ಹೊರಳುನೋಟ

Author : ಮಂಜುನಾಥ ಎಂ. ಅದ್ದೆ

Pages 272

₹ 270.00




Year of Publication: 2019
Published by: ಸಿರಿವರ ಪ್ರಕಾಶನ
Address: ನಂ.M37/B, 8ನೇ ಕ್ರಾಸ್, ಲಕ್ಷ್ಮೀ ನಾರಾಯಣಪುರ, ಬೆಂಗಳೂರು-560021
Phone: 984410706

Synopsys

ಲೇಖಕ ಮಂಜುನಾಥ್ ಅದ್ದೆ ಅವರು ರಚಿಸಿರುವ ವ್ಯಕ್ತಿಚಿತ್ರಣಗಳ ಕೃತಿ  ‘ಹೊರಳು ನೋಟ’. ವರ್ತಮಾನದಲ್ಲಿ ಸೃಷ್ಟಿಯಾಗುತ್ತಿರುವ ಕೇಡು ಮತ್ತು ವಿಕಾರಗಳನ್ನು ಕಂಡಾಗಲೆಲ್ಲ ಉರಿದು ಬೀಳುವ ಅದ್ದೆ ಅವುಗಳನ್ನು ಹಿಮ್ಮೆಟ್ಟಿಸಲು ತಮ್ಮದೇ ಆದ ಖಾಸಾ ಪಡೆಯೊಂದಿಗೆ ಸದಾ ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿರುತ್ತಾರೆ. ಈಗಾಗಲೇ ತಮ್ಮ ಬರಹಗಳ ಮೂಲಕ ಸಾಮಾಜಿಕ ಸತ್ಯದ ದಾರಿಯನ್ನು ಶೋಧಿಸುತ್ತಿರುವ ಅದ್ದೆ ಅವರು ತಮ್ಮ ಬದುಕು ಮತ್ತು ಬರವಣಿಗೆಯಲ್ಲಿ ಸಾಮಾಜಿಕ ಜವಾಬ್ದಾರಿಗಳನ್ನು ಮುಕ್ಕಾಗದಂತೆ ಕಾಪಿಟ್ಟುಕೊಂಡಿದ್ದಾರೆ.

ಈ ಕೃತಿಯಲ್ಲಿ ಸಾಂಸ್ಕೃತಿಕ ಲೋಕದ ವ್ಯಕ್ತಿಗಳ ಪರಿಚಯಾತ್ಮಕ ಬರಹಗಳಂತೆ ಕಂಡರೂ ಅದರಾಚೆಗೆ ಕರ್ನಾಟಕದ ಸಾಹಿತ್ಯ, ಸಂಸ್ಕೃತಿ, ರಾಜಕಾರಣದ ಜೊತೆಗೆ ಕನ್ನಡದ ಸಾಮಾಜಿಕ ಬದುಕನ್ನು ಪ್ರಭಾವಿಸಿದ ಬಗೆಯನ್ನು ವಿವರಿಸುತ್ತವೆ.  ಕರ್ನಾಟಕದ ಎಲ್ಲ ಜನಪರ ಚಳುವಳಿಗಳ ಭಾಗವಾಗಿ ಲೇಖಕರು ಇರುವುದರಿಂದ  ಇಲ್ಲಿಯ ಬರಹಗಾರರ ಬಗ್ಗೆ ಅಷ್ಟೇ ತೀವ್ರ ಅಭಿಮಾನದಿಂದ ಬರೆದಿದ್ದಾರೆ.

About the Author

ಮಂಜುನಾಥ ಎಂ. ಅದ್ದೆ
(22 July 1973)

ಪತ್ರಿಕೋದ್ಯಮ, ಸಾಹಿತ್ಯ, ಹೋರಾಟ- ಈ ಮೂರೂ ದೋಣಿಗಳಲ್ಲಿ ಪಯಣಿಸುತ್ತಿರುವ ಮಂಜುನಾಥ ಅದ್ದೆ ಅವರದ್ದು ಪ್ರತಿಭಾವಂತ ವ್ಯಕ್ತಿತ್ವ. ಬೆಂಗಳೂರು ಉತ್ತರ ತಾಲ್ಲೂಕಿನ ಅದ್ದೆ ಗ್ರಾಮದವರಾದ ಮಂಜುನಾಥ್ ಮೂಲತಃ ಕೃಷಿಕ ಕುಟುಂಬಕ್ಕ ಸೇರಿದವರು. 1973ರ ನಡುಭಾಗದಲ್ಲಿ ಹುಟ್ಟಿದ ಮಂಜುನಾಥ್ ಅವರ ತಂದೆ ಮುನಿಹನುಮಯ್ಯ, ತಾಯಿ-ಲಕ್ಷ್ಮಮ್ಮ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರದಲ್ಲಿ ಎಂ.ಎ.ಸ್ನಾತಕೋತ್ತರ ಪದವಿ ಪಡೆದ ನಂತರ ಬದುಕಿನ ಮಾರ್ಗದ ಬಗ್ಗೆ ಅವರಿಗೆ ಗೊಂದಲಗಳೇ ಇರಲಿಲ್ಲ. ದೊಡ್ಡಬಳ್ಳಾಪುರದ ಶ್ರೀಕೊಂಗಾಡಿಯಪ್ಪ ಕಾಲೇಜಿನಲ್ಲಿ ಎರಡು ವರ್ಷಗಳ ಕಾಲ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದರು. ಈ ಹೊತ್ತಿಗಾಗಲೇ ಸಮಾಜಮುಖಿ ಚಳವಳಿ, ಹೋರಾಟಗಳಲ್ಲಿ ತೊಡಗಿಕೊಂಡಿದ್ದ ಮಂಜುನಾಥ್ ಅದ್ದೆ ಹಲವು ಸಂಸ್ಥೆಗಳನ್ನು ಹುಟ್ಟುಹಾಕಿದ್ದರು. ತನ್ನೊಳಗಿನ ...

READ MORE

Related Books