ಶಿವರಾಮ ಕಾರಂತರ ಲೇಖನಗಳು-ಸಂಪುಟ- 7

Author : ಮಾಲಿನಿ ಮಲ್ಯ

Pages 382

₹ 150.00




Year of Publication: 1995
Published by: ಪ್ರಸಾರಾಂಗ
Address: ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳ ಗಂಗೋತ್ರಿ- 574199

Synopsys

‘ಶಿವರಾಮ ಕಾರಂತರ ಲೇಖನಗಳು-ಸಂಪುಟ- 7’ ನಾಡು, ನಿಸರ್ಗ, ಪರಿಸರದ ಕುರಿತಾಗಿ ಶಿವರಾಮ ಕಾರಂತರು ಬರೆದಿರುವ ಲೇಖನಗಳ ಸಂಕಲನ. ಈ ಕೃತಿಯನ್ನು ಲೇಖಕಿ ಬಿ. ಮಾಲಿನಿ ಮಲ್ಯ ಅವರು ಸಂಪಾದಿಸಿದ್ದಾರೆ. ಇಲ್ಲಿ ನಾಡು ಮತ್ತು ನಿಸರ್ಗ ಎಂಬ ಮೊದಲ ಭಾಗದಲ್ಲಿ ‘ಕನ್ನಡ ಜಿಲ್ಲೆಯಿಂದ (ದಕ್ಷಿಣ) ಕೊಡಗು ದೇಶಕ್ಕೆ’, ಶ್ರೀರಂಗಪಟ್ಟಣ, ಅಮೇರಿಕಾ, ಮಥುರಾ ಬೃಂದಾವನ, ಫೇಟೆಪುರ್ ಸಿಕ್ರಿ, ಕರ್ನಾಟಕದ ಕೆಲವು ಪ್ರಸಿದ್ಧ ಗುಹಾಲಯಗಳು, ಭೋಪಾಲ, ಶ್ವೇತಶಿಲೆಯ ಪ್ರೇಮಕಾವ್ಯ, ಎರಡು ಸೊಗಸುಗಳು, ಸಂಚಿ, ಇಕ್ಕೇರಿಯ ಕನಸು, ಗೆರೆಸೊಪ್ಪೆ, ಶ್ರೀರಂಗಪಟ್ಟಣ, ನನ್ನ ಊರಿನ ಸೊಗಸುಗಳು ಸೇರಿದಂತೆ 67 ಲೇಖನಗಳಿವೆ.

About the Author

ಮಾಲಿನಿ ಮಲ್ಯ
(29 June 1951)

ಶಿವರಾಮ ಕಾರಂತರ ಬದುಕು ಬರಹಗಳನ್ನು ಕನ್ನಡ ಓದುಗರಿಗೆ ಉಣಬಡಿಸಿ, ಕಾರಂತರ ವೈಚಾರಿಕ ನೆಲೆ, ಜೀವನ ಪ್ರೀತಿಯನ್ನು ಮತ್ತಷ್ಟು ಅರ್ಥೈಸಿಕೊಳ್ಳುವಲ್ಲಿ ಕೊಡುಗೆ ನೀಡಿದವರು ಕಾದಂಬರಿಗಾರ್ತಿ ಮಾಲಿನಿ ಮಲ್ಯ .ಮೂಲತಃ ಉಡುಪಿಯವರು. ಭಾರತೀಯ ಜೀವವಿಮಾನಿಗಮದ ನಿವೃತ್ತ ಉದ್ಯೋಗಿ. ಕೃತಿಗಳು: ನಾನು ಕಂಡ ಕಾರಂತರು (ವ್ಯಕ್ತಿಚಿತ್ರ), ಗೊಂದಲಪುರದ ನಿಂದಲರು (ಕಾದಂಬರಿ), ದಾಂಪತ್ಯ ಗಾಥೆ (ಕಿರುಕಾದಂಬರಿ), ಶಿವರಾಮಕಾರಂತರ ಕಿನ್ನರಲೋಕ (ಲೇಖನ ಸಂಗ್ರಹ), ಚಿಣ್ಣರ ಲೋಕದಲ್ಲಿ ಕಾರಂತರು ಭಾಗ 1 ಮತ್ತು 2, ಸಾಹಿತ್ಯೇತರ ಕಾರಂತರು, ಕಾರಂತ ಉವಾಚ,  ’ಶಿವರಾಮ ಕಾರಂತರ ವಾಙ್ಮಯ ವೃತ್ತಾಂತ, ಶಿವರಾಮ ಕಾರಂತರ ಕೃತಿ ಕೈಪಿಡಿ, ಶಿವರಾಮ ಕಾರಂತರ ಲೇಖನಗಳು-8 ಸಂಪುಟಗಳು, ಪಕ್ಷಿಗಳ ಅದ್ಭುತ ...

READ MORE

Related Books