ಭಾಷೆ ಮತ್ತು ಜಾನಪದ

Author : ಕಾ.ವೆಂ. ಶ್ರೀನಿವಾಸಮೂರ್ತಿ

Pages 88

₹ 50.00




Year of Publication: 2011
Published by: ಬರಹ ಪಬ್ಲಿಷಿಂಗ್‌ ಹೌಸ್
Address: #119, 3ನೇ ತಿರುವು, 8ನೇ ಮುಖ್ಯರಸ್ತೆ, ಹಂಪಿನಗರ ಆರ್.ಪಿ.ಸಿ ಲೇಔಟ್, ಬೆಂಗಳೂರು
Phone: 8023409512

Synopsys

‘ಭಾಷೆ ಮತ್ತು ಜಾನಪದ’ ಕೃತಿಯು ಕಾ.ವೆಂ. ಶ್ರೀನಿವಾಸಮೂರ್ತಿ ಅವರ ಲೇಖನ ಸಂಕಲನವಾಗಿದೆ. ಇಲ್ಲಿ ಕನ್ನಡ ಭಾಷೆಯ ಬಗ್ಗೆ ಕಾಳಜಿ ಮತ್ತು ಜಾನಪದ ಸಂಸ್ಕೃತಿಯ ಬಗ್ಗೆ ಗೌರವ ಇವೆರಡೂ ಇಲ್ಲಿನ ಲೇಖನಗಳಲ್ಲಿ ವ್ಯಕ್ತವಾಗಿದೆ. ತ್ರಿಪದಿ, ಚೌಪದಿ, ಷಟ್ಟದಿಗಳಿಂದ ಕೂಡಿದೆ. ಹಾಡುಗಳು ಬದುಕಿನ ಎಲ್ಲವನ್ನೂ ತಿಳಿಸಿಕೊಡುವ ಹಂಬಲ, ಉತ್ಸಾಹ ತೋರಿದ್ದವು. ಕೆಲವು ಹಾಡುಗಳನ್ನು ಉದಾಹರಿಸಿ ಗ್ರಾಮೀಣ ಗಾದೆಗಳು, ಸ್ತ್ರೀ ಸಮುದಾಯ, ಹೆಣ್ಣಿನ ಅಳಲು, ತವರ ನೆನಪು ಮುಂತಾದ ಮನಕಲಕುವ ಬದುಕೊಂದನ್ನು ಕಣ್ಣುಂದೆ ನಿಲ್ಲಿಸಲಾಗಿದೆ. ಕನ್ನಡವೇ ಆದರೂ ಅಲ್ಲಿ ಜಾನಪದ ಜಗತ್ತಿನ ವಿಶಿಷ್ಟ ಬದುಕಿನ ಕಂಪಿದೆ. ಸರಾಗವಾಗಿ ಹರಿದುಬಂದ ಭಾಷಾಶೈಲಿಯೊಂದರ ಪರಿಚಯವಿದೆ.

About the Author

ಕಾ.ವೆಂ. ಶ್ರೀನಿವಾಸಮೂರ್ತಿ
(06 September 1969)

ಡಾ. ಕಾ. ವೆಂ. ಶ್ರೀನಿವಾಸಮೂರ್ತಿ ಅವರು ಬೆಂಗಳೂರು ಉತ್ತರಕಾವಲು ಭೈರಸಂದ್ರದವರು. ಉಪನ್ಯಾಸಕರಾಗಿದ್ದಾರೆ. ಚಂದ್ರತಾರೆ ಊರಿನಲ್ಲಿ, ಹೃದಯ ವಿಹಾರಿ, ಬದುಕು, ಕಾವ್ಯಕೋಗಿಲೆ, ನಿತ್ಯಶ್ರಾವಣ, ಅಭಿಮಾನದ ಹಣತೆ, ಮಣ್ಣಿನ ದೋಣಿ, ಆಯ್ದ ಭಾವಗೀತೆಗಳು (ಕಾವ್ಯ), ನೆಲದ ಕಣ್ಣ, ಮೌನ ಮಾತಾದಾಗ, ಕನ್ನಡ ರಂಗಭೂಮಿ, ಕನ್ನಡ ಚಳುವಳಿ ಮತ್ತು ಚಿಂತನ, ಉರಿಯಪೇಟೆ (ವಿಮರ್ಶೆ), ಕನ್ನಡ ಸಾಹಿತ್ಯ ಮತ್ತು ಕರ್ನಾಟಕತ್ವ, ಅಭಿರಾಮ, ಕನ್ನಡ ಭೇರಿ, ಬಂಡಾಯ ಕಾಲು ಶತಮಾನ (ಸಂಪಾದನೆ), ಕನ್ನಡ ಕಾವ್ಯದಲ್ಲಿ ನಾಡು ನುಡಿ ಚಿಂತನೆ (ಪಿಎಚ್‌ಡಿ ಮಹಾಪ್ರಬಂಧ). ...

