ಕೀರ್ತಿ ಕಿರಣ್ ಕುಮಾರ್ ಅವರ ಲೇಖನ ಸಂಕಲನ ನುಡಿತೋರಣ. ನುಡಿತೋರಣ ಕೃತಿಯಲ್ಲಿ ಸಾಮಾಜಿಕ ಕಳಕಳಿಯುಳ್ಳ ಲೇಖನಗಳು, ವೈಚಾರಿಕ ಲೇಖನಗಳು, ಮಲೆನಾಡಿನ ಸಾಧಕರ ಪರಿಚಯ, ಕಾಫಿ ನಾಡಿನಜನತೆಯ ಸಮಸ್ಯೆಗಳು, ಆಹಾರ, ಸಂಸ್ಕೃತಿ,ಆಚಾರ, ವಿಚಾರ, ಎಲ್ಲದರ ಮೇಲು ಬೆಳಕು ಚೆಲ್ಲುವಂತ ಬಹುತೇಕ ಲೇಖನಗಳು ಈ ಪುಸ್ತಕದಲ್ಲಿವೆ. ಜೊತೆಗೆ ಸಣ್ಣ ಕಥೆಗಳು ಇವೆ. ಹೋಟೆಲ್ಗೆ ಹೋದ್ರೆ ಸೌತ್ ಇಂಡಿಯನ್ ತಾಲಿ ತಗೊಂಡ್ರೆ ವಿವಿಧ ರೀತಿಯ ಭೋಜನವನ್ನು ಒಂದೇ ತಟ್ಟೆಯಲ್ಲಿ ತಿನ್ನಬಹುದು. ಹಾಗೆ ನುಡಿತೋರಣ ಪುಸ್ತಕ ಸಾಹಿತ್ಯ ದ ಹಲವು ಪ್ರಕಾರದ ಲೇಖನಗಳನ್ನು ಪರಿಚಯಿಸುತ್ತದೆ.
ಕೀರ್ತಿ ಕಿರಣ್ ಕುಮಾರ್ ಸಕಲೇಶಪುರದವರು. ಇವರು 1984 ಫೆಬ್ರವರಿ 13 ರ ರಲ್ಲಿ ಕೊಡಗು ಜಿಲ್ಲೆ , ಸೋಮವಾರ ಪೇಟೆ ತಾಲ್ಲೂಕಿನ, ಹಾರಳ್ಳಿ ಗ್ರಾಮದಲ್ಲಿ ಜನಿಸಿದರು. ತಂದೆ ಎನ್. ಎನ್. ಧರ್ಮಪ್ಪ ಮತ್ತು ತಾಯಿ ಸುಶೀಲ. ಬಿ. ಎಸ್ಸಿ. ಬಿ. ಎಡ್. ತರಬೇತಿ ಯನ್ನು ಜೆ. ಎಸ್ . ಎಸ್. ಶಿಕ್ಷಣ ಸಂಸ್ಥೆ ಯಲ್ಲಿ ಪಡೆದು ಕೆಲವು ವರ್ಷ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಕಳೆದ ನಾಲ್ಕು ವರ್ಷ ಗಳಿಂದ ನಾಡಿನ ಪತ್ರಿಕೆ ಗಳಿಗೆ, ಕಾಯಂ ಲೇಖಕಿಯಾಗಿ, ಸಂದರ್ಶಕಿಯಾಗಿ, ವರದಿಗಾರ್ತಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಾಗೆಯೇ ಲಲಿತ ಪ್ರಭಂದ, ಕವಿತೆ, ಸಣ್ಣ ಕಥೆ, ...
READ MORE