‘ಕಾಳಾಮುಖ ದರ್ಶನ’ ಎಸ್. ಎಸ್. ಹಿರೇಮಠ ಅವರ ಅಧ್ಯಯನ ಲೇಖನಗಳಾಗಿವೆ. ನಮ್ಮ ಜನಪದ ಸಂಬಂಧಿ ಆಚರಣೆಗಳು ಮತ್ತು ಸಂಸ್ಕೃತಿಯ ಬಗ್ಗೆ ಆಳವಾಗಿ ತಿಳಿದುಕೊಳ್ಳಬಯಸುವ ಪ್ರತಿಯೊಬ್ಬರಿಗೂ ಈ ಸರಣಿ ಪುಸ್ತಕಗಳಲ್ಲಿ ಧಾರಾಳವಾದ ಸಾಮಗ್ರಿ ಇದೆ. ವೈದಿಕ, ವೈದಿಕೇತರ ಮತ ಧರ್ಮ ದರ್ಶನಗಳ ಬಗ್ಗೆ ಒಂದು ವ್ಯಾಖ್ಯಾನ.
ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ಕೊಟ್ಟೂರೇಶ್ವರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದ ಎಸ್.ಎಸ್. ಹಿರೇಮಠ ಅವರು ಬೆಳಗಾವಿ ಜಿಲ್ಲೆಯ ಸಾಣಿಕೊಪ್ಪದವರು. ರಾಯಣ್ಣನ ಸಂಗೊಳ್ಳಿ, ಸಂಗ್ಯಾಬಾಳ್ಯಾದ ಬೈಲವಾಡ, ಬೈಲಹೊಂಗಲ, ಕಿತ್ತೂರು ಪರಿಸರದಲ್ಲಿ ಬರುವ ಊರು ಸಾಣಿಕೊಪ್ಪ. ಬೆಳಗಾವಿಯಲ್ಲಿ ಬಿ.ಎ. ಮತ್ತು ಧಾರವಾಡದಲ್ಲಿ ಎಂ. ಎ ಪದವಿ ಪಡೆದ ನಂತರ ಹಿರೇಮಠರು ಹೊಸಪೇಟೆ, ಹಡಗಲಿ, ಹರಪನಹಳ್ಳಿಗಳಲ್ಲಿ ಕನ್ನಡ ಅಧ್ಯಾಪಕರಾಗಿ ಕೆಲಸ ಮಾಡಿದ್ದರು. ಪ್ರಗತಿಪರ ಸಂಘಟನೆ ಮತ್ತು ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ದಲಿತರ ಇತಿಹಾಸ ಮತ್ತು ಸಂಸ್ಕೃತಿ ಪರಂಪರೆಯ ಕುರಿತು ಶೋಧನೆ ನಡೆಸಿದ್ದಾರೆ. ದರ್ಶನಗಳ ಸರಣಿಯಲ್ಲಿ ಪಾಶುಪತ ದರ್ಶನ, ಕಾಳಾಮುಖ ದರ್ಶನ, ಲಾಕುಳ ದರ್ಶನ ಕೃತಿಗಳು ಪ್ರಕಟಗೊಂಡಿವೆ. ...
READ MOREಹೊಸತು - ಫೆಬ್ರವರಿ -2005
ಅಪಾರ ಓದಿನ ಫಲದಿಂದ ಸಾಕಷ್ಟು ಅನುಭವವನ್ನು ಗಳಿಸಿ ಕೊಂಡ ಶ್ರೀ ಎಸ್. ಎಸ್. ಹಿರೇಮಠ ಅವರು ಇದೀಗ ನಮ್ಮ ಮುಂದೆ ಕಾಳಾಮುಖ ದರ್ಶನವನ್ನು ಎಳೆ ಎಳೆಯಾಗಿ ಹರಡಿದ್ದಾರೆ. ಸಾಂಖ್ಯ ಪಾಶುಪತಗಳನ್ನು ಈಗಾಗಲೇ ಹೊಸ ದೃಷ್ಟಿಕೋನದಿಂದ ಪರಿಚಯಿಸಿದಂತೆ ಇಲ್ಲಿಯೂ ಅನೇಕ ಶಾಸನಗಳು ಮತ್ತು ಆಕರ ಗ್ರಂಥಗಳ ನೆರವಿನಿಂದ ಶೈವತತ್ವದ ಶಾಖೆಯೊಂದನ್ನು ಗುರುತಿಸುತ್ತ ತಮ್ಮ ವಿಚಾರವನ್ನು ಮಂಡಿಸಿದ್ದಾರೆ. ಕರ್ನಾಟಕ ದರ್ಶನ ಮಾಲೆಯಲ್ಲಿನ ಮೂರನೆಯ ಕೃತಿಯಾದ ಇದು ಎಲ್ಲ ಜನರಿಂದ ಮನ್ನಣೆ ಪಡೆಯುವಲ್ಲಿ ಸಂಶಯವೇನೂ ಇಲ್ಲ. ನಮ್ಮ ಜನಪದ ಸಂಬಂಧೀ ಆಚರಣೆಗಳು ಮತ್ತು ಸಂಸ್ಕೃತಿಯ ಬಗ್ಗೆ ಆಳವಾಗಿ ತಿಳಿದುಕೊಳ್ಳಬಯಸುವ ಪ್ರತಿಯೊಬ್ಬರಿಗೂ ಈ ಸರಣಿ ಪುಸ್ತಕಗಳಲ್ಲಿ ಧಾರಾಳವಾದ ಸಾಮಗ್ರಿ ಇದೆ. ವೈದಿಕ, ವೈದಿಕೇತರ ಮತ ಧರ್ಮ ದರ್ಶನಗಳ ಬಗ್ಗೆ ಒಂದು ವ್ಯಾಖ್ಯಾನ.