ಜರ್ಮನ್ ಲೇಖಕ, ನಾಟಕಕಾರ ಲ್ಯೂಟ್ಜ್ ಹ್ಯೂಬ್ನರ್ ಅವರ ʻರೆಸ್ಪೆಕ್ಟ್ʼ ನಾಟಕ ಕೃತಿಯ ಕನ್ನಡ ರೂಪಾಂತರ ʻಮರ್ಯಾದೆ ಪ್ರಶ್ನೆʼ. ಲೇಖಕ ಎಸ್. ಸುರೇಂದ್ರನಾಥ್ ಅನುವಾದ ಮಾಡಿದ ಈ ಪುಸ್ತಕದ ಕತೆ ತನಿಖೆಯಿಂದ ಆರಂಭವಾಗುತ್ತದೆ. ನಾಲ್ಕು ಜನ ಯುವಕರು ಗ್ರಾಮೀಣ ಪ್ರದೇಶದಿಂದ ನಗರ ಪರಿಸರಕ್ಕೆ ಸ್ಥಳಾಂತರಗೊಂಡಾಗ ಎದುರಿಸುವ ಸ್ವಯಂ-ದೃಢೀಕರಣದ ಸಮಸ್ಯೆಗಳನ್ನು ಹೇಳುತ್ತಾ ಮನಸ್ಸು ಬಿಚ್ಚಿಡುವ ಕತೆ. ಇಲ್ಲಿ ಮಾನವ ವ್ಯಕ್ತಿತ್ವ, ಲಿಂಗ ಸಮಸ್ಯೆಗಳ ಕುರಿತ ಪ್ರಸಂಗಗಳು ಕಾಣಿಸುತ್ತವೆ . ಬೆ೦ಗಳೂರಿನಿಂದ ಮೈಸೂರಿಗೆ ಪ್ರಯಾಣ ಮಾಡುವಾಗ ಆಕಸ್ಮಿಕವಾಗಿ ಸಂಭವಿಸುವ ದುರಂತ ಮುಂದೆ ಕ್ರೋಧ, ಸಂಬಂಧಗಳು, ಪ್ರಾಬಲ್ಯ, ಹಣದ ಶಕ್ತಿ ಮತ್ತು ಅಹಂಕಾರಗಳ ಮೇಲೆ ಕತೆ ಸಾಗುತ್ತದೆ. ರಾಜಿ ಎಂಬ ಹುಡುಗಿಯ ಮೇಲೆ ನಡೆದ ಕೊಲೆಯ ಆರೋಪವನ್ನು ತಿಲಕ್ ನಾಯ್ಡು ಮತ್ತು ಅಲಿ ಎಂಬ ಇಬ್ಬರು ಯುವಕರು ಎದುರಿಸುವುದು, ಘಟನೆಯ ಕುರಿತು ತಿಳಿಯಲು ನ್ಯಾಯಾಲಯ ನೇಮಿಸಿದ ಮನಶ್ಶಾಸ್ತ್ರಜ್ಞ ಮಾಧವರಾವ್, ಅವರೊಂದಿಗೆ ಮಾತನಾಡುವುದು, ಮುಂದೆ ಸಂಭವಗಳು ಒಂದೊಂದಾಗಿಯೇ ಸ್ಪಷ್ಟತೆ ಪಡೆಯುತ್ತಾ ಹೋಗುವುದನ್ನು ಲೇಖಕರು ಇಲ್ಲಿ ಕುತೂಹಲಕಾರಿಯಾಗಿ ಚಿತ್ರಿಸಿದ್ದಾರೆ.
ಸುರೇಂದ್ರನಾಥ್ ಅವರು ಹುಟ್ಟಿದ್ದು ಮೂಡಬಿದರೆಯ ಸಮೀಪದ ಒಂದು ಹಳ್ಳಿಯಲ್ಲಿ. ಓದಿದ್ದು ಬೆಳೆದಿದ್ದು ದಾವಣಗೆರೆಯಲ್ಲಿ. ಓದಿನ ಸಮಯದಲ್ಲೇ ಸಾಹಿತ್ಯ, ನಾಟಕದ ಗೀಳು ಹತ್ತಿಸಿಕೊಂಡ ಅವರು ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ನಾಟಕದ ತರಬೇತಿ ಪಡೆದರು. ಹೊಟ್ಟೆಪಾಡಿಗಾಗಿ ಒಂದಿಷ್ಟು ವರ್ಷಗಳು ಹಲವಾರು ಪತ್ರಿಕೆಗಳಲ್ಲಿ, ಜಾಹೀರಾತು ಕಂಪೆನಿಗಳಲ್ಲಿ ದುಡಿದಿದ್ದಾರೆ. ಬೆಂಗಳೂರಿನ ಸಂಕೇತ್ ತಂಡದಲ್ಲಿ ಸೇರಿ ಹಲವು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಆನಂತರ ಈಟಿವಿ ಸಂಸ್ಥೆಯನ್ನು ಸೇರಿದ ಅವರು ಹದಿಮೂರು ವರ್ಷಗಳ ಕಾಲ ಹೈದರಾಬಾದಿನಲ್ಲಿ ಕಾರ್ಯನಿರ್ವಹಿಸಿದ್ದಾರೆ. ವೃತ್ತಿ, ರಂಗಭೂಮಿ ಒಡನಾಟಗಳೊಂದಿಗೆ ಸಾಹಿತ್ಯ ಕ್ಷೇತ್ರದಲ್ಲೂ ಛಾಪು ಮೂಡಿಸಿರುವ ಸುರೇಂದ್ರನಾಥ್ ಎರಡು ಕಥಾಸಂಕಲನಗಳು - ಕಟ್ಟು ...
READ MORE