ಅಂಬೇಡ್ಕರ್ ಸಂದೇಶಗಳು

Author : ಡಿ.ಎಸ್. ವೀರಯ್ಯ

Pages 224

₹ 200.00




Year of Publication: 2021
Address: ನಂ.73, ಬಿಡಿಎ ಬಡಾವಣೆ, (ಆವಲಹಳ್ಳಿ), 8ನೇ ಮುಖ್ಯರಸ್ತೆ, 8ನೇ ಅಡ್ಡರಸ್ತೆ, ಗಿರಿನಗರ, ಬೆಂಗಳೂರು- 560 085

Synopsys

ಲೇಖಕ ಡಿ.ಎಸ್. ವೀರಯ್ಯ ಅವರ ಸಂಗ್ರಹ ಕೃತಿ ಅಂಬೇಡ್ಕರ್ ಸಂದೇಶಗಳು. ಈ ಕೃತಿಗೆ ಬೈರಮಂಗಲ ರಾಮೇಗೌಡ ಅವರು ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಮಾನವನ ಹುಟ್ಟನ್ನು ಆಧಾರವಾಗಿಟ್ಟುಕೊಂಡು ಅವನ ಯೋಗ್ಯತೆಗೆ ಮರ್ಯಾದ ಕೊಡದ ಧರ್ಮ ಧರ್ಮವೇ ಅಲ್ಲ. ಜಾತಿ ಪದ್ಧತಿ ಸಂಪೂರ್ಣ ಭಾರತದ ಹಿಂದೂಗಳನ್ನು ಹಾಳುಮಾಡಿದೆ. ಸಮಾಜದಲ್ಲಿ ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂದು ವಿಚಾರ ಮಾಡುವ ಸ್ವಾತಂತ್ರ್ಯವನ್ನು ಮನು ಮಹಿಳೆಗೆ ಕೊಡಲಿಲ್ಲ. ಹೊಸ ಶತಮಾನದ ಸಂವಿಧಾನದ ಬೆಳಕಿನಲ್ಲಿ ಸತ್ತು ಮಣ್ಣಾಗಬೇಕಾದ ಮನು ಸಮಾಜದಲ್ಲಿ ಇನ್ನೂ ಜೀವಂತವಾಗಿದ್ದಾನೆ. ಅಸ್ಪೃಶ್ಯತೆ ನಿವಾರಣೆ ಮತ್ತು ಎಲ್ಲ ದುರ್ಬಲ ವರ್ಗಗಳ ವಿಮೋಚನೆಯಾಗದೆ ದೇಶದ ಸ್ವಾತಂತ್ರ್ಯ ಅರ್ಥಹೀನ, ಅಪ್ರಾಮಾಣಿಕರು ಪ್ರಾಮಾಣಿಕತೆ ಬಗ್ಗೆ ಮಾತಾಡುವುದು ವಾಕ್ ಸ್ವಾತಂತ್ರ್ಯದ ಅಣಕ, ವ್ಯಪೂಜೆ ಪೂಜಕರನ್ನು ಭ್ರಷ್ಟಗೊಳಿಸುವುದಲ್ಲದೆ ದೇಶಕ್ಕೂ ಅಪಾಯಕಾರಿ, ಮಹಿಳೆಯರಿಗೆ ಸಮಾನತೆ ಮತ್ತು ಗೌರವ ಕೊಡದ ಸಮಾಜ ಆದರ್ಶ ಸಮಾಜವಾಗಲಾರದು. ಅಸಮಾನತೆ ಹಿಂದೂ ಧರ್ಮದ ಮೂಲಮಂತ್ರ ಅಸ್ಪ ಶ್ಯರಿಗೆ ವೇದ ಭಗವದ್ಗೀತೆಗಳು ಮಾಡಿರುವಷ್ಟು ಮೋಸವನ್ನು ಇನ್ನಾರೂ ಮಾಡಿಲ್ಲ. ಕೆಳಜಾತಿಗಳ ಜನ ಮಡಿವಂತಿಕೆಯ ಹಿಂದೂ ಧರ್ಮ ತೊರೆದು ಮಾನವರೆಲ್ಲ ಒಂದೇ ಎಂದು ಪರಿಗಣಿಸುವ ಬೌದ್ಧಧರ್ಮಕ್ಕೆ ಹೋದಾಗ ಮಾತ್ರ ಅವರಿಗೆ ಸಮಾನತೆ ಸಿಗಲು ಸಾಧ್ಯ. ನಮ್ಮೊಳಗಿನ ನವಚೈತನ್ಯವನ್ನು ಪುಟಿಯುವಂತೆ ಸಮಾಜ ಬದಲಾವಣೆ ಸನ್ನದ್ಧವಾಗುವ ಉತ್ಸಾಹ ತುಳುಕುವಂತೆ ‘ಅಂಬೇಡ್ಕರ್ ಸಂದೇಶಗಳು’ಎನ್ನುವ ಮಹತ್ವದ ಕೃತಿಯನ್ನು ರೂಪಿಸಿದ್ದಕ್ಕಾಗಿ ಡಿ.ಎಸ್ ವೀರಯ್ಯನವರನ್ನು ಅಭಿನಂದಿಸುತ್ತೇನೆ ಎಂದು ಹೇಳಿದ್ದಾರೆ.

About the Author

ಡಿ.ಎಸ್. ವೀರಯ್ಯ

ಲೇಖಕ ಡಿ.ಎಸ್. ವೀರಯ್ಯ ಅವರು ಬೆಂಗಳೂರಿನ ಗಿರಿನಗರದವರು. ಎಂ.ಕಾಂ, ಎಲ್.ಎಲ್.ಬಿ, ಡಿ.ಪಿ.ಎಂ ಹಾಗೂ ಐಆರ್, ಡಿಪ್ಲೊಮಾ ಇನ್ ಜರ್ನಲಿಸಂ ಪದವೀಧರರು. ಪ್ರಸ್ತುತ ಡಿ. ದೇವರಾಜ್ ಟ್ರಕ್ಕ್ ಟರ್ಮಿನಲ್ ಅಧ್ಯಕ್ಷರು. ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷ, ರಾಜ್ಯ ಕನ್ನಡ ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.  ಕೃತಿಗಳು:  ಬಾಬಾ ಸಾಹೇಬ್ ಅಂಬೇಡ್ಕರ್ ಸಂದೇಶಗಳು. ಪ್ರಶಸ್ತಿ-ಪುರಸ್ಕಾರಗಳು: ಸಮಾಜ ರತ್ನ, ಕರ್ನಾಟಕ ರತ್ನ, ಬುದ್ಧ ರತ್ನ, ಬೆಸ್ಟ್ ಸಿಟಿಜನ್ ಆಫ್ ಇಂಡಿಯಾ, ಸರ್. ಎಂ.ವಿಶ್ವೇಶ್ವರಯ್ಯ ಆವಾರ್ಡ್, ಸಂಘಟನ ಶಿಲ್ಪಿ ಸೇರಿದಂತೆ  ಹಲವಾರು ಪ್ರಶಸ್ತಿ-ಗೌರವಗಳು ಲಭಿಸಿವೆ.  ...

READ MORE

Related Books