ಲೇಖಕಿ ಸಬಿತಾ ಬನ್ನಾಡಿ ಅವರ ಅಂಕಣ ಬರಹಗಳ ಸಂಗ್ರಹ ಕೃತಿ 'ಇದಿರು ನೋಟ'. ಅತ್ಯಾಚಾರ, ಜಾತಿ ದೌರ್ಜನ್ಯ, ಸಂವಿಧಾನದ ಮೇಲೆ ದಾಳಿ, ಬೆಲೆಯೇರಿಕೆ, ಕೋಮುದ್ವೇಷ, ಮಾರುಕಟ್ಟೆಯ ಹಪಹಪಿ, ಹೆಣ್ಣುಬದುಕಿನ ಜಂಜಡಗಳು, ಯುದ್ಧ-ಹಿಂಸೆ, ಭಾಷೆ, ಶಿಕ್ಷಣ, ರಾಜಕಾರಣ, ಸಿನಿಮಾ, ನಾಟಕ, ಸಾಹಿತ್ಯ ಮುಂತಾದ ಹಲವಾರು ವಿಷಯಗಳ ಕುರಿತಾಗಿ ಪತ್ರಿಕೆಯೊಂದಕ್ಕೆ ಬರೆದ 38 ಅಂಕಣ ಬರಹಗಳನ್ನು ಇಲ್ಲಿ ಒಟ್ಟುಗೂಡಿಸಿ ಪುಸ್ತಕ ರೂಪದಲ್ಲಿ ತರಲಾಗಿದೆ. ಜಾಗತಿಕ ಸಿನಿಮಾಗಳಾದ ಟ್ವೆಲ್ವ್ ಆಂಗ್ರಿ ಮ್ಯಾನ್, ದ ಬಾಯ್ ವಿತ್ ದ ಸ್ಟ್ರೈಪಡ್ ಪೈಜಾಮಾ, ಹನಿಲ್ಯಾಂಡ್, ಜೈಭೀಮ್, ಶೇರ್ನಿ ಬಗೆಗಿನ ವಿಚಾರಗಳನ್ನು ಇಲ್ಲಿ ಭಿನ್ನವಾಗಿ ಚರ್ಚಿಸಲಾಗಿದೆ. ಜೊತೆಗೆ ಸ್ತ್ರೀವಾದದ ಕುರಿತಾದ ಸಾಮಾನ್ಯ ಜನರ ತಿಳುವಳಿಕೆ, ವಾಸ್ತವ, ಟೀಕೆ ಎಲ್ಲವನ್ನೂ ಹೇಳುತ್ತಾ ಹೋಗುತ್ತಾರೆ.
ವಿಮರ್ಶೆ, ಕವಿತೆ ಮತ್ತು ಅಂಕಣ ಬರಹಗಳನ್ನು ಕಳೆದ ಮೂವತ್ತು ವರ್ಷಗಳಿಂದ ಬರೆಯುತ್ತಿರುವ ಸಬಿತಾ ಬನ್ನಾಡಿಯವರು ಸಮಗ್ರ ವಚನ ಸಾಹಿತ್ಯವನ್ನು ಆಧಾರವಾಗಿಟ್ಟುಕೊಂಡು, “ಮಧ್ಯಕಾಲೀನ ಕನ್ನಡ ಸಾಹಿತ್ಯದಲ್ಲಿ ಚರಿತ್ರೆ, ಸಮಾಜ ಮತ್ತು ಸಂಸ್ಕೃತಿಯ ಅಂತರ್‍ಸಂಬಂಧಗಳು” ಎಂಬ ವಿಷಯದ ಮೇಲೆ ಸಂಶೋಧನೆಯನ್ನು ಮಾಡಿದ್ದಾರೆ. ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಪದವಿ ಮುಗಿಸಿ, ಮಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಎಂ.ಎ ಪದವಿ(ಚಿನ್ನದ ಪದಕ) ಪಡೆದ ಇವರು ಕುವೆಂಪು ವಿಶ್ವವಿದ್ಯಾಲಯದಲ್ಲಿ ಪಿ.ಎಚ್.ಡಿ ಪದವಿಯನ್ನು ಪಡೆದಿದ್ದಾರೆ. ತರೀಕೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದ ಅನುಭವ ಇರುವ ಇವರು ಪ್ರಸ್ತುತ ಪ್ರಾಧ್ಯಾಪಕಿ ಮತ್ತು ವಿಭಾಗ ಮುಖ್ಯಸ್ಥರಾಗಿ ...
READ MORE