‘ನುಡಿತೇರನೆಳೆದವರು ಬಾನುಲಿ ಕಲಿಗಳು' ಕೃತಿಯು ಬಿ.ಕೆ. ಸುಮತಿ ಅವರ ಬಾನುಲಿಯ ವಿಚಾರಗಳ ಸಂಗ್ರಹವಾಗಿದೆ. ಇಲ್ಲಿ ಆಕಾಶವಾಣಿಯ ಆರ್‍ಕೈವ್ಸ್ ನಲ್ಲಿರುವಂತಹ ಅಪೂರ್ವ ವಿವರಗಳು ಇಲ್ಲಿ ಒಟ್ಟಾಗಿವೆ. ಆಕಾಶವಾಣಿಯನ್ನ ಪ್ರತಿನಿಧಿಸಿದ ವ್ಯಕ್ತಿತ್ವಗಳು ನಾಡು, ನುಡಿ, ಸಂಸ್ಕೃತಿಯ ಮೇಲೆ ಬೀರಿದ ಪ್ರಭಾವ ಎಂಥದ್ದು ಎಂಬುವುದನನ್‌ಉ ಈ ಕೃತಿಯ ಮೂಲಕ ಕಾಣಬಹುದು. ಇಲ್ಲಿ ಹಾಸ್ಯ ಚಟಾಕಿಯಿದದೆ, ಒಬ್ಬ ಗಾಯಕಿಯ ಕೊರಗಿದೆ, ಒಬ್ಬ ರಂಗನಿರ್ದೇಶಕನ ಹೇಳಿಕೆ, ಒಬ್ಬ ಮೇಧಾವಿಯ ಒಂದು ಕ್ಯಾಷ್ಯುವಲ್ ಕಮೆಂಟ್, ಒಬ್ಬ ನಿರ್ದೇಶಕರ ಬೇಸರ, ಒಬ್ಬ ಕೇಳುಗನ ಕೋರಿಕೆ, ಒಬ್ಬರ ಹರಟೆ, ಇನ್ನೊಬ್ಬರ ಅನಾಲಿಸಿಸ್, ಮತ್ತೊಬ್ಬರ ಟೀಕೆ ಹೀಗೆ ವಿವಿಧ ಸಣ್ಣ ಸಣ್ಣ ಬಣ್ಣಗಳಿಂದ ಒಂದು ಅದ