‘ಸಾಹಿತ್ಯ, ಸಂಸ್ಕೃತಿ ಮತ್ತು ಸಮಾಜ’ ಹಿರಿಯ ಸಾಹಿತಿ ಶ್ರೀರಂಗ ಅವರ ಲೇಖನಗಳ ಸಂಕಲನ. ಬುದ್ಧಿ ಮತ್ತು ಭಾವನೆ, ಭಾಷೆ ಮತ್ತು ಭಾವನೆ, ಸಾಹಿತ್ಯ ಮತ್ತು ಶೃಂಗಾರ, ಸಾಹಿತ್ಯ ಮತ್ತು ಜನಜೀವನ, ಸಾಹಿತ್ಯ ಮತ್ತು ಪ್ರಗತಿ(ಪ್ರಗತಿಯ ಮೀಮಾಂಸೆ), ಸಾಹಿತ್ಯ ಮತ್ತು ಸಮಾಜ(ಪ್ರಗತಿಶೀಲ ಸಾಹಿತ್ಯ), ನಮಗೊಂಂದು ಸಂಸ್ಕೃತಿ ಇದೆಯೇ ಮತ್ತು ನಾನೇಕೆ ಬರೆಯುತ್ತೇನೆ ಎಂಬ ವಿದ್ವತ್ ಪೂರ್ಣವಾದ ಎಂಟು ಲೇಖನಗಳಿವೆ.
ಶ್ರೀರಂಗ’ ಎಂದೇ ಖ್ಯಾತರಾಗಿರುವ ಆದ್ಯರಂಗಾಚಾರ್ಯರು ಕನ್ನಡ ನಾಟಕ ಪ್ರಪಂಚಕ್ಕೆ ವಿಶಿಷ್ಟ ಕೊಡುಗೆ ನೀಡಿದ ನಾಟಕಕಾರರು. ಅವರ ತಂದೆ ವಾಸುದೇವಾಚಾರ್ಯ ಜಾಗೀರದಾರ್ ಮತ್ತು ತಾಯಿ ರಮಾಬಾಯಿ. ವಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಅಗರ ಖೇಡದಲ್ಲಿ 1904ರ ಸೆಪ್ಟೆಂಬರ್ 26ರಂದು ಜನಿಸಿದರು. ವಿಜಾಪುರದಲ್ಲಿ ಶಾಲಾ ಶಿಕ್ಷಣ ಪೂರೈಸಿ, 1921ರಲ್ಲಿ ಪುಣೆಯ ಡೆಕ್ಕನ್ ಕಾಲೇಜಿಗೆ ಸೇರಿ ಬಿ. ಎ. (1925) ಪರೀಕ್ಷೆಯಲ್ಲಿ ಉತ್ತೀರ್ಣರಾದರು. 1925ರಲ್ಲಿ ಇಂಗ್ಲೆಂಡಿಗೆ ತೆರಳಿದ ಶ್ರೀರಂಗರು ಲಂಡನ್ ವಿಶ್ವವಿದ್ಯಾಲಯದಲ್ಲಿ ಭಾಷಾಶಾಸ್ತ್ರದಲ್ಲಿ ಎಂ. ಎ. ಪದವಿ ಪಡೆದು 1928ರಲ್ಲಿ ಭಾರತಕ್ಕೆ ಮರಳಿದರು. ಕೆಲವು ಕಾಲ ಹಾಫ್‍ಕಿನ್ ಸಂಸ್ಥೆಯಲ್ಲಿ ನೌಕರಿಯಲ್ಲಿದ್ದು 1930ರಲ್ಲಿ ...
READ MORE