‘ಸದ್ಯದ ಹಂಗು’ ಲೇಖಕ ರಾಜೇಂದ್ರ ಚೆನ್ನಿ ಅವರ ಲೇಖನಗಳ ಸಂಕಲನ. ನಾಳಿನ ಕನ್ನಡ ಸಾಹಿತ್ಯ, ರವೀಂದ್ರನಾಥ ಟಾಗೋರ್ ಹಾಗೂ ಭಾರತೀಯ ಕಾದಂಬರಿ, ಚಿತ್ತಾಲರ ಸಾಹಿತ್ಯ:ನಮ್ಮ ಕಾಲದ ಕಥನ, ಚಿತ್ತಾಲರ ಕೇಂದ್ರ ವೃತ್ತಾಂತ, ಪದ್ಮಶ್ರೀ ಅಮಾಸ ಮಹಾದೇವರಿಗೆ ಪ್ರಶಸ್ತಿ ಬಂದುದು, ಅನಂತಮೂರ್ತಿ: ಕತೆಗಾರನೊಬ್ಬನ ಜೀವನದ ಅಪೂರ್ವ ವಸಂತ, ದಲಿತ ಬರಹದ ಸಿದ್ಧಿ, ಸವಾಲುಗಳು: ಅಮರೇಶ ನುಗಡೋಣಿ ಕತೆಗಳು, ಕೇಳುವ ಲಯಗಳಿಗಿಂತ ಕೇಳದ ಲಯಗಳು ಜಯಂತರ ಕತೆಗಳು, ನಾಗವೇಣಿ: ಅಂಚಿನ ಸಮುದಾಯಗಳ ದನಿ, ವೈದೇಹಿ:ಅಂತರಂಗದ ಕತೆಗಾರ್ತಿ, ಲಲಿತಾ ಸಿದ್ಧಬಸವಯ್ಯ:ನೆಲಸಂಸ್ಕೃತಿಯ ಕಾವ್ಯ, ಕುವೆಂಪು ನಾಟಕಗಳು, ಭಾಷಾಂತರ ಮತ್ತು ಕನ್ನಡ ಸಂವೇದನೆ, ವಚನಗಳ ಓದು, ಭಾರತದಲ್ಲಿ ಜಾತಿವ್ಯವಸ್ಥೆ ಇದೆಯೇ, ಇರಲಿ ಕಾವ್ಯಕ್ಕೊಂದು ಇಂಬು ಸೇರಿದಂತೆ 23 ಮಹತ್ವದ ಲೇಖನಗಳು ಇಲ್ಲಿ ಸಂಕಲನಗೊಂಡಿವೆ.
ರಾಜೇಂದ್ರ ಚೆನ್ನಿ ಅವರು ಕುವೆಂಪು ವಿ.ವಿ. ಸ್ನಾತಕೋತ್ತರ ಇಂಗ್ಲಿಷ್ ವಿಭಾಗದ ನಿವೃತ್ತ ಪ್ರಾಧ್ಯಾಪಕರು. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಾಗರಗಾಳಿ ಗ್ರಾಮದವರು. 1955ರ ಅಕ್ಟೋಬರ್ 21ರಂದು ಜನನ. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ, ಮೈಸೂರು ವಿ.ವಿ.ಯಿಂದ ಪಿಎಚ್.ಡಿ ಪಡೆದರು. ಸಂಡೂರು, ಬೆಳಗಾವಿ ಸೇರಿದಂತೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಹೀಗೆ ವಿವಿಧೆಡೆ ಬೋಧನೆಯ ಸೇವೆ ಸಲ್ಲಿಸಿ, 1981ರಿಂದ 1991ರವರೆಗೆ ಶಿವಮೊಗ್ಗೆಯ ಸಹ್ಯಾದ್ರಿ ಕಾಲೇಜಿನಲ್ಲಿ ಅಧ್ಯಾಪಕರಾಗಿ, ನಂತರ, ಕುವೆಂಪು ವಿ.ವಿ. ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿದ್ದರು. ಕನ್ನಡ-ಇಂಗ್ಲಿಷ್ ಎರಡೂ ಭಾಷೆಯಲ್ಲಿ ವಿಮರ್ಶೆ, ಲೇಖನ ಹಾಗೂ ಕತೆಗಳನ್ನು ಬರೆಯುತ್ತಲೇ ಜನಪರ ಚಳವಳಿಗಳಲ್ಲಿ ಭಾಗವಹಿಸಿದ್ದಾರೆ. 2009ನೇ ಸಾಲಿನ ಪ್ರತಿಷ್ಠಿತ ಜಿ.ಎಸ್.ಎಸ್. ಪ್ರಶಸ್ತಿ ಪಡೆದಿದ್ದಾರೆ. ಇವರ ಮೊದಲ ...
READ MORE