ಮತ್ತೊಂದು ಸಹಸ್ರಮಾನಕ್ಕೆ ಜಗತ್ತು ತೆರೆದುಕೊಳ್ಳುವ ಹೊತ್ತಿಗೆ ಅನೇಕ ಸ್ಥಿತ್ಯಂತರಗಳು ಭಾರತದಲ್ಲಿ ಆಗುತ್ತಿದ್ದವು. ಅದನ್ನು ಅರ್ಥ ಮಾಡಿಕೊಳ್ಳಲು ತಥಾಕಥಿತ ಕೆಲವು ಚಿಂತನಕ್ರಮಗಳಲ್ಲದೆ 'ವೈರಿಗಳೊಂದಿಗೂ ಮಾತಿಗಿಳಿಯುವ' ಅನುಸಂಧಾನದ ಕ್ರಮ ಅಗತ್ಯವಿತ್ತು. ಅದನ್ನು ಸಾಧ್ಯವಾಗಿಸಿದ್ದು ಅನಂತಮೂರ್ತಿ ಅವರಂತಹ ಚಿಂತಕರು. ಅಪ್ಪಟ ದೇಸಿ ಚಿಂತನೆಯಾಗಿರುವ ಕಾರಣಕ್ಕೆ ಮೃದುಕಠೋರ ನಿಲುವುಗಳ ಮೂಲಕ ಸರಿಯಲ್ಲದದ್ದನ್ನು ಮೆದುವಾಗಿ ತಟ್ಟಿ ಹದಗೊಳಿಸುವ ಶಕ್ತಿ ಅವರಿಗೆ ಇದೆ. ಯುಗಪಲ್ಲಟದಲ್ಲಿ ಅಂತಹ ಚಿಂತನೆಗಳು ಇವೆ ಎನ್ನುವ ಕಾರಣಕ್ಕೆ ಕೃತಿ ಮಹತ್ವದ್ದಾಗಿ ತೋರುತ್ತದೆ.
ಕಥೆ-ಕಾದಂಬರಿ ಮತ್ತು ವೈಚಾರಿಕ ಚಿಂತನೆಗಳ ಮೂಲಕ ಕನ್ನಡ- ಭಾರತದ ಸಾಹಿತ್ಯ-ಸಾಂಸ್ಕೃತಿಕ ಚಿಂತನೆಯನ್ನು ಶ್ರೀಮಂತಗೊಳಿಸಿದವರು ಯು.ಆರ್. ಅನಂತಮೂರ್ತಿ. ತಂದೆ ಉಡುಪಿ ರಾಜಗೋಪಾಲಾಚಾರ್ಯ ತಾಯಿ ಸತ್ಯಮ್ಮ. ತೀರ್ಥಹಳ್ಳಿಯ ಮೇಳಿಗೆಯಲ್ಲಿ 1932ರ ಡಿಸೆಂಬರ್ 21 ಜನಿಸಿದರು. ದೂರ್ವಾಸಪುರದಲ್ಲಿ ಸಾಂಪ್ರದಾಯಿಕ ಪದ್ಧತಿಯಲ್ಲಿ ಸಂಸ್ಕೃತ ಕಲಿತು ಶಾಲಾ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿ ಪಡೆದು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು. ಬರ್ಮಿಂಗ್ ಹ್ಯಾಂ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ (1966) ಪದವಿ ಪಡೆದರು. ಹಾಸನದ ಕಾಲೇಜಿನಲ್ಲಿ ಅಧ್ಯಾಪಕ (1956) ರಾದ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ನಂತರ ಕೇರಳದ ಮಹಾತ್ಮಗಾಂಧಿ ವಿಶ್ವವಿದ್ಯಾಲಯದ ಕುಲಪತಿ (1987-91) ಗಳಾಗಿ ...
READ MORE