ಪತ್ರಿಕೋದ್ಯಮ ಪ್ರವೇಶ

Author : ಸಿಬಂತಿ ಪದ್ಮನಾಭ ಕೆ.ವಿ

Pages 160

₹ 120.00




Year of Publication: 2022
Published by: ವಸಂತ ಪ್ರಕಾಶನ
Address: 360, 10/B ಮೇನ್, ಜಯನಗರ 3ನೇ ಬ್ಲಾಕ್, ಬೆಂಗಳೂರು - 11
Phone: 9986020852

Synopsys

ಲೇಖಕ ಸಿಬಂತಿ ಪದ್ಮನಾಭ ಕೆ.ವಿ ಅವರ ಲೇಖನಗಳ ಸಂಗ್ರಹ 'ಮಾಧ್ಯಮ ಅಧ್ಯಯನ ಪ್ರವೇಶಿಕೆ' ಸರಣಿಯ ಮೊದಲ ಪುಸ್ತಕ ‘ಪತ್ರಿಕೋದ್ಯಮ ಪ್ರವೇಶ’ . ಬೆಂಗಳೂರಿನ ವಸಂತ ಪ್ರಕಾಶನ ಇದನ್ನು ಹೊರತಂದಿದೆ. ಪ್ರೊ. ನಿರಂಜನ ವಾನಳ್ಳಿ ಯವರು ಬೆನ್ನುಡಿ ಬರೆದಿದ್ದು, ಸಿಬಂತಿ ಪದ್ಮನಾಭ ಅವರ ಪಿಎಚ್ಡಿ ಮಾರ್ಗದರ್ಶಕರಾದ ಡಾ.ಸತೀಶ್ ಕುಮಾರ್ ಅಂಡಿಂಜೆಯವರು ಮುನ್ನುಡಿ ಬರೆದಿದ್ದಾರೆ.

`ಅಧ್ಯಾಪನಕ್ಕೆ ತೊಡಗಿದ ಆರಂಭದಲ್ಲಿ ಪತ್ರಿಕೋದ್ಯಮ ಓದೋ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕದಂಥ ಒಂದು ಪುಸ್ತಕ ಇರಬಾರದು ಅಂತಲೇ ಭಾವಿಸಿದ್ದೆ.ಮಾಧ್ಯಮರಂಗಕ್ಕೆ ಪ್ರವೇಶಿಸುವವರು ಸಿಲೆಬಸಿಗೆ ಅಂಟಿಕೊಳ್ಳಬಾರದು; ಎಷ್ಟು ಸಾಧ್ಯವೋ ಅಷ್ಟು ಓದಬೇಕು. ಅದರೊಳಗೆ ವರ್ತಮಾನ, ಇತಿಹಾಸ, ರಾಜಕೀಯ, ಅರ್ಥಶಾಸ್ತ್ರ, ಸಾಹಿತ್ಯ ಎಲ್ಲವೂ ಇರಬೇಕು. ಪಠ್ಯಪುಸ್ತಕ ಅಂತ ಮಾಡಿಬಿಟ್ಟರೆ ಮಕ್ಕಳು ಅದನ್ನಷ್ಟೇ ಗಟ್ಟಿ ಹಿಡಿದು ಕುಳಿತುಬಿಟ್ಟಾರು ಎಂಬ ಭಯವೇ ನನ್ನ ಭಾವನೆಗೆ ಕಾರಣವಾಗಿತ್ತು. ಆದರೆ ಹನ್ನೆರಡು ವರ್ಷ ವಿದ್ಯಾರ್ಥಿಗಳನ್ನು ನೋಡಿದ ಮೇಲೆ ನನ್ನ ಭಾವನೆ ಬದಲಾಗಿದೆ. ಮಕ್ಕಳು ಇಷ್ಟನ್ನಾದರೂ ಓದಲಿ ಅನಿಸತೊಡಗಿದೆ. ಅವರ ಉತ್ತರಪತ್ರಿಕೆಗಳನ್ನು ಓದಿದಾಗಲೆಲ್ಲ ಈ ಭಾವನೆ ಇನ್ನಷ್ಟು ಗಟ್ಟಿಯಾಗಿದೆ. ಏನನ್ನು ಓದಬೇಕು ಎಂಬ ಬಗ್ಗೆ ಆದರೂ ಒಂದು ರೂಪರೇಖೆ ಬೇಕಲ್ಲ? ಆ ಕಾರಣಕ್ಕಾಗಿ ಈ ಕೃತಿಯ ಸೃಷ್ಟಿಯಾಯಿತು' ಎನ್ನುತ್ತಾರೆ ಕೃತಿಯ ಲೇಖಕ ಸಿಬಂತಿ ಪದ್ಮನಾಭ ಕೆ.ವಿ ಅವರು.

About the Author

ಸಿಬಂತಿ ಪದ್ಮನಾಭ ಕೆ.ವಿ

ಸಿಬಂತಿ ಪದ್ಮನಾಭ ಕೆ. ವಿ. ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದವರು. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಬಿಎ ವ್ಯಾಸಂಗ , ಆನಂತರ ಮಂಗಳೂರು ವಿಶ್ವವಿದ್ಯಾನಿಲಯದಿಂದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.  ಯುಜಿಸಿ ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆಯೊಂದಿದ್ದು ಫೆಲೋಶಿಪ್‌ಗೆ ಆಯ್ಕೆಯಾಗಿ,  'ವಿಜಯ್ ಟೈಮ್' ಹಾಗೂ 'ಡೆಕ್ಕನ್ ಹೆರಾಲ್ಡ್' ದೈನಿಕಗಳಲ್ಲಿ ಪತ್ರಕರ್ತರಾಗಿದ್ದರು.   ಪ್ರಸ್ತುತ ತುಮಕೂರು ವಿಶ್ವವಿದ್ಯಾನಿಲಯದ ಘಟಕ ಸಂಸ್ಥೆ ವಿಶ್ವವಿದ್ಯಾನಿಲಯ ಕಲಾ ಕಾಲೇಜಿನಲ್ಲಿ ಪತ್ರಿಕೋದ್ಯಮ ಸಹಾಯಕ ಪ್ರಾಧ್ಯಾಪಕರಾಗಿದ್ದು, ರಾಷ್ಟ್ರೀಯ ಸಮ್ಮೇಳನಗಳಲ್ಲಿ ಸಂಶೋಧನ ಪ್ರಬಂಧಗಳನ್ನು ಮಂಡಿಸಿದ್ದಾರೆ. ಯಕ್ಷಗಾನ, ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. “ಪೊರೆ ಕಳಚಿದ ಮೇಲೆ', 'ತುಮಕೂರು ಜಿಲ್ಲೆಯ ...

READ MORE

Related Books