸಿರಿ, ತರವಲ್ಲ:ವಿವಾಹ ವಿಚ್ಚೆದನ, ತಲ್ಲಣದ ಮನ, ಸಂಸ್ಕೃತಿ ಕ ವೈಭವದ ಮೋದಕ, ಸಂಗೀತ ರಸ ಯಾತ್ರೆಯ ರಸ ವೈಭವ ಲೇಖನ ಗಳಿವೆ. ಇನ್ನುಳಿದ ವ್ಯಕ್ತಿ ಚಿತ್ರ ಗಳಲ್ಲಿ ಕಿ ರO ನಾಗರಾಜ್, ಎಂ ಡಿ ಗೋಗೇರಿ, ಅಬ್ಬಾಸ್ ಮೇಲಿನ ಮನಿ, ಬಸವರಾಜ್ ಗಣಪ್ಪನವರ, ಸಚಿದೇವಿ, ದೋಣಿ,ಐರಸಂಗ, ಹರ್ಲಾಪುರ, ಮೋಹನ್ ಬಡಿಗೇರ ಮುಂತಾದ ವಿವಿಧ ರಂಗ ಗಳ ಸಾಧಕರ ಕುರಿತು ನುಡಿ ಚಿತ್ರಗಳಿವೆ.
ಲೇಖಕ ಮಕಾನದಾರ ಅವರು ದಿಕ್ಸೂಚಿ ಯಾಗುವಂತಹ ಪ್ರಥಮ ಪ್ರಯತ್ನ `ನೆಲದ ನುಡಿ' ಸಂಕಲನ ದ ಮೂಲಕ ಮಾಡಿದ್ದಾರೆ. ಕನ್ನಡ ಸಾರಸ್ವತ ಲೋಕ ಮಕಾನದಾರ ಅವರ ಬರಹದ ದುಡಿಮೆ ಗಮನಿಸಬೇಕಾದ ಸಂಗತಿ ಎಂದು ಹಿರಿಯ ಬರಹಗಾರ ಗುರುಮೂರ್ತಿ ಪೆಂಡಕೂರ ಅವರು ಅಭಿಪ್ರಾಯ ಪಟ್ಟಿದ್ದಾರೆ. ಮಹಾನುಭಾವರ ಹೋರಾಟದ ಬದುಕನ್ನು ಬಹು ಕಾಲ ಇತಿಹಾಸದ ಪುಟಗಳಲ್ಲಿ ಚಿರಸ್ಥಾಯಿಯಾಗಿ ನಿಲ್ಲಿಸುವುದೇ ಕೃತಿಯ ಉದ್ದೇಶವಾಗಿದೆ. ಭಾವೈಕ್ಯತೆಯನ್ನುಸ್ಫುರಿಸುವ ಜೀವಪರ ಧೋರಣೆಯ ಮನಸ್ಸುಗಳು ಈ ನೆಲದ ನುಡಿ ಕೃತಿ ಯನ್ನು ಆವರಿಸಿವೆ ಎಂಬುದು ಒಂದು ಹೆಗ್ಗಳಿಕೆಯ ಸಂಗತಿ ಎಂದು ಲೇಖಕಿ ಸುನಂದಾ ಪ್ರಕಾಶ್ ಕಡಮೆ ಅವರು ಆತ್ಮೀಯವಾಗಿ ಬೆನ್ನುಡಿ ಯಲ್ಲಿ ದಾಖಲಿಸಿದ್ದಾರೆ
ಲೇಖಕ ಎ. ಎಸ್. ಮಕಾನದಾರ ಅವರ ಹುಟ್ಟೂರು ಗಜೇಂದ್ರಗಡ. ಪ್ರಸ್ತುತ ಗದುಗಿನ ಒಂದನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರಥಮ ದರ್ಜೆ ಸಹಾಯಕರಾಗಿದ್ದಾರೆ. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ 10 ಸ್ವತಂತ್ರ ಕೃತಿಗಳನ್ನು, 16 ಸಂಪಾದಿತ ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ವಿಶ್ವವಿದ್ಯಾಲಯದ ಬಿ.ಎ., ಬಿ.ಕಾಂ., ಬಿ.ಎಸ್ಸಿ., ಬಿ.ಎಸ್.ಡಬ್ಲೂ ಮೊದಲ ಸೆಮಿಸ್ಟರ್ ಗೆ ‘ಅಮ್ಮನ ಬಿಕ್ಕಳಿಕೆ ನಿಲ್ಲಿಸುವಿರಾ’ ಎಂಬ ಇವರ ಕವಿತೆ ಪಠ್ಯ ವಾಗಿ ಸೇರ್ಪಡೆ ಯಾಗಿದೆ. ಪ್ರಶಸ್ತಿ-ಗೌರವಗಳು: ಸರಕಾರದಿಂದ ಜಿಲ್ಲಾ ಸರ್ವೋತ್ತಮ ಸೇವಾ ಪುರಸ್ಕಾರ, ಜಿಲ್ಲಾ ಕನ್ನಡ ರಾಜ್ಯೋತ್ಸವ ಪುರಸ್ಕಾರ, ಸಂತ ಶಿಶುನಾಳ ಶರೀಫ ಪುರಸ್ಕಾರ, ಭಾವೈಕ್ಯ ಪುರಸ್ಕಾರ, ರಾಷ್ಟ್ರಕೂಟ ಸಾಹಿತ್ಯ ಶ್ರೀ ಪುರಸ್ಕಾರ, ಕೊಪಳ ...
READ MORE