ಮನಸ್ಸಿನ ರಹಸ್ಯಗಳು

Author : ಕೆ. ಪ್ರವೀಣ್ ನಾಯಕ್

Pages 144

₹ 150.00




Year of Publication: 2023
Published by: ಮಾನಸ ಹೀಲಿಂಗ್ ಸೆಂಟರ್
Address: ಬೆಂಗಳೂರು

Synopsys

‘ಮನಸ್ಸಿನ ರಹಸ್ಯಗಳು’ ಕೃತಿಯು ಸುಶ್ಮಿತಾ ಪಿ. ನಾಯಕ್ ಕಿಣಿ ಅವರ ಮೂಲ ಕೃತಿಯಾಗಿದ್ದು, ಕನ್ನಡಕ್ಕೆ ಕೆ. ಪ್ರವೀಣ್ ನಾಯಕ್ ಅವರು ಅನುವಾದಿಸಿದ್ದಾರೆ. ಮಾನಸಿಕ ಖಾಯಿಲೆಗಳಿಗೆ ತುತ್ತಾದವರಿಗೆ ಭರವಸೆಯ ಆಶಾಕಿರಣವಾಗಿ ನೆರವಾಗಿದ್ದಾರೆ. ಮನಸ್ಸಿನ ಬಗ್ಗೆ ತಮ್ಮದೇ ಆದ ನಿಲುವುಗಳನ್ನು ಹಾಗೂ ವಿಶ್ಲೇಷಣೆಗಳನ್ನು ಕೂಡಾ ಈ ಪುಸ್ತಕದಲ್ಲಿ ತಿಳಿಸಿದ್ದಾರೆ. ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಸರಳವಾಗಿ ವಿವರಿಸಿದ್ದಾರೆ. ಮಾನಸಿಕ ಒತ್ತಡಗಳಿಂದ, ತೊಂದರೆಗಳಿಂದ ಬಳಲುತ್ತಿರುವ ಜನರಿಗೆ ಈ ಕೃತಿಯೊಂದು ಉತ್ತಮ ಕೈಪಿಡಿಯಾಗಿದೆ.

About the Author

ಕೆ. ಪ್ರವೀಣ್ ನಾಯಕ್

ಕೆ. ಪ್ರವೀಣ್ ನಾಯಕ್ ಅವರು ಪತ್ರಿಕಾ ಛಾಯಾಗ್ರಾಹಕರಾಗಿ ಹಾಗೂ ಪತ್ರಕರ್ತರಾಗಿ ಕಾರ್ಯನಿರ್ವಹಿಸಿರುತ್ತಾರೆ. ಮನಃಶಾಸ್ತ್ರ ಹಾಗೂ ಆಧ್ಯಾತ್ಮಿಕ ಸಾಧನೆಗಳ ಬಗ್ಗೆ ಸಾಕಷ್ಟು ಪ್ರಯೋಗಗಳನ್ನು ಮಾಡಿರುವ ಅವರು ಯೋಗ, ಧ್ಯಾನ, ಆಧ್ಯಾತ್ಮದಿಂದ ಹಿಡಿದು ಸಮ್ಮೋಹಿನಿಯವರೆಗೂ ನಾನಾ ಕ್ಷೇತ್ರಗಳಲ್ಲಿ ಪರಿಣಿತಿಯನ್ನು ಹೊಂದಿದ್ದಾರೆ. ಕೃತಿಗಳು: ಧ್ಯಾನ ನನ್ನ ಅನುಭವದಲ್ಲಿ, ಜಪ ನನ್ನ ಅನುಭವದಲ್ಲಿ, ರಾಜ್ ಕುಮಾರ್ ಒಂದು ಬೆಳಕು, ದೇವರು ಧರ್ಮ, ಏನಿದರ ಮರ್ಮ ...

