ನಾಮದೇವ ಕಾಗದಗಾರ ಅವರ ‘ನೆಲದ ನಂಟು’ ನುಡಿಚಿತ್ರಗಳ ಸಂಗ್ರಹವಾಗಿದೆ. ಈ ಕೃತಿಗೆ ಸಾಹಿತಿ, ಚಿತ್ರಕಾರ ಕೆ.ಬಿ.ವೀರಲಿಂಗನಗೌಡ್ರ ಅವರು ಮುನ್ನುಡಿ ಬರೆದಿದ್ದಾರೆ. ‘ಕಾಗದಗಾರವರು ಚಿತ್ರ ಕಲಾವಿದರಾಗಿರುವುದರಿಂದ ಕಲೆಯ ಕುರಿತು ‘ಅರಿವಿನ ಹೆಜ್ಜೆ’ ವಿಭಾಗದಲ್ಲಿ ಕಲಾಪ್ರಿಯರ ಕುರಿತು ಬರೆದಿರುವ ಲೇಖನಗಳು ತುಂಬಾ ಆಪ್ತವಾಗಿವೆ. ಮೂರ್ತ ಅಮೂರ್ತ ಶೈಲಿಯ ಕಲಾಕೃತಿಗಳನ್ನು, ರೇಖಾಚಿತ್ರಗಳನ್ನು, ಪ್ರಾಕೃತಿಕ ಕಲಾ ಹೊಳುಹುಗಳನ್ನರಿಯಲು ಮುಖ್ಯವಾಗಿ ಚಿತ್ರದ ಭಾಷೆ ಗೊತ್ತಿರಬೇಕು. ‘ಮೊದಲ ಭಾಷೆಯೇ ಚಿತ್ರಕಲೆ’ ಅನ್ನೊ ಲೇಖನದಲ್ಲಿ ಕಲಾಭಾಷೆಯ ಮಹತ್ವವನ್ನು ಸಶಕ್ತವಾಗಿ ಕಟ್ಟಿಕೊಟ್ಟಿದ್ದಾರೆ. ಲೇಖಕರ ಒಳನೋಟ, ಕಲೆಯ ಕುರಿತಾದ ತೀವ್ರ ಪ್ರೀತಿ, ಕಾಳಜಿ ಎಲ್ಲವೂ ಇಲ್ಲಿ ಸಹಜವಾಗಿ ಅರಳಿವೆ. ಪುಸ್ತಕದ ಓದು ಮುಗಿಸಿದ ಮೇಲೆ ಅಪರೂಪದ ವ್ಯಕ್ತಿ ಪರಿಚಯಗಳು, ದೈತ್ಯ ಮರಗಳು, ಮರ ಹತ್ತುವ ಮೇಕೆಗಳು, ಪಕ್ಷಿಗಳ ಅಪಾರ್ಟಮೆಂಟ್, ಜೀವನ ಮೌಲ್ಯಗಳು, ಅಲಕ್ಷಿತ ಐತಿಹಾಸಿಕ ಸ್ಥಳ ಪರಿಚಯ, ಹಾಗಲಕಾಯಿ ಹಾಗೂ ಅರಿಶಿಣದ ಮಹತ್ವ ಎಲ್ಲವೂ ಒಂದುರೀತಿಯಲ್ಲಿ ತಟ್ಟಿದರೆ, ಮಹಿಳಾ ದೌರ್ಜನ್ಯಕ್ಕೆ ಕೊನೆ ಎಂದು? ಪ್ರಶ್ನಿಸುವ ಲೇಖನ ಭಿನ್ನವಾಗಿ ಕಾಡುತ್ತದೆ. ಇವರ ಬರಹಗಳಲ್ಲಿ ಭಾವವಿದೆ, ತಲ್ಲಣಗಳಿವೆ, ಬಣ್ಣವಿದೆ, ಹಸಿವು, ನಿದ್ರೆ, ನೀರಡಿಕೆಗಳೂ ಇವೆ. ಮನುಷ್ಯನೊಬ್ಬ ತನ್ನನ್ನು ತಾನು ಒರೆಗೆ ಹಚ್ಚಿಕೊಳ್ಳುವ ರೀತಿಯಲ್ಲಿ ಇಲ್ಲಿನ ಬರಹಗಳಿವೆ. ಮನುಷ್ಯತ್ವದ, ನಿಸರ್ಗದ ನಿಗೂಢ ಅಂತರಾಳವನ್ನು ಹೊಕ್ಕು ಅಂತಃ ಕರುಣೆಯಿಂದ ಬರೆದ ಲೇಖನಗಳಿವು. ನಿರಾಡಂಬರ, ನಿರ್ಭಾವುಕ ಭಾಷೆಯಲ್ಲಿ ಇಲ್ಲಿನ ನುಡಿಚಿತ್ರಗಳಿದ್ದರೂ ಭಾವಚಿತ್ರಗಳಾಗಿ ನಮ್ಮೆದೆಯೊಳಗೆ ಸರಾಗವಾಗಿ ಇಳಿದುಬಿಡುತ್ತವೆ. ಇಲ್ಲಿಯ ಬಹುಪಾಲು ಲೇಖಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಆ ಒಟ್ಟು ಲೇಖನಗಳ ಸಂಕಲನವೇ ‘ನೆಲದ ನಂಟು’. ಇಂತಹ ವಿಷಯಗಳು ಶಾಲೆಗಳಲ್ಲಿ ಓದುವ ಪಠ್ಯಗಳಾಗಬೇಕೆಂಬುದು ನನ್ನ ಹಕ್ಕೊತ್ತಾಯವೂ ಆಗಿದೆ. ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಸಮಾಜಮುಖಿ ಸಂಗಾತಿಗಳಿಗೆ ನೆಲದ ನಂಟಿನ ಅಂಟು ಹೆಚ್ಚು ರುಚಿಸುವುದೆಂಬ ಆಶಯ ನನ್ನದು’ ಎಂದಿದ್ದಾರೆ. ಧಾರವಾಡದ ಮಕ್ಕಳ ಮಾಸಿಕ ‘ಗುಬ್ಬಚ್ಚಿ ಗೂಡು’ ಸಂಪಾದಕ ಶಂಕರ ಹಲಗತ್ತಿ ಈ ಕೃತಿಗೆ ಬೆನ್ನುಡಿ ಬರೆದಿದ್ದಾರೆ.
ನಾಮದೇವ ಕಾಗದಗಾರ ಅವರು ಚಿತ್ರಕಾರರು. ಹವ್ಯಾಸಿ ಪತ್ರಕರ್ತರು. ವನ್ಯಜೀವಿ ಛಾಯಾಗ್ರಾಹಕ ಹಾಗೂ ವ್ಯಂಗ್ಯಚಿತ್ರಕಾರರು. ಮೂಲತಃ ಹಾವೇರಿ ಜಿಲ್ಕೆಯ ( ಜನನ: 14-05-1976) ರಾಣೆಬೆನ್ನೂರು ನವರು. ಫೈನ್ ಆರ್ಟ್ಸ್ ಪದವೀಧರರು. ಸದ್ಯ, ರಾಣೆಬೆನ್ನೂರಿನ ಖಾಸಗಿ ಕಾಲೇಜಿನಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 10 ಸಾವಿರಕ್ಕೂ ಹೆಚ್ಚು ಇವರ ವ್ಯಂಗ್ಯಚಿತ್ರಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಚಿತ್ರಕಲೆ, ವ್ಯಂಗ್ಯಚಿತ್ರ ಹಾಗೂ ವನ್ಯಜೀವಿ ಛಾಯಾಗ್ರಹಣಕ್ಕೆ ಸೇರಿ 50 ಕ್ಕೂ ಹೆಚ್ಚು ರಾಷ್ಟ್ರೀಯ, ಅಂತಾರಾಷ್ಟ್ರೀಯ ಬಹುಮಾನಗಳು ಲಭಿಸಿವೆ. ಕರ್ನಾಟಕ ರಾಜ್ಯ ಕಾರ್ಯ ನಿರತ ಪತ್ರಕರ್ತ ಸಂಘದಿಂದ 2018 ನೇ ಸಾಲಿನ ಕೆಯುಡಬ್ಲ್ಯು ಜೆ ಪ್ರಶಸ್ತಿ ದೊರೆತಿದೆ. 20 ಅಡಿ ಉದ್ದದ ಕ್ಯಾನ್ ...
READ MORE