‘ಅರಿವಿನ ದಿಬ್ಬ ಪುತ್ತೂರು ದಸರಾ ನಾಡಹಬ್ಬ’ ಕೃತಿಯು ಹರಿನಾರಾಯಣ ಮಾಡವು ಅವರ ರಚನೆ ಹಾಗೂ ಜನಾರ್ಧನ ಭಟ್ ಅವರ ಸಂಪಾದಕತ್ವದಲ್ಲಿ ಮೂಡಿಬಂದಿದೆ. ಈ ಕೃತಿಯು ನೃತ್ಯ, ನಾಟಕ, ದೃಶ್ಯಾವಳಿಗಳು, ಚಲನಚಿತ್ರ ಇತ್ಯಾದಿಗಳ ವಿಚಾರವನ್ನು ಪ್ರಸ್ತುತಪಡಿಸುತ್ತದೆ. ಜನ ತಂಡೋಪ ತಂಡವಾಗಿ ಬಂದು ಉತ್ಸವದ ಸವಿಯನ್ನುಂಡರು, ಮೆಲುಕು ಹಾಕಿದರು ಎಂದು ಈ ಕೃತಿಯು ವಿಶ್ಲೇಷಿಸುತ್ತದೆ. ಸಾಂಸ್ಕೃತಿಕ ವಿದ್ಯಮಾನದ ಉಗಮ, ವ್ಯಾಪ್ತಿ, ವಿವಿಧ ಹಂತಗಳ ಚಿತ್ರಣವನ್ನುಳ್ಳ ಅಪೂರ್ವ ದಾಖಲೆ ಈ ಕೃತಿ.