READ MORE

Reviews

ಮನಸ್ಸಿನ ಆಟ, ಕಾಟಗಳ ಕುರಿತ ಜೀವನ್ಮುಖಿ ಬರಹ(ಪುಸ್ತಕ ಪರಿಚಯ)

ನಮ್ಮ ದೇಹ ನಮ್ಮನ್ನು ಕಾಪಾಡುತ್ತದೆ. ಆದರೆ ಮನಸ್ಸು ಯಾಮಾರಿಸುತ್ತದೆ. ನಮ್ಮದೇ ಯಾಕೆ ವಂಚಿಸುತ್ತದೆ? ಆಟಗಳಿಗೆ ಬಲಿಯಾಗುತ್ತೇವೆ?' ಇಂಥಾ ಪ್ರಶ್ನೆ ನಮ್ಮಲ್ಲಿ ಹಲವರಿಗೆ ಬಂದಿರಬಹುದು. ಹಲವು ಬಾರಿ ಮನಸ್ಸಿನ ಆಟಕ್ಕೆ ಬಲಿಯಾದರೂಕೆಲವರಿಗೆ ಮನಸ್ಸಿನ ಈ ಮೋಸಗಾರಗುಣದಬಗ್ಗೆ ತಿಳಿದಿರಲಿಕ್ಕಿಲ್ಲ. ಇಂಥಾ ಸೂಕ್ಷ್ಮ ವಿಚಾರಗಳ ಮೇಲೆ 'ಮನಸ್ಸಿನ ರಹಸ್ಯಗಳು' ಪುಸ್ತಕ ಟಾರ್ಚ್ ಲೈಟ್ ಬಿಡುತ್ತದೆ. ಈ ಕೃತಿಯಲ್ಲಿ ಸಾಮಾನ್ಯವಾಗಿ ಗೊತ್ತಿರುವ ಓಸಿಡಿ, ಖಿನ್ನತೆ ಮೊದಲಾದ ಮಾನಸಿಕ ಸಮಸ್ಯೆಗಳ ಬಗ್ಗೆ ವಿವರಗಳಿವೆ. ಅವುಗಳ ಜೊತೆಗೆ ಸಾಮಾನ್ಯರಿಗೆ ಅಷ್ಟಾಗಿ ತಿಳಿದಿರದ, ಆದರೆ ನಿತ್ಯ ಬದುಕಿನಲ್ಲಿ ಅನುಭವಿಸುವ, ಕೆಲವೊಮ್ಮೆ ನಮ್ಮನ್ನು ಹೈರಾಣು ಮಾಡುವ ಅಂಶಗಳ ಬಗೆಗೂ ತಿಳಿಸಿದ್ದಾರೆ. ನಮ್ಮ ನಂಬಿಕೆಗಳು ಹೇಗೆ ಕೆಲಸ ಮಾಡುತ್ತವೆ, ನಮ್ಮ ಕೈ ಮೀರಿ ನಮ್ಮ ಮೇಲೆ ಪ್ರಭುತ್ವ ಸಾಧಿಸುವ ಕೆಲವು ಮಾನಸಿಕ ಸ್ಥಿತಿಯ ಬಗ್ಗೆಯೂ ವಿವರಿಸಿದ್ದಾರೆ. ಕೆಲವೊಂದು ಸಂಗತಿಗಳ ಬಗ್ಗೆ ಈಗಾಗಲೇ ನಮ್ಮಲ್ಲಿರುವ ನಂಬಿಕೆಗಳನ್ನೇ ಲೇಖಕರು ಉದ್ದರಿಸುತ್ತಾರೆ. ಉದಾಹರಣೆಗೆ : ಹೆಣ್ಣಿಗೆ ತಾಳ್ಮೆ ಹೆಚ್ಚು ಹೊಂದಿಕೊಳ್ಳುವ ಗುಣವನ್ನು ಅವಳು ಬೆಳೆಸಿಕೊಳ್ಳಬೇಕು ಇತ್ಯಾದಿ. ಒಟ್ಟಿನಲ್ಲಿ ಸ್ಕೂಲವಾಗಿ ಮಾನಸಿಕ ಸ್ಥಿತಿ ಗತಿಗಳ ಬಗ್ಗೆ ತಿಳಿದುಕೊಳ್ಳಲು ಇಚ್ಛಿಸುವವರು ಈ ಪುಸ್ತಕ ಓದಬಹುದು.

Related Books