ಭೂಮಿಯನ್ನು ಬಳಸಿಕೊಳ್ಳವಲ್ಲಿ ಇಂದಿನ ಕಾನೂನು ಸಾಮಾಜಿಕ ವ್ಯವಸ್ಥೆ ಯಶಸ್ವಿಯಾಗಿಲ್ಲ ಎಂಬ ಕೊರಗು ಲೇಖಕ ಡಾ. ಆರ್. ಚಂದ್ರಶೇಖರ ರಾಮೇನಹಳ್ಳಿ ಅವರು ತಮ್ಮ ’ಭೂಮಿ ಮತ್ತು ಬದುಕು’ ಕೃತಿಯ ಮೂಲಕ ವ್ಯಕ್ತಪಡಿಸಿದ್ದಾರೆ.
ಭೂಮಿ ಏಕೆ?, ಭೂಮಿ ಸಿಗುವುದು ಎಲ್ಲಿ?, ಭೂಮಿ ಸುಧಾರಣೆ ಸಾಧನೆಗಳು ಏಕೆ ತಪ್ಪಾಗಿವೆ? ಆದಿವಾಸಿಗಳ ಜೀವನವನ್ನು ಹೇಗೆ ಹಾಳು ಮಾಡಲಾಗುತ್ತಿದೆ? ಜನರಿಗಾಗಿ ಭೂಮಿ ಕಾರ್ಯಕ್ರಮ ಇಂತಹ ಬರೆಹಗಳು ಕೃತಿಯಲ್ಲಿದ್ದು, ಕೊನೆಗೆ ಭೂಮಿ ಹಾಗೂ ಅದರ ಮರುಹಂಚಿಕೆ ಕುರಿತ ಪ್ರಮುಖ ಮಾಹಿತಿ, ಪ್ರಮುಖ ಆಹಾರ ಮತ್ತು ಹಸಿವಿನ ಮಾಹಿತಿ, ಪ್ರಪಂಚದ ಭೂ ಸುಧಾರಣೆಗಳು, ಭಾರತದ ಗ್ರಾಮೀಣ ಮನೆಗಳ ಆಯ್ಕೆ ಮಾಡಿದ ಮಾಹಿತಿ ಕುರಿತಂತೆ ಅನುಬಂಧಗಳಿವೆ.
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ರಾಮೇನಹಳ್ಳಿ ಗ್ರಾಮದ ಡಾ. ಆರ್.ವಿ. ಚಂದ್ರಶೇಖರ ರಾಮೇನಹಳ್ಳಿ ಅವರು ಶಿವಾರಪಟ್ಟಣದಲ್ಲಿ ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣ ಪೂರೈಸಿ, ಮಾಲೂರಿನಲ್ಲಿ ಪದವಿ ನಂತರ ಬೆಂಗಳೂರು ವಿಶ್ವವಿದ್ಯಾಲಯದಿಂದ ಸಮಾಜಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಮಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್. ಡಿ ಪಡೆದಿದ್ದಾರೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿದ್ದು, ಜಾಗತೀಕರಣ ಮತ್ತು ಸಮಾಜ, ಭಾರತದ ಆರ್ಥಿಕತೆ ಮತ್ತು ವಿಶೇಷ ವಲಯಗಳು, ಭೂಮಿ ಮತ್ತು ಬದುಕು, ಅಭಿವೃದ್ಧಿ ಎಂಬ ಅವನತಿ, ಅಭಿವೃದ್ಧಿ ಕೊಡಲಿಗೆ ಒಕ್ಕಲುತನದ ಕೊರಳು, ಡಿಟೆಕ್ಟೀವ್ ಡೆವೆಲಪ್ ಮೆಂಟ್, ಸಮಕಾಲೀನ ಮಹಿಳೆ ಮತ್ತು ಆರೋಗ್ಯ-ಒಂದು ಸಮಾಜಶಾಸ್ತ್ರೀಯ ಚಿಂತನೆ, ...
READ MORE