ಇಂಗ್ಲಿಷ್ ಲೇಖಕ ಸಿಮೋನ್ ದ ಬೋವಾ ಅವರ ಲೇಖನಗಳ ಕೃತಿ ‘ದಿ. ಸೆಕೆಂಡ್ ಸೆಕ್ಸ್ ’ನ ನಾಲ್ಕನೇ ಸಂಪುಟವಿದು. ಕೃತಿಯನ್ನು ಲೇಖಕಿ ಎಚ್.ಎಸ್. ಶ್ರೀಮತಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಯಲ್ಲಿ ಸ್ವಮೋಹಿ ಹೆಂಗಸು, ಪ್ರೀತಿ ಮತ್ತು ಹೆಣ್ಣು, ದೈವಭಕ್ತೆ, ಸ್ವತಂತ್ರಳಾದ ಹೆಣ್ಣು ಅಧ್ಯಾಯಗಳು ಹೆಣ್ಣಿನ ಸ್ಥಾನಮಾನದ ಕುರಿತು ತೀಕ್ಷ್ನ ನೋಟ ಬೀರಿವೆ.
ಸ್ತ್ರೀವಾದಿ ಲೇಖಕಿ, ಚಿಂತಕಿ ಎಚ್.ಎಸ್.ಶ್ರೀಮತಿ ಅವರು ಜನಿಸಿದ್ದು 1950 ಫೆಬ್ರುವರಿ 25ರಂದು ಬೆಂಗಳೂರಿನ ಹೊಸಕೋಟೆಯಲ್ಲಿ. ತಂದೆ ಎಚ್.ಕೆ.ಸೂರ್ಯನಾರಾಯಣ ಶಾಸ್ತ್ರಿ, ತಾಯಿ ಲಲಿತ. ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಇವರು ಕನ್ನಡ ಸಾಹಿತ್ಯಕ್ಕೆ ಇವರು ನೀಡಿರುವ ಕೊಡುಗೆ ಅಪಾರ. ಇವರು ಅನುವಾದಿಸಿರುವ ಪ್ರಮುಖ ಕೃತಿಗಳೆಂದರೆ ಸೆಕೆಂಡ್ ಸೆಕ್ಸ್, ಆಧುನಿಕ ಭಾರತದಲ್ಲಿ ಮಹಿಳೆ, ಬೇಟೆ, ತಾಯಿ, ರುಡಾಲಿ, ದೋಪ್ದಿ ಮತ್ತು ಇತರ ಕಥೆಗಳು, ವೇದಗಳಲ್ಲಿ ಏನಿದೆ, ಪ್ರಾಚೀನ ಭಾರತದ ಚರಿತ್ರೆ ಮುಂತಾದವು. ಮಹಾಶ್ವೇತಾದೇವಿಯವರ ಕುರಿತು ಜೀವನ ಚರಿತ್ರೆಯನ್ನು ಬರೆದಿದ್ದಾರೆ. ಇವರು ಸಂಪಾದನೆ ಮಾಡಿರುವ ಕೃತಿಗಳೆಂದರೆ ಕನ್ನಡ ...
READ MORE