ಇವನಾರವ

Author : ಯೋಗೇಶ್ ಮಾಸ್ಟರ್‌

Pages 328

₹ 250.00




Year of Publication: 2016
Published by: ರಾಜಮಾರ್ಗ ಸಾಹಿತ್ಯ ಸಂಸ್ಕೃತಿ
Phone: 08880660347

Synopsys

ಈ ಕೃತಿಯ ತಲೆಬರಹವೇ ವಚನವೊಂದರ ಸಾಲಾಗಿದೆ. ಸದ್ಯ ಒಬ್ಬರು ಮತ್ತೊಬ್ಬರಿಗೆ ಅನ್ಯರಾಗುತ್ತಿರುವ ದಿನಗಳಲ್ಲಿ ಇವನಾರವ ಕೃತಿ, ಒಳಗೊಳ್ಳುವಿಕೆಯ, ಕೂಡಿಕೊಳ್ಳುವ ಅಗತ್ಯವನ್ನು ಎತ್ತಿ ಹಿಡಿಯುತ್ತದೆ. ಅಂತಹದೊಂದು ಮಾನವೀಯ ತುಡಿತವೇ ಇಲ್ಲಿರುವ ಎಲ್ಲ ಬರಹಗಳನ್ನು ಬರೆಸಿದೆ. ಇಲ್ಲಿ ಬೇರೆ ಬೇರೆ ವಿಷಯ ವೈವಿಧ್ಯಗಳನ್ನೊಳಗೊಂಡ 47 ಲೇಖನಗಳಿವೆ. ಹಲವು ಲಲಿತ ಪ್ರಬಂಧಗಳನ್ನು ಹೋಲುತ್ತವೆ. ವಿವಾದದ ಸ್ಫೋಟಕಗಳನ್ನು ಎದೆಯೊಳಗೆ ಹೊತ್ತುಕೊಂಡ ಕೆಲವು ಬರಹಗಳೂ ಇವೆ. “ನೀವು ಕರೆ ಮಾಡುತ್ತಿರುವ ಚಂದಾದಾರರು...” ಎನ್ನುವ ಯಾಂತ್ರಿಕ ಹೇಳಿಕೆಯನ್ನು ಇಟ್ಟುಕೊಂಡು ಯೋಗೇಶ್ ಅವರು ಬದುಕಿನ ವಿವಿಧ ಮಗ್ಗುಲನ್ನು ಶೋಧಿಸುವ ಸುಂದರ ಬರಹವನ್ನು ಬರೆಯುತ್ತಾರೆ. ನಮ್ಮ ನಮ್ಮ ವ್ಯಾಪ್ತಿಯ ಗುಣಗಳನ್ನು ಕಟ್ಟಿಕೊಳ್ಳಬೇಕಾದವರು ನಾವೇ. ನಮ್ಮ ವ್ಯಾಪ್ತಿ ಪ್ರದೇಶದಲ್ಲಿ ಇರುವವರೆಲ್ಲರೂ ನಾವು ನೋಡಿದಂತೆಯೇ ಕಾಣುತ್ತಾರೆ ಎನ್ನುವುದರೊಂದಿಗೆ ಮನುಷ್ಯನೊಂದಿಗೆ ಸಾಧ್ಯವಾಗುವ ಸಂವಹನದ ಬಗ್ಗೆ ಮಾತನಾಡುತ್ತಾರೆ. “ತಾಯಿ ಚಾಮುಂಡಿ...' ಒಂದು ವ್ಯಂಗ್ಯ ಧಾಟಿಯ ಬರಹ. ಇಲ್ಲಿ ತಾಯಿ ಚಾಮುಂಡಿಯ ಜೊತೆಗೆ ಮಾತುಕತೆ ನಡೆಸುವ ನೆಪದಲ್ಲಿ ವರ್ತಮಾನವನ್ನು ಅವರು ವಿಡಂಬಿಸುತ್ತಾರೆ. ಇಂತಹ ವ್ಯಂಗ್ಯಧಾಟಿಯ ಬರಹಗಳೂ ಹಲವಿವೆ. ಚಿಕ್ಕಮ್ಮನ ಮದುವೆ'ಯಂತಹ ನವೋದಯ ಶೈಲಿಯ ಬರಹಗಳೂ ಇವೆ. ವೈಚಾರಿಕತೆಯನ್ನು ಮೈಗೂಡಿಸಿಕೊಂಡ ನೇರ ಲೇಖನಗಳೂ ಇಲ್ಲಿ ನಮ್ಮನ್ನು ಸೆಳೆಯುತ್ತವೆ.

About the Author

ಯೋಗೇಶ್ ಮಾಸ್ಟರ್‌
(20 December 1968)

ಲೇಖಕ, ನಾಟಕಕಾರ, ಚಲನಚಿತ್ರ- ಸಂಗೀತ ನಿರ್ದೇಶಕ ಯೋಗೇಶ್ ಮಾಸ್ಟರ್ ಅವರು ಜನಪ್ರಿಯ-ಪ್ರಮುಖ ಲೇಖಕರು. ಕಾದಂಬರಿ-ನಾಟಕ-ಕವಿತೆ-ಮಕ್ಕಳ ಸಾಹಿತ್ಯ ಹೀಗೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಬರೆಯುತ್ತಿರುವ ಮಾಸ್ಟರ್‌ ಅವರು ಇದುವರೆಗೆ 230ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಕಾವ್ಯ, ಕತೆ, ಕಾದಂಬರಿ, ಪ್ರಬಂಧಗಳು, ಸಂಶೋಧನಾ ಲೇಖನಗಳು, ನಾಟಕ, ಮಕ್ಕಳ ಸಾಹಿತ್ಯ, ಮನೋವೈಜ್ಞಾನಿಕ ಮತ್ತು ವೈಚಾರಿಕ ಲೇಖನಗಳು, ಗೀತನಾಟಕ, ಚಿತ್ರಕತೆ, ಸಂಭಾಷಣೆ ಮತ್ತು ಗೀತ ಸಾಹಿತ್ಯಗಳ ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ. ಹೆಸರಿಸಲು ಕೆಲವು, ಮರಳಿ ಮನೆಗೆ, ಜೀವನ ಸಂಜೀವನ, ಕೊನೆಯ ಅಂಕ, ಮಳೆ ಬಂದು ನಿಂತಾಗ, ಅಮೃತ, ಸಮಾನಾಂತರ ರೇಖೆಗಳು, ರಾಧೇ ಶ್ಯಾಮನ ಪ್ರೇಮ ...

READ MORE

Related Books