ನಮ್ಮ ಸಮಾಜದಲ್ಲಿ ಶಿಕ್ಷಣ ವ್ಯವಸ್ಥೆ ಬದಲಾದರೂ, ಪಾಲಕರ ಮನಸ್ಥಿತಿ ಬದಲಾಗದೇ ಹೋದಲ್ಲಿ ಯಾವುದೇ ರೀತಿಯ ಬದಲಾವಣೆಗಳು ಸಾಧ್ಯವಿಲ್ಲವೆಂದು ತಿಳಿಸುವ ಕೃತಿ ಗಣೇಶ ಜೋಶಿ ಸಂಕೊಳ್ಳಿ ಅವರ ‘ಅವಲೋಕನ ಪಾಲಕರೊಂದಿಗೆ ಪ್ರೀತಿಯ ಮಾತು’. ಮಕ್ಕಳ ಬಗ್ಗೆ ಅತಿ ಹೆಚ್ಚು ಕಾಳಜಿ ಹಾಗೂ ಪ್ರೀತಿ ಹೊಂದಿರುವ ಇಂದಿನ ಪಾಲಕರು ಮಗುವಿನ ಬಾಲ್ಯವನ್ನು ಜೊತೆಗೆ ಬದುಕನ್ನು ಕಿತ್ತುಕೊಂಡು ಬಿಡುವ ಪರಿಸ್ಥಿತಿಗಳನ್ನೂ ನಾವು ಕಾಣುತ್ತಿದ್ದೇವೆ. ಹಾಗಾದರೆ ಪಾಲಕರ ಜವಾಬ್ದಾರಿಗಳೇನು? ನಾವು ಅದನ್ನು ಹೇಗೆ ನಿರ್ವಹಿಸಬೇಕು ಎನ್ನುವುದರ ಬಗ್ಗೆ ಒಂದು "ಅವಲೋಕನ"ವನ್ನು ನಾವು ಇಲ್ಲಿ ಕಾಣಬಹುದಾಗಿದೆ. ಕೃತಿಯ ಮುಖ್ಯ ಕಥಾವಸ್ತು ಪಾಲಕರ ಬದಲಾವಣೆಯೇ ಆಗಿರುತ್ತದೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹಳದೀಪುರದ ಸಂಕೊಳ್ಳಿಯಲ್ಲಿ 1989 ಜೂನ್ 25 ಕ್ಕೆ ಜನಿಸಿದ ಇವರು. ತಮ್ಮ ಪ್ರಾಥಮಿಕ ಶಿಕ್ಷಣದ ಅವಧಿಯಲ್ಲಿಯೇ ನಿರೂಪಣೆ, ಸಂದರ್ಶನ ಹಾಗೂ ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದರು. ಪ್ರೌಢಶಾಲೆಯಲ್ಲಿ ಹಾಗೂ ಕಾಲೇಜಿನ ಅನೇಕ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದವರು. ನಿರೂಪಣಾ ಕ್ಷೇತ್ರದಲ್ಲಿ ಕೆಲಸ ಮಾಡಿ ರಾಜ್ಯಮಟ್ಟದ ಕಾರ್ಯಕ್ರಮಗಳೂ ಸೇರಿ ಸರಿಸುಮಾರು 850 ಕ್ಕೂ ಹೆಚ್ಚು ಕಾರ್ಯಕ್ರಮವನ್ನು ನಿರೂಪಿಸಿ ಜನಮೆಚ್ಚುಗೆ ಪಡೆದವರು. ನಿರೂಪಣಾ ಶೈಲಿ ಹಾಗೂ ಸಾಹಿತ್ಯದ ಬಳಕೆಯಿಂದ ಜನತೆಯ ಮೆಚ್ಚಿನ ನಿರೂಪಕರಾದ ಇವರು ಸಿಂಚನಾ ಟಿ.ವಿ ವಾಹಿನಿ ಹಾಗೂ ಸದರಿ ವಿಸ್ಮಯ ...
READ MORE