ಕೋವಿದ

Author : ಟಿ.ಗೋವಿಂದರಾಜು

₹ 80.00




Year of Publication: 2021
Published by: ಸಮನ್ವಿತ ಪ್ರಕಾಶನ
Phone: 9844192952

Synopsys

ಲೇಖಕ ಟಿ.ಗೋವಿಂದರಾಜು ಅವರ ಸಂಪಾದಿತ ಕೃತಿ ‘ಕೋವಿದ’. ಪ್ರೊ.ಎಂ.ಎ.ಹೆಗಡೆ ಅವರ ಕಾವ್ಯ ಶಾಸ್ತ್ರ ದರ್ಶನವನ್ನು ಈ ಕೃತಿ ಮಾಡಿಸುತ್ತದೆ. ಕೃತಿಯ ಬೆನ್ನುಡಿಯಲ್ಲಿ ಬರೆದಿರುವಂತೆ, ಎಂ.ಎ.ಹೆಗಡೆ ಅವರ ಕ್ಷೇತ್ರ ಸಾಹಿತ್ಯ ಮತ್ತು ಯಕ್ಷಗಾನ. ಅವರ ಸಾಹಿತ್ಯ ಅಧ್ಯಯನದಿಂದ ಕಲೆಗೆ ಹೆಚ್ಚು ಲಾಭವಾಯಿತೋ ಅಥವಾ ಕಲಾ ಪ್ರೌಢಿಮೆಯಿಂದ ಸಾಹಿತ್ಯ ಘನವಾಯಿತೋ ಎಂಬಷ್ಟು ಅಭಿನ್ನವಾಗಿ ಎರಡೂ ಕ್ಷೇತ್ರಗಳಲ್ಲಿ ತಮ್ಮ ಛಾಪನ್ನು ಮೂಡಿಸಿದವರು. ಅವರ ಅಕಾಲಿಕ ನಿಧನವು ಸಾಂಸ್ಕೃತಿಕ ಲೋಕದಲ್ಲಿ ಮಹತ್ತನ್ನು ಸಾಧಿಸುವ ನಿಟ್ಟಿನಲ್ಲಿ ಅವರು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿ ಕಾರ್ಯನಿರತರಾಗಿದ್ದ ಅವಧಿಯಲ್ಲಿಯೇ ಆಗಿದ್ದು ದುರ್ದೈವ. ಯಕ್ಷಗಾನ ಪ್ರಸಂಗಗಳನ್ನು ಡಿಜಿಟಲ್ ಮಾದರಿಯಲ್ಲಿ ಸಂರಕ್ಷಿಸುವ ಕೋಶ ಯೋಜನೆಯಂತಹ ಮಹತ್ತು ಅವರ ಒಟ್ಟಾರೆ ಬದುಕಿನ ಯೋಜನಾ ಶೈಲಿಗೆ ದಿಕ್ಸೂಚಿ. ಅವರೊಡನಾಡಿನ ಹಿರಿ ಕಿರಿಯರ ಕಂಗಳಲ್ಲಿ ಕಂಡಂತೆ ಎಂ.ಎ ಹೆಗಡೆಯವರ ಕಾವ್ಯ-ಶಾಸ್ತ್ರ ದರ್ಶನವನ್ನು ಕಟ್ಟಿಕೊಡುವ ಪ್ರಯತ್ನವೇ ಈ ಕೃತಿ ಕೋವಿದ ಎಂಬುದಾಗಿ ಬರೆಯಲಾಗಿದೆ.

About the Author

ಟಿ.ಗೋವಿಂದರಾಜು

ಡಾ. ಟಿ. ಗೋವಿಂದರಾಜು ಕವಿಯಾಗಿ, ಪ್ರಬಂಧಕಾರರಾಗಿ, ಕತೆಗಾರರಾಗಿ ಪರಿಚಿತರು. ಇವರು ಹುಟ್ಟಿದ್ದು 15.01.1953 ದೊಡ್ಡಬಳ್ಳಾಪುರ ತಾ. ಚನ್ನಾದೇವಿ ಅಗ್ರಹಾರದಲ್ಲಿ. ಇವರ ತಂದೆ  ದೊಡ್ಡೇರಿ ತಿಮ್ಮರಾಯಪ್ಪ, ತಾಯಿ  ಹೊನ್ನಮ್ಮ. ಕೃಷಿಕ ಮನೆತನದವರು. ಹೊನ್ನಮ್ಮ ಅವರು ತಮ್ಮ ಅಪಾರ ದೇಸೀ ಜ್ಞಾನ ವಿಶೇಷದ ಅಭಿವ್ಯಕ್ತಿಗಾಗಿ ರಾಜ್ಯ ಪ್ರಶಸ್ತಿ ಪುರಸ್ಕಾರ ಪಡೆದವರು. ಬೆಂಗಳೂರು ವಿಶ್ವಿ ವಿದ್ಯಾಲಯದಿಂದ  ಕನ್ನಡ ಸಾಹಿತ್ಯದಲ್ಲಿ ಎಂ.ಎ ಪದವಿ ಹಾಗೂ ಜಾನಪದ ಅಧ್ಯಯನದಲ್ಲಿ ಪಿಎಚ್.ಡಿ. ಪಡೆದ ಟಿ. ಗೋವಿಂದರಾಜು,  ಪ್ರಾರಂಭಕ್ಕೆ ಸಿನಿಮಾ ಕ್ಷೇತ್ರ, ಎಚ್. ಎಲ್. ನಾಗೇಗೌಡರೊಂದಿಗೆ ಜಾನಪದ ಟ್ರಸ್ಟ್ ಕಾರ್ಯದರ್ಶಿಯಾಗಿ, ಜಾನಪದ ಜಗತ್ತು  ಪತ್ರಿಕಾ ಸಂಪಾದಕನಾಗಿ ದುಡಿದ ಹಿರಿಮೆ ಹೊಂದಿದ್ದಾರೆ. ಸರ್ಕಾರದ ವಿವಿಧ ...

READ MORE

Related Books