ವೃತ್ತಿಯಲ್ಲಿ ವೈದ್ಯರಾದರೂ, ಪ್ರವೃತ್ತಿಯಲ್ಲಿ ಲೇಖಕಿಯಾಗಿರುವ ಡಾ.ಕೆ.ಎಸ್.ಪವಿತ್ರ ಅವರ ಲೇಖನಗಳ ಸಂಕಲನ ‘ನೃತ್ಯ ಸಾಂಗತ್ಯ’. ಈ ಸಂಕಲನಕ್ಕೆ ನೂಪುರ ಭ್ರಮರಿ ಸಂಸ್ಥೆಯ ಸಂಪಾದಕಿ ಹಾಗೂ ಸಂಶೋಧಕಿಯಾಗಿರುವ ಡಾ.ಬಿ.ಎನ್.ಮನೋರಮಾ ಅವರು ಮುನ್ನುಡಿ ಬರೆದಿದ್ದಾರೆ. ‘ನಮ್ಮ 'ನೂಪುರಭದುರಿಗೆ ಡಾ.ಪವಿತ್ರಾ ಅವರು ಸುಮಾರು ಒಂದೂವರೆ ವರ್ಷಗಳ ಕಾಲ ಬರೆದ ಅಂಕಣಗಳ ಲೇಖನಗಳ ಸಹಿತ ಇಲ್ಲಿ ಇವರ ಇನ್ನಿತರ ಲೇಖನಗಳ ಸಂಗ್ರಹವಿದೆ. ವಿಷಯಗಳನ್ನು ಗ್ರಹಿಸುವ ಬಗ್ಗೆ, ಪ್ರಬುದ್ಧವಾಗಿ ಮಂಡಿಸುವ ಜಾಣ್ಮೆ, ಹೃದ್ಯವಾದ ಶೈಲಿ, ಕ್ಷೇತ್ರದ ಅಭಿವೃದ್ಧಿಗೆ ತುಡಿಯುವ ಜಾಗೃತ ಮನಸ್ಥಿತಿ..ಹೀಗೆ ಅವರ... ಕಣ್ಣಿಗೊಳಗೆ ಮನಸ್ಸಿನೊಳಗೆ ಸೂಕ್ಷ್ಮ ದರ್ಶಕವೇ ಇದೆ. ನೃತ್ಯಜಗತ್ತು ಪ್ರದರ್ಶಕ ಕಲೆ. ಅಲ್ಲಿ ಓದೋದಕ್ಕೆ, ಬರೆಯೋದಕ್ಕೆ ಏನಿದೆ? ಎಂದುಕೊಳ್ಳುವ ಮಂದಿಯೇ ಹೆಚ್ಚು. ಯಾವುದೇ ಕಲೆಯೂ ಚಿಂತನ ಮಂಥನದ ವಿನಃ ಬೆಳೆಯುವುದಿಲ್ಲವಷ್ಟೇ. ಈ ದಿಸೆಯಲ್ಲಿ ಡಾ. ಪವಿತ್ರಾ ಅವರದ್ದು ಸ್ತುತ್ಯರ್ಹ ಶ್ರಮ’ ಎಂದಿದ್ದಾರೆ.
ವೈದ್ಯಕೀಯ ಸಾಹಿತ್ಯ ರಂಗ, ಭರತನಾಟ್ಯ ಕಲಾವಿದೆಯಾಗಿ ಹೆಸರು ಗಳಿಸಿರುವ ಪವಿತ್ರಾ ಕೆ.ಎಸ್ ಅವರು ಮೂಲತಃ ಶಿವಮೊಗ್ಗದವರು. ಆರೋಗ್ಯ ಸಲಹೆಗಳಿಂದ ಉನ್ನತ ಸ್ಥಾನ ಗಳಿಸಿರುವ ಅವರು ವಿಚಾರ ಸಾಹಿತ್ಯದಲ್ಲೂ ಆಸಕ್ತರು. 11ನೇ ವಯಸ್ಸಿನಲ್ಲಿ ಅಖಿಲ ಭಾರತ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಉಪಾಧ್ಯಕ್ಷೆಯಾಗಿದ್ದ ಕೀರ್ತಿ ಅವರದು. ’ಮನ-ಮನನ, ನೀವು ಮತ್ತು ನಿಮ್ಮ ಸಂಬಂಧಗಳು, ಸಿ.ಜಿ.ಯೂಂಗ್, ಓ ಸಖಿ ನೀನು ಸಖಿಯೆ, ಪರಿಪೂರ್ಣ ವ್ಯಕ್ತಿತ್ವ ಇಂದಿನ ಮಹಿಳೆಯ ಮಾನಸಿಕ ಸವಾಲುಗಳು, ಗೀಳು ಖಾಯಿಲೆ, ಮಗು-ಮನಸು’ ಅವರ ಕೃತಿಗಳು. ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಬಹುಮಾನ, ಕಸಾಪ ಧರಣೇಂದ್ರಯ್ಯ ಮನೋವಿಜ್ಞಾನ ದತ್ತಿ ...
READ MORE