ಚಿತ್ತ ಸಮುದ್ರ

Author : ಕೆ.ಎಸ್. ಪವಿತ್ರ

Pages 136

₹ 110.00




Year of Publication: 2021
Published by: ಸ್ನೇಹಾ ಎಂಟರ್ಪ್ರೈಸಸ್
Address: ನಂ.138, 7ನೇ ಸಿ ಮುಖ್ಯರಸ್ತೆ, ಹಂಪಿನಗರ, ಬೆಂಗಳೂರು-560104

Synopsys

ವೃತ್ತಿಯಲ್ಲಿ ವೈದ್ಯರಾದರೂ, ಪ್ರವೃತ್ತಿಯಲ್ಲಿ ಲೇಖಕಿಯಾಗಿರುವ ಡಾ.ಕೆ.ಎಸ್.ಪವಿತ್ರ ಅವರ ವೈದ್ಯಕೀಯ ಲೇಖನಗಳ ಸಂಕಲನ `ಚಿತ್ತ ಸಮುದ್ರ’. ಚಿತ್ತ ಸಮುದ್ರದ ಪುಟಗಳಿಂದ ಲೇಖಕಿಯ ಮಾತು….‘ನನ್ನ 44ನೇ ಪುಸ್ತಕ 'ಚಿತ್ತಸಮುದ್ರ' ಹೊರಬರುತ್ತಿರುವ ಈ ಸಂದರ್ಭದಲ್ಲಿ `ಮಾನಸಿಕ ಆರೋಗ್ಯ' ಎನ್ನುವುದರ ಬಗೆಗೆ ನನಗೆ ಹಲವು ಯೋಚನೆಗಳು ಮನಸ್ಸಿಗೆ ಬರುತ್ತವೆ. 'ಮನಸ್ಸು' ಎಂಬುದು ನಮ್ಮ ದೇಹದ 'ಅಂಗ' ಎಂಬ ಸತ್ಯವನ್ನು ವಿಜ್ಞಾನ ಇಂದು ದೃಢವಾಗಿ ನಿರೂಪಿಸಿದೆ. ಅದು ದೇಹದ ಇತರ ಎಲ್ಲ ಪ್ರಕ್ರಿಯೆಗಳಿಗೂ ಸಂಬಂಧಿಸಿದೆ ಎಂಬುದೂ ಇಂದು ಸುಸ್ಪಷ್ಟ. ಆದರೂ ವಿಜ್ಞಾನದ ಹಲವು ಪ್ರಚಲಿತವಿರುವ ಲಭ್ಯವಿರುವ ಸಂಶೋಧನೆಗಳಾಗಲಿ, ಚಿಕಿತ್ಸೆಗಳಾಗಲೀ ಈಗಾಗಲೇ ಜನಸಾಮಾನ್ಯರಲ್ಲಿ ತಲುಪಬೇಕೆಂದರೆ ಅದಕ್ಕಿರುವ ದಾರಿ ಯಾವುದು? ಈ ಪ್ರಶ್ನೆಗೆ ಉತ್ತರ ಹುಡುಕುವಾಗ ನನಗೆ ಮೊದಲು ಕಾಣುವುದು ವೈದ್ಯಕೀಯ ಬರೆಹಗಳು. ಪಾಶ್ಚಾತ್ಯ ದೇಶಗಳಂತೆ ರೋಗಿಗಳು/ಜನರಿಗೆ ಮಾಹಿತಿ ಪುಸ್ತಿಕೆಯಂತೆ ಉಚಿತವಾಗಿ, ಎಲ್ಲೆಂದರಲ್ಲಿ (ಸೂಪರ್ ಮಾರ್ಕೆಟ್ ಗಳು, ಮೆಡಿಕಲ್ ಶಾಪ್ ಗಳು) ನಮ್ಮಲ್ಲಿ ಲಭ್ಯವಿಲ್ಲ. ಹಾಗೆಯೇ ಉಚಿತವಾಗಿ ಸಿಕ್ಕುತ್ತದೆ ಎಂದರೆ ನಮಗೆ ಅದು 'ಬೇಡವಾದ್ದು' ಎಂದೇ ತಿಳಿಯುವ ಹಠ!. ಪುಸ್ತಕ ಪ್ರಕಟಣೆಯ ಕಷ್ಟ ಫಜೀತಿಗಳ ನಡುವೆ ನಾನು ಬರೆದ ಪುಸ್ತಕಗಳು ಜನರನ್ನು ನಿಜವಾಗಿ ತಲುಪುತ್ತಿವೆಯೇ ಎಂಬ ಬಗ್ಗೆ ಅನುಮಾನ ನನ್ನನ್ನು ಕಾಡುತ್ತದೆ, ಆದರೆ ನನ್ನ ಬಳಿ ಪುಸ್ತಕಗಳನ್ನು ಓದಿ ಬರುವವರು, ಎಲ್ಲಿಂದಲೋ ಪತ್ರ ಬರೆಯುವವರು, ಅವು 'ಉಪಯುಕ್ತ' ಎಂಬುದನ್ನು ಮನದಟ್ಟು ಮಾಡಿಸಿದ್ದಾರೆ. ಹಾಗೆ ಕೊಂಡು ಓದುವ ಜನರು ನಮ್ಮ ನಡುವೆ ಇದ್ದಾರೆ ಎಂಬ ಸಂಗತಿಯೂ ನಾನು ಬರೆಯುವ ಹಿಂದಿನ ಕಾರಣ ಎಂದೇ ಹೇಳಬಹುದು.

About the Author

ಕೆ.ಎಸ್. ಪವಿತ್ರ

ವೈದ್ಯಕೀಯ ಸಾಹಿತ್ಯ ರಂಗ, ಭರತನಾಟ್ಯ ಕಲಾವಿದೆಯಾಗಿ ಹೆಸರು ಗಳಿಸಿರುವ ಪವಿತ್ರಾ ಕೆ.ಎಸ್ ಅವರು ಮೂಲತಃ ಶಿವಮೊಗ್ಗದವರು. ಆರೋಗ್ಯ ಸಲಹೆಗಳಿಂದ ಉನ್ನತ ಸ್ಥಾನ ಗಳಿಸಿರುವ ಅವರು ವಿಚಾರ ಸಾಹಿತ್ಯದಲ್ಲೂ ಆಸಕ್ತರು.  11ನೇ ವಯಸ್ಸಿನಲ್ಲಿ ಅಖಿಲ ಭಾರತ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಉಪಾಧ್ಯಕ್ಷೆಯಾಗಿದ್ದ ಕೀರ್ತಿ ಅವರದು. ’ಮನ-ಮನನ, ನೀವು ಮತ್ತು ನಿಮ್ಮ ಸಂಬಂಧಗಳು, ಸಿ.ಜಿ.ಯೂಂಗ್, ಓ ಸಖಿ ನೀನು ಸಖಿಯೆ, ಪರಿಪೂರ್ಣ ವ್ಯಕ್ತಿತ್ವ ಇಂದಿನ ಮಹಿಳೆಯ ಮಾನಸಿಕ ಸವಾಲುಗಳು, ಗೀಳು ಖಾಯಿಲೆ, ಮಗು-ಮನಸು’ ಅವರ ಕೃತಿಗಳು. ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಬಹುಮಾನ, ಕಸಾಪ ಧರಣೇಂದ್ರಯ್ಯ ಮನೋವಿಜ್ಞಾನ ದತ್ತಿ ...

READ MORE

Related Books