ಲೇಖಕಿ ಚಿತ್ರ ಸಿ ಅವರ ಲೇಖನಗಳ ಸಂಗ್ರಹ ಅನಾಮಿಕಳ ಅಂತರಂಗ. ಈ ಕೃತಿಯಲ್ಲಿ ಶಾಂತಾನಾಗರಾಜ್ ಅವರು ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಕುಮಾರಿ ಚಿತ್ರಾರವರ ಅನಾಮಿಕಳ ಅಂತರಂಗ ನನಗೆ ಎರಡು ಕಾರಣಗಳಿಗೆ ಬಹಳ ಮಹತ್ವದ್ದೆನಿಸುತ್ತದೆ. ಮೊದಲನೆಯದಾಗಿ ಇಂದಿನ ಯುವಪೀಳಿಗೆ ತಮ್ಮ ಅಭಿವ್ಯಕ್ತಿಗೆ ಕೇವಲ ಕಥೆಕವನಗಳನ್ನಷ್ಟೇ ಅಲ್ಲದೇ ಬೇರೆ ಬೇರೆ ಕ್ಷೇತ್ರಗಳನ್ನೂ ಆರಿಸಿಕೊಳ್ಳುತ್ತಾ ಮೌಲ್ಯಯುತವಾದ ಕೃತಿಗಳನ್ನುರಚಿಸುತ್ತಿದ್ದಾರೆ. ಚಿತ್ರಾರವರೂ ಈ ಸಾಲಿನಲ್ಲಿ ಮುಂಚೂಣಿಯಲ್ಲಿದ್ದಾರೆ. ಎರಡನೆಯ ಬೆರಗೆಂದರೆ ಇವರು ತಮ್ಮ ಮುಂದೆ ಕುಳಿತು ಕೌನ್ಸಿಲಿಗಳು ಹೇಳಿದ ವಿಷಯವನ್ನೆಲ್ಲಾ ತಮ್ಮದೇ ಅನುಭವವೆನ್ನುವಂತೆ ಚಿತ್ರವತ್ತಾಗಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಇಂತಹಸಾಧ್ಯತೆ ಬಹಳ ಕ್ವಚಿತವಾಗಿ ಕಾಣುತ್ತೇವೆ. ಈ ಕಾರಣಕ್ಕಾಗಿ ನಾನು ಚಿತ್ರಾರವರನ್ನು ಅಭಿನಂದಿಸುತ್ತೇನೆ. ಈ ಚೆಂದದ ಕಥೆಗಳು ಮನುಷ್ಯರಮನೋಲೋಕದಲ್ಲಿ ಸುತ್ತಾಡಿಸುತ್ತವೆ. ಜಗತ್ತಿನಲ್ಲಿ ಎಷ್ಟು ಜನರಿದ್ದಾರೋ ಅಷ್ಟೂ ಕಥೆಗಳೂ ಇವೆ. ಕಾಣುವುದಕ್ಕೆ ಎಲ್ಲರೂ ಕೇವಲಮನುಷ್ಯರೇ ಅನ್ನಿಸಿದರೂ ‘ ಪ್ರತಿ ಮನುಷ್ಯನೂ ಭಿನ್ನ ‘ ಎನ್ನುವ ಸತ್ಯವನ್ನು ಈ ಬರಹ ದಾಖಲು ಮಾಡುತ್ತದೆ. ಚಿತ್ರಾರವರು ತಮ್ಮ ಅಮೂಲ್ಯವಾದ ಅನುಭವಗಳನ್ನು ಈ ರೂಪದಲ್ಲಿ ನಿಮ್ಮ ಮುಂದಿಡಲು ಇರುವ ಕಾರಣ ಇಷ್ಟೇ. ಯಾವ ಸಮಸ್ಯೆಯೂ ಅಪರಿಹರ‍್ಯವಲ್ಲ. ಎಲ್ಲವನ್ನೂ ಮೊದಲೇ ಗುರುತಿಸಿ, ಅದರ ನಿವಾರಣೆಗೆ ಪರಿಣಿತರನ್ನು ಸಂರ‍್ಕಿಸಿದರೆ ಪರಿಹಾರ ಸುಲಭವಾಗುತ್ತದೆಎನ್ನುವ ಸತ್ಯವನ್ನು ಓದುಗರು ಅರಿತು, ತಮಗೆ ಏನಾದರೂ ಇಂಥಾ ಸಮಸ್ಯೆ ಇದೆಯೆನಿಸಿದರೆ ತಜ್ಞರನ್ನು ಕಾಣುವ ಪ್ರಯತ್ನ ಮಾಡಿದರೆ , ಈಕೃತಿಯನ್ನು ಬರೆದದ್ದಕ್ಕೆ ಲೇಖಕಿಗೂ, ಓದಿದವರಿಗೂ ಸಾರ್ಥಕ ಭಾವ ಉಂಟಾಗುತ್ತದೆ ಎಂದಿದ್ದಾರೆ.
ಯುವ ಪತ್ರಕರ್ತೆ, ಕಥೆಗಾರ್ತಿ ಹಾಗೂ ಆಪ್ತ ಸಮಾಲೋಚಕಿ. ಈ ಎಲ್ಲ ಬಿರುದಾವಳಿಗಳನ್ನೂ ತಮ್ಮದಾಗಿಸಿಕೊಂಡವರು ಚಿತ್ರ ಸಿ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದು ಕೆಲಕಾಲ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಕೆಲಸ ಮಾಡಿ ಆನಂತರ ಮನಃಶಾಸ್ತ್ರದತ್ತ ಹೊರಳಿಕೊಂಡವರು. ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಅರ್ಥಪೂರ್ಣವಾಗಿ ಕೆಲಸ ಮಾಡಬೇಕೆಂಬ ತುಡಿತದಿಂದ ಆಪ್ತ ಸಮಾಲೋಚನೆಯಲ್ಲಿ ಡಿಪ್ಲೋಮಾ ಪದವಿ ಪಡೆದರು. ಆ ಕ್ಷೇತ್ರದಲ್ಲಿ ಮತ್ತಷ್ಟು ಪರಿಣತಿ ಪಡೆಯಲೆಂದು ಆನ್ವಯಿಕ ಮನಃಶಾಸ್ತ್ರದಲ್ಲಿ ಎಂ.ಎಸ್ಸಿ ಮಾಡಿಕೊಂಡರು. ಹದಿಹರೆಯದವರು ಮತ್ತು ಮಕ್ಕಳ ಆಪ್ತ ಸಮಾಲೋಚನೆಯಲ್ಲಿ ವಿಶೇಷ ಪರಿಣತಿ. ಹಾಗೆಯೇ ಮಕ್ಕಳು, ಹದಿಹರೆಯದವರಿಗೆ ಜೀವನ ಕೌಶಲ್ಯ ತರಬೇತಿ ನೀಡುವುದು ಇವರಿಗೆ ಅತ್ಯಂತ ಪ್ರೀತಿಯ ...
READ MORE