`ನಾವು ಮತ್ತು ನಮ್ಮ ಪರಿಸರ’ ಸಬಿಹಾ ಭೂಮಿಗೌಡ ಅವರ ಸಂಪಾದನೆಯ ಬರಹಗಳ ಸಂಗ್ರಹವಾಗಿದೆ. ತಾನು ನಾಗರಿಕ ಬುದ್ಧಿವಂತನೆಂದು ಬೀಗುತ್ತಿರುವ ಇಂದಿನ ಮಾನವ ತಾನು ವಾಸಿಸುವ ಭೂಮಿ ಮತ್ತು ಪರಿಸರವನ್ನು ತನ್ನೊಬ್ಬನ ಸ್ವಾರ್ಥಕ್ಕೋಸ್ಕರ ಹೇಗೆ ಕಲುಷಿತಗೊಳಿಸಿದ್ದಾನೆಂದು ವಿವರಣೆ ನೀಡುತ್ತಲೇ ಪರಿಸರ ಜಾಗೃತಿಯನ್ನು ಮೂಡಿಸುವ ಲೇಖನಗಳನ್ನು ಈ ಕೃತಿಯಲ್ಲಿ ತಿಳಿಸಿದ್ದಾರೆ.
ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾಗಿರುವ ಸಬಿಹಾ ಭೂಮಿಗೌಡ ಮೂಲತಃ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಗಜೇಂದ್ರಗಡದವರು. ತಂದೆ ಎಂ.ಆರ್. ಗಜೇಂದ್ರಗಡ, ತಾಯಿ ಸಾಹಿರಾ. ಎಂ.ಎ., ಪಿಎಚ್.ಡಿ. ಪಡೆದು ಪ್ರಾಧ್ಯಾಪಕಿಯಾಗಿ ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರು, ಕರಾವಳಿ ಲೇಖಕಿಯರು ಮತ್ತು ವಾಚಕಿಯರ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಬಗೆ (ವಿಮರ್ಶೆ) 2001, ಚಿತ್ತಾರ (ಕಾವ್ಯ) 2004, ಕನ್ನಡ ಭಾಷಾ ಪ್ರವೇಶ (ಸಹಲೇಖಕರೊಂದಿಗೆ) 2005, ನಿಲುಮೆ (ವಿಮರ್ಶೆ) 2005, ನುಡಿಗವಳ ...
READ MOREಹೊಸತು-2004- ನವೆಂಬರ್
ತಾನು ನಾಗರಿಕ ಬುದ್ಧಿವಂತನೆಂದು ಬೀಗುತ್ತಿರುವ ಇಂದಿನ ಮಾನವ ತಾನು ವಾಸಿಸುವ ಭೂಮಿ ಮತ್ತು ಪರಿಸರವನ್ನು ತನ್ನೊಬ್ಬನ ಸ್ವಾರ್ಥಕ್ಕೋಸ್ಕರ ಹೇಗೆ ಕಲುಷಿತಗೊಳಿಸಿದ್ದಾನೆಂದು ವಿವರಣೆ ನೀಡುತ್ತಲೇ ಪರಿಸರ ಜಾಗೃತಿಯನ್ನು ಮೂಡಿಸುವ ಲೇಖನಗಳು. ಪರಸ್ಪರ ಬದುಕಿಗಾಗಿ ಎಲ್ಲ ಜೀವಿಗಳೂ ಒಂದನ್ನೊಂದು ಅವಲಂಬಿಸಿರುವ ಹಿನ್ನೆಲೆಯಲ್ಲಿ ಪರಿಸರವಿಲ್ಲದೆ ಮನುಷ್ಯನೂ ಇಲ್ಲವೆಂಬ ಸತ್ಯವನ್ನು ತಿಳಿದೂ ತಿಳಿಯದಂತಹ ಹೊಣೆಗೇಡಿಯಾಗಿ ವರ್ತಿಸುತ್ತಿದ್ದಾನೆ. ನಿಸರ್ಗದತ್ತ ಸಂಪತ್ತನ್ನು ಮಿತಿಯಲ್ಲಿ ಬಳಸದ ಮೇರೆ ಮೀರಿ ಅನುಭವಿಸುತ್ತ ಹಸನಾಗಿಸಬಹುದಾದ ಬಾಳ್ವೆಯನ್ನು ಕೈಯಾರೆ ಕೆಡಿಸಿ ಕೊಂಡಿದ್ದಾನೆ. ನೆಲ-ಜಲ-ವಾಯುಗಳಂಥ ಪ್ರಾಕೃತಿಕ ಸಂಪತ್ತನ್ನು ಕಲುಷಿತಗೊಳಿಸುವ ಇಲ್ಲಿ ಪ್ರಸ್ತಾಪಿಸಿದ ಮಾನವ ನಿರ್ಮಿತ ಉದ್ಯಮ ಕಾರ್ಖಾನೆಗಳ ಕಾರ್ಯವೈಖರಿ ಕಂಡಾಗ ನಾವು ಮುಂದುವರೆದದ್ದು ನಮ್ಮನ್ನು ರಕ್ಷಿಸಿಕೊಳ್ಳಲಾರದಷ್ಟು ಎಂಬುದು ಅಷ್ಟೇ ಸತ್ಯ !