`ಸುಗಮ ಸಂಗೀತ ಒಂದು ಸಿಂಹಾವಲೋಕನ' ಎಚ್.ಆರ್. ಲೀಲಾವತಿ ಅವರ ಲೇಖನ ಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಭಾರತ ಅನೇಕ ಭಿನ್ನ ಭಿನ್ನ ಸಂಸ್ಕೃತಿಗಳ ತವರು. ಇಲ್ಲಿ ಹಲವು ಹತ್ತು ಭಾಷೆಗಳಿವೆ. ಜಾತಿಮತಗಳಿವೆ. ಹಲವು ಧರ್ಮಗಳ ನೆಲೆವೀಡಾಗಿದೆ ಭಾರತ. ಅಲ್ಲದೆ ಭಕ್ತಿಪಂಥವೂ ಹಲವಾರು. ಧರ್ಮಗುರುಗಳೂ ಅನೇಕರಾಗಿ ಹೋಗಿದ್ದಾರಿಲ್ಲಿ. ದ್ವೈತ, ಅದ್ವೈತ, ವಿಶಿಷ್ಟಾದ್ವೈತಗಳ ತವರೂ ಇದೆ. ಹರಭಕ್ತಿ ಇದೆ. ಹರಿಭಕ್ತಿ ಇದೆ. ಹಾಗಾಗಿ ನಂಬಿಕೆಗಳು ಹಲವಾರು ಎಂಬುವುದು ಈ ಕೃತಿಯಲ್ಲಿ ಮೈದಳೆದು ನಿಂತಿದೆ
ಸುಗಮ ಸಂಗೀತ ಕ್ಷೇತ್ರದಲ್ಲಿ ಛಾಪು ಮೂಡಿಸಿರುವ ಹೆಚ್.ಆರ್. ಲೀಲಾವತಿ ಜನಿಸಿದ್ದು 1935 ಫೆಬ್ರುವರಿ 8ರಂದು. ಮೂಲತಃ ಬೆಂಗಳೂರಿ ನವರು. ಬಾಲ್ಯದಿಂದಲೇ ಸಂಗೀತ ಕ್ಷೇತ್ರದ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದರು. ಇವರ ಕನ್ನಡ ಹಾಡುಗಳು ಮಾಸ್ಕೊ ರೇಡಿಯೋ ಕೇಂದ್ರದಿಂದಲೂ ಪ್ರಸಾರವಾಗಿವೆ. ಸಿನಿಮಾಗಳಿಗೂ ಹಾಡಿರುವ ಇವರು ಸಾಹಿತ್ಯ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಮದ್ರಾಸಿನಲ್ಲಿ ನಡೆದ ಸಂಗೀತ ಸಮ್ಮೇಳನ, ಅಮೆರಿಕದ ಟ್ರೆನ್‌ಟನ್ ಪ್ರಥಮ ವಿದೇಶಿ ಕನ್ನಡ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಕರ್ನಾಟಕ ಕಲಾತಿಲಕ, ರಾಜ್ಯೋತ್ಸವ ಪ್ರಶಸ್ತಿ, ಶಿಶುನಾಳ ಷರೀಫ ಪ್ರಶಸ್ತಿ, ಡಾ. ಎಸ್.ಕೆ. ಕರೀಂಖಾನ್ ಪ್ರಶಸ್ತಿ ಮುಂತಾದ ಗೌರವಗಳು ಲಭಿಸಿವೆ. ಇವರ ಪ್ರಮುಖ ಕೃತಿಗಳೆಂದರೆ ಲಹರಿ, ಚಿತ್ತಾರ, ಸಾವಿರದ ...
READ MORE