ವಿಕ್ರಮ ಹತ್ವಾರ್ ಅವರು ಸಾಹಿತ್ಯ ಸಂಸ್ಕೃತಿ ಕುರಿತು ಬರೆದ ಲೇಖನಗಳ ಸಂಗ್ರಹ ಇದು. ಕುಮಾರವ್ಯಾಸನಿಂದ ಹಿಡಿದು ಜಯಂತ ಕಾಯ್ಕಿಣಿ ಅವರ ತನಕದ ಸಾಹಿತ್ಯ ಸಂಸ್ಕೃತಿಯ ಪರಂಪರೆಯನ್ನು ವಿಶಿಷ್ಟ ಒಳಗಣ್ಣಿನ ಮೂಲಕ ನೋಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಲೇಖನಗಳ ಕುರಿತು ಅನಿಸಿಕೆ ಹಂಚಿಕೊಂಡಿರುವ ಕವಿತಾ ಭಟ್ ಎಂಬ ಓದುಗರೊಬ್ಬರು ’ಭಾವನಾಜೀವಿಯಾದ ಮನುಷ್ಯನ ಮನಸ್ಸಿನ ಲಹರಿಗಳು, ಹಿಡಿದ ಪಾತ್ರೆಯ ಆಕಾರ ತಳೆಯುವ ನೀರ ಹಾಗೆಯೇ? ಇವೆಲ್ಲವೂ ಕಾಡುವ ಪ್ರಶ್ನೆಗಳು. ಒಟ್ಟಾರೆ ಪ್ರತಿಯೊಂದು ಕವಿತೆ, ಕಥೆಗಳಲ್ಲಿ ಮೇಲೆ ಕಾಣುವ ಅರ್ಥಕ್ಕಿಂತ ಆಳದಲ್ಲಿ ಹೆಚ್ಚಿನದ್ದೇನೊ ಇದೆ. ಆ ಅರ್ಥಕ್ಕೆ ಯಾರ ಹಂಗೂ ಬೇಕಿಲ್ಲ. ಹೇಳಬೇಕಿರುವುದು ಹೇಳಿಯಾಗಿದೆ ಇನ್ನು ನಿನ್ನ ಇಷ್ಟ ಎಂಬ ದಾರ್ಷ್ಟ್ಯತನವೂ ಇರಬಹುದೇನೋ! ಅಂತೂ ವಿಭಿನ್ನ ಓದು’ ಎಂದಿದ್ದಾರೆ. ಈ ಮಾತುಗಳು ಕೃತಿಯ ಮಹತ್ವವನ್ನು ಸಾರುವಂತಿವೆ.
ವಿಕ್ರಮ್ ಹತ್ವಾರ್ ತಮ್ಮ ಮೊದಲ ಕಥಾಸಂಕಲನಕ್ಕೆ ಯುವ ಸಾಹಿತ್ಯ ಪುರಸ್ಕಾರ ಪ್ರಶಸ್ತಿ ಪಡೆದವರು. ಕುಂದಾಪುರ ಮೂಲದವರಾದ ವಿಕ್ರಮ್, ಕನ್ನಡ ಸಾಹಿತ್ಯಲೋಕದಲ್ಲಿ ತಮ್ಮದೇ ಛಾಪು ಮೂಡಿಸುತ್ತಿದ್ದಾರೆ. ಜೀರೋ ಮತ್ತು ಒಂದು, ಅಕ್ಷೀ ಎಂದಿತು ವೃಕ್ಷ, ನೀ ಮಾಯೆಯೋಳಗೋ ಹಾಗೂ ಹಮಾರಾ ಬಾಜಾಜ್ ಎಂಬ ಕೃತಿಗಳನ್ನು ರಚಿಸಿದ್ದಾರೆ. ...
READ MORE