'ಮಕ್ಕಳ ರಂಗಭೂಮಿ' ರಂಗಕರ್ಮಿ ಕಿರಣ್ ಭಟ್ ಅವರು ಸಂಪಾದಿಸಿರುವ ಕೃತಿ. ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ. ಜೀವನ ಸ್ವಪ್ರೇಮದ ಪುತ್ರಪುತ್ರಿಯರು ಅವರು. ಅವರು ನಿಮ್ಮ ಜತೆಗೆ ಇರುವುದಾದರೂ ಅವರು ನಿಮಗೆ ಸೇರಿದವರಲ್ಲ. ನಿಮ್ಮ ಪ್ರೀತಿಯನ್ನು ಅವರಿಗೆ ನೀಡಬಹುದು; ಆದರೆ, ನಿಮ್ಮ ಆಲೋಚನೆಗಳನ್ನಲ್ಲ. ಅವರಂತಿರಲು ನೀವು ಪ್ರಯತ್ನಿಸಬಹುದು ; ಆದರೆ ಅವರನ್ನು ನಿಮ್ಮಂತೆ ಮಾಡದಿರಿ. ಜೀವನ ಹಿಮ್ಮುಖವಾಗಿ ಹರಿಯದಿರಲಿ ಎನ್ನುತ್ತಾರೆ ಖಲೀಲ್ ಗಿಬ್ರಾನ್. ( ಬೆನ್ನುಡಿಯಿಂದ)
ಕಿರಣ್ ಭಟ್ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದವರು. ಹೊನ್ನಾವರದಲ್ಲಿ ಬಿ.ಎಸ್.ಸಿ ಪದವಿ ಪಡೆದ ನಂತರ ಟೆಲಿಕಾಂ ಇಲಾಖೆಯಲ್ಲಿ ಉದ್ಯೋಗಕ್ಕೆ ಸೇರಿದರು. ಹುಬ್ಬಳ್ಳಿ, ತಿರುವನಂತಪುರಂ, ಶಿರಸಿ, ಮಂಗಳೂರು, ಕುಮಟಾ, ಕಾರವಾರ, ಎರ್ನಾಕುಲಂ,ಕಣ್ಣಾನೂರಿನಲ್ಲಿ ಸೇವೆ ಸಲ್ಲಿಸಿ ಸದ್ಯ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಕಾಲೇಜು ದಿನಗಳಿಂದಲೇ ರಂಗಭೂಮಿಯಲ್ಲಿ ತೊಡಗಿಕೊಂಡಿದ್ದ ಕಿರಣ್ ಭಟ್ ಮಂಗಳೂರು ಸಮುದಾಯ,ಆಯನ ತಂಡಗಳ ನಾಟಕಗಳಲ್ಲಿ ಭಾಗವಹಿಸುತ್ತಿದ್ದರು. ಶಿರಸಿಯಲ್ಲಿ 'ರಂಗಸಂಗ' ತಂಡದ ಸ್ಥಾಪಿಸಿ, ನಾಟಕಗಳನ್ನು ನಿರ್ದೇಶಿಸಿದ್ದಾರೆ. ಐವತ್ತಕ್ಕೂ ಹೆಚ್ಚು ಮಕ್ಕಳ ನಾಟಕಗಳನ್ನು ಹಾಗೂ ಮಕ್ಕಳ ರಂಗಶಿಬಿರಗಳ ನಿರ್ದೇಶಿಸಿದ್ದಾರೆ. ರಂಗಭೂಮಿ ಸೇವೆಗಾಗಿ 1999 ರಲ್ಲಿ ' ಕರ್ನಾಟಕ ನಾಟಕ ಅಕಾಡಮಿಯ ಗೌರವ ಪ್ರಶಸ್ತಿ, ' ...
READ MORE