READ MORE

Reviews

(ಹೊಸತು, ಫೆಬ್ರವರಿ 2012, ಪುಸ್ತಕದ ಪರಿಚಯ)

ಕನ್ನಡ ಭಾಷೆಯ ಬಗ್ಗೆ ಕಾಳಜಿ ಮತ್ತು ಜಾನಪದ ಸಂಸ್ಕೃತಿಯ ಬಗ್ಗೆ ಗೌರವ ಇವೆರಡೂ ಇಲ್ಲಿನ ಲೇಖನಗಳಲ್ಲಿ ವ್ಯಕ್ತವಾಗಿದೆ. ಒಂದೆಡೆ ಪುರಾತನ ಕಾಲದಿ೦ದ ಬಳಕೆಯಲ್ಲಿದ್ದ ಕನ್ನಡ ಭಾಷೆ ತನ್ನತನವನ್ನುಳಿಸಿಕೊಳ್ಳಲು ಹೋರಾಡುತ್ತಿದೆ. ಇನ್ನೊಂದೆಡೆ ಭಾಷಾನೀತಿ - ಭಾಷಾಪ್ರೇಮ - ಭಾಷಾಬಳಕೆ ರಾಜ್ಯೋತ್ಸವಗಳಂಥ ಸಂದರ್ಭಗಳಲ್ಲಿನ ಒತ್ತಾಯದ ಆಚರಣೆಯಾಗುತ್ತಿದೆ. ಕನ್ನಡದ ಅಭಿವೃದ್ಧಿಗಾಗಿ ಕೆಲವು ಕನ್ನಡಪರ ಸಂಘ- ಸಂಸ್ಥೆಗಳು ವಿಶೇಷವಾಗಿ ಶ್ರಮಿಸಿ, ಹೋರಾಟಗಳನ್ನು ನಡೆಸಿ ತೀರ ಇತ್ತೀಚೆಗಷ್ಟೇ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ. ಇತ್ತೀಚಿಗೆ ಕನ್ನಡ ಲಿಪಿಯ ಬರವಣಿಗೆಯಲ್ಲೂ ಗೊಂದಲ - ವಿವಾದಗಳಿದ್ದು ಕೆಲವು ಅಕ್ಷರಗಳನ್ನು ಕೈಬಿಡಬಹುದೆಂಬ ಕೂಗು ಪ್ರಾಮುಖ್ಯತೆ ಪಡೆದಿದೆ. ಎರಡನೇ ಭಾಗ ಜನಪದರು ಸಾಹಿತ್ಯವನ್ನು ದುಡಿಸಿಕೊಂಡ ಸ್ವತಂತ್ರ ಪ್ರವೃತ್ತಿಯನ್ನು ತಿಳಿಸುತ್ತದೆ. ಅವರಿಗೆ ಗ್ರಾಮ್ಯ ಭಾಷೆಯ ಒಲವು ಮತ್ತು ಸಹಜ ನಿರೂಪಣೆ ಅಗತ್ಯವಾಗಿತ್ತು. ತ್ರಿಪದಿ, ಚೌಪದಿ, ಷಟ್ಟದಿಗಳಿಂದ ಕೂಡಿದೆ. ಹಾಡುಗಳು ಬದುಕಿನ ಎಲ್ಲವನ್ನೂ ತಿಳಿಸಿಕೊಡುವ ಹಂಬಲ, ಉತ್ಸಾಹ ತೋರಿದ್ದವು. ಕೆಲವು ಹಾಡುಗಳನ್ನು ಉದಾಹರಿಸಿ ಗ್ರಾಮೀಣ ಗಾದೆಗಳು, ಸ್ತ್ರೀ ಸಮುದಾಯ, ಹೆಣ್ಣಿನ ಅಳಲು, ತವರ ನೆನಪು ಮುಂತಾದ ಮನಕಲಕುವ ಬದುಕೊಂದನ್ನು ಕಣ್ಣುಂದೆ ನಿಲ್ಲಿಸಲಾಗಿದೆ. ಕನ್ನಡವೇ ಆದರೂ ಅಲ್ಲಿ ಜಾನಪದ ಜಗತ್ತಿನ ವಿಶಿಷ್ಟ ಬದುಕಿನ ಕಂಪಿದೆ. ಸರಾಗವಾಗಿ ಹರಿದುಬಂದ ಭಾಷಾಶೈಲಿಯೊಂದರ ಪರಿಚಯವಿದೆ.

 

Related Books