”ಒಂದನೇ ತರಗತಿಯಿಂದ ಇಂಗ್ಲೀಷ್ ಕಲಿಕೆ: ಏಕೆ ಬೇಡ?’ ಡಿ.ಎಸ್. ನಾಗಭೂಷಣ ಅವರ ಕೃತಿಯಾಗಿದೆ. ನಮ್ಮ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಇಂಗ್ಲಿಷ್ ಕಲಿಸಬೇಕೆನ್ನುವ ಪ್ರಸ್ತಾಪವನ್ನು ಇದ್ದಕ್ಕಿದ್ದಂತೆ ಸರ್ಕಾರ ಸಾರ್ವಜನಿಕರ ಮುಂದಿಟ್ಟಿದೆ. ಕೆಲವು ಸಾಹಿತಿ-ಚಿಂತಕರ ಗುಂಪೊಂದು, ಈಗಿರುವ ಸ್ಥಿತಿಯಲ್ಲಿ ಕನ್ನಡಕ್ಕೆ ಮಾರಕವಾಗಿ ಪರಿಣಮಿಸುವ ಸರ್ವ ಸಾಧ್ಯತೆಗಳನ್ನೂ ಒಳಗೊಂಡಿರುವ, ಸರ್ಕಾರದ ಈ ಪ್ರಸ್ತಾವವನ್ನು ಬೆಂಬಲಿಸಿದ ಮಾತ್ರವಲ್ಲ, ಅದರ ಪರವಾಗಿ ಚಳುವಳಿ ಸಂಘಟಿಸಲೂ ಮುಂದಾಗಿ, ಕನ್ನಡದ ಪ್ರಶ್ನೆಯನ್ನು ಜಾತಿವರ್ಗಗಳ ಪ್ರಶ್ನೆಯಾಗಿಯೂ ಪರಿವರ್ತಿಸಲು ಪ್ರಯತ್ನಿಸಿವೆ. ಈ ಬೆಳವಣಿಗೆಗಳ ಕುರಿತು ನನ್ನ ಚಿಂತನೆಗಳನ್ನು, ಈ ಬೆಳವಣಿಗೆಗಳಿಗೆ ಪ್ರತಿಕ್ರಿಯೆಗಳ ರೂಪದಲ್ಲಿ ಪತ್ರಿಕೆಗಳಲ್ಲಿ ಮತ್ತು ವಿಚಾರ ಸಂಕಿರಣಗಳಲ್ಲಿ ದಾಖಲಿಸಿದ್ದನ್ನು, ಇಲ್ಲಿ ನಿಮ್ಮ ಮುಂದಿಡುತ್ತಿದ್ದೇನೆ. ಇವು ಬೇರೆ ಬೇರೆ ಸಂದರ್ಭಗಳಲ್ಲಿ, ಬೇರೆ ಬೇರೆ ಪ್ರಶ್ನೆ- ವಾದಗಳಿಗೆ ಉತ್ತರಿಸಲು ಬರೆದುವಾದವುಗಳಿಂದ,ಅಲ್ಲಲ್ಲಿ ಕಂಡುಬರಬಹುದಾದ ಸಣ್ಣಪುಟ್ಟ ವಿಷಯಗಳ ಪುನರಾವರ್ತನೆಗೆ ಕ್ಷಮೆ ಇರಲಿ. ಎಂದು ಪುಸ್ತಕದ ಬಗ್ಗೆ ಲೇಖಕರು ಲೇಖಕರ ಮಾತಲ್ಲಿ ತಿಳಿಸಿದ್ದಾರೆ.
ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಡಿ.ಎಸ್.ನಾಗಭೂಷಣ ಅವರು 1952 ಫೆಬ್ರವರಿ 1 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲ್ಲೂಕಿನ ತಿಮ್ಮಸಂದ್ರದಲ್ಲಿ ಜನಿಸಿದರು. ದೆಹಲಿ ಆಕಾಶವಾಣಿಯಲ್ಲಿ ಕನ್ನಡ ವಾರ್ತಾ ವಾಚಕರಾಗಿ1975ರಿಂದ 1981ರವರೆ ಸೇವೆ ಸಲ್ಲಿಸಿದ್ದ ಅವರು ಆನಂತರದಲ್ಲಿ ಸಹಾಯಕ ನಿಲಯ ನಿರ್ದೇಶಕರಾಗಿ 7 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. 2005ರಲ್ಲಿ ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದರು. ಓದು, ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡಿರುವ ಅವರು ‘ಇಂದಿಗೆ ಬೇಕಾದ ಗಾಂಧಿ’, ‘ಲೋಹಿಯಾ ಜೊತೆಯಲ್ಲಿ’, ‘ರೂಪ ರೂಪಗಳನು ಧಾಟಿ’, ‘ಕುವೆಂಪು ಒಂದು ಪುನರನ್ವೇಷಣೆ’, ‘ಕುವೆಂಪು ಸಾಹಿತ್ಯ ದರ್ಶನ’, ‘ಜಯ ಪ್ರಕಾಶ ನಾರಾಯಣ ...
READ MORE