ಕುಮಾರವ್ಯಾಸ ಕಂಡ ಶ್ರೀಕೃಷ್ಣ

Author : ಎ.ವಿ. ಪ್ರಸನ್ನ

Pages 156

₹ 160.00




Year of Publication: 2023
Published by: ಸಮನ್ವಿತ ಪ್ರಕಾಶನ
Address: #12, 1ನೆ ಅಡ್ಡರಸ್ತೆ, ಮಂಜುನಾಥ ಲೇಔಟ್, ಅರಕೆರೆ ಮೈಕೋ ಲೇಔಟ್ ಹಿಂಭಾಗ, ಬನ್ನೇರುಘಟ್ಟ ರಸ್ತೆ, ಬೆಂಗಳೂರು 560076
Phone: 9844192952

Synopsys

‘ಕುಮಾರವ್ಯಾಸ ಕಂಡ ಶ್ರೀಕೃಷ್ಣ’ ಪ್ರಸನ್ನ ಎ.ವಿ ಅವರ ಲೇಖನಗಳ ಸಂಗ್ರಹವಾಗಿದೆ. ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು ಎಂಬ ಕವಿ ಕುವೆಂಪು ಅವರ ಮಾತುಗಳನ್ನು ಕುಮಾರವ್ಯಾಸ ಭಾರತದ ಗಮಕ ವ್ಯಾಖ್ಯಾನದ ಮೂಲಕ ನಾಡಿನ ಉದ್ದಗಲಕ್ಕೂ ಸಾದರಗೊಳಿಸುತ್ತಾ ಇರುವವರು ಡಾ. ಎ.ಎ ಪ್ರಸನ್ನ ಅವರು, ಕಾನೂನು ವ್ಯಾಸಂಗ ಪೂರೈಸಿ, ಕನ್ನಡ ಸಾಹಿತ್ಯ ಎಂಎ ಪದವಿಧರರಾಗಿ, ಕುಮಾರವ್ಯಾಸ ಮಹಾಕವಿಯ ಕರ್ನಾಟಕ ಭಾರತ ಕಥಾಮಂಜರಿಯನ್ನು ತಮ್ಮ ವಿಶೇಷ ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡು, ಕುಮಾರವ್ಯಾಸನ ಕಾವ್ಯ ಚಿತ್ರಗಳು – ಒಂದು ಅಧ್ಯಯನ ಎಂಬ ಮಹಾಪ್ರಬಂಧ ರಚಿಸಿ ಕನ್ನಡ ವಿಶ್ವವಿದ್ಯಾಲಯದ ಡಿಲೀಟ್ ಪದವಿಯನ್ನು ಪಡೆದಿರುತ್ತಾರೆ. ಕನ್ನಡ ನಾಡಿನ ಒಳಗೆ ಮತ್ತು ಮಹಾರಾಷ್ಟ್ರ, ತಮಿಳುನಾಡು, ಕೇರಳ, ದೆಹಲಿ ಮುಂತಾದ ಹೊರರಾಜ್ಯಗಳಲ್ಲಿ ಕುಮಾರವ್ಯಾಸ ಭಾರತ ಮತ್ತಿತರ ಹಳೆಗನ್ನಡ ನಡುಗನ್ನಡದ ಸಾವಿರಾರು ಕಾವ್ಯಗಳ ಗಮಕವಾಚನಕ್ಕೆ ಪ್ರೌಢ ವ್ಯಾಖ್ಯಾನಗಳನ್ನು ನೀಡಿ, ಈ ಕಾವ್ಯಗಳ ಸೊಗಸನ್ನು ಪರಿಚಯಿಸಿದ್ದಾರೆ. ಗಮಕ ಗ್ರಾಮ ಹೊಸಹಳ್ಳಿಯಲ್ಲಿ ನಡೆದ ಅಖಿಲ ಕರ್ನಾಟಕ ಗಮಕ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿರುತ್ತಾರೆ ಹಾಗೆಯೇ ಕರ್ನಾಟಕ ಗಮಕ ಕಲಾಪರಿಷತ್ತು ನಗರದಲ್ಲಿ ನಡೆಸಿದ ರಾಜ್ಯ ಮಟ್ಟದ ಗಮಕ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದಾರೆ. ಗಮಕ ಗ್ರಾಮ ಹೊಸಹಳ್ಳಿಯಿಂದ ಪ್ರಕಟವಾಗುವ 'ಗಮಕಸಂಪದ' ಮಾಸಪತ್ರಿಕೆಗೆ ಕಳೆದ ಎರಡು ದಶಕಗಳಿಂದ ಗಮಕ ಸಾಹಿತ್ಯ' ಎಂಬ ಅಂಕಣ ಲೇಖನಗಳನ್ನು ಬರೆಯುತ್ತಿದ್ದಾರೆ ಕುಮಾರವ್ಯಾಸ ಕಂಡ ಶ್ರೀ ಕೃಷ್ಣ ಎಂಬ ಗ್ರಂಥವು ಸಹ ಗಮಕಸಂಪದ ಪತ್ರಿಕೆಯಲ್ಲಿ ಪ್ರಕಟವಾಗಿರುವ ಲೇಖನಗಳ ಸಂಗ್ರಹವೇ ಆಗಿದೆ.

About the Author

ಎ.ವಿ. ಪ್ರಸನ್ನ
(18 August 1950)

ಕುಮಾರವ್ಯಾಸನ  ಭಾರತ ಕಥೆಯನ್ನು ಗಮಕ ವ್ಯಾಖ್ಯಾನ ಮಾಡುವ ಮೂಲಕ ತಮ್ಮದೇ ಛಾಪು ಮೂಡಿಸಿದವರು ಎ.ವಿ.ಪ್ರಸನ್ನ. ಹಾಸನ ಜಿಲ್ಲೆಯ ಆಲೂರು ತಾಲೂಕಿನ (ಜನನ: 18-08-1950) ಪೊನ್ನಾಥಪುರದವರು. ತಾಯಿ ಪಾರ್ವತಮ್ಮ ತಂದೆ ಎ.ಜಿ.ವೆಂಕಟನಾರಾಯಣಪ್ಪ. ಪೊನ್ನಾಥಪುರ ಮತ್ತು ಗೊರೂರಿನಲ್ಲಿ ಪ್ರಾಥಮಿಕ ಶಿಕ್ಷಣ, ನಂತರ ಬೆಂಗಳೂರಿನಲ್ಲಿ ವೃತ್ತಿಜೀವನದ ಜೊತೆ ಜೊತೆಗೆ ಸಂಜೆ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಪೂರೈಸಿ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದರು. ಕಾನೂನು ಪದವೀಧರರು. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಮೂಲಕ ‘ಕುಮಾರವ್ಯಾಸನ ಕಾವ್ಯ ಚಿತ್ರಗಳು ಒಂದು ಅಧ್ಯಯನ’ ವಿಷಯ ಕುರಿತು ಮಹಾಪ್ರಬಂಧ ಮಂಡಿಸಿ ಡಿ.ಲಿಟ್ ಪದವಿಗೆ ಭಾಜನರಾದರು. ಬೆಂಗಳೂರಿನ ಜೆ.ಕೆ.ಡಬ್ಲ್ಯೂ ಕಾರ್ಖಾನೆಯಲ್ಲಿ ಉದ್ಯೋಗ,  ಎಂ.ಇ.ಎಸ್ ಸಂಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ, ಕರ್ನಾಟಕ ಆಡಳಿತ ಪರೀಕ್ಷೆಯಲ್ಲಿ ...

READ MORE

Related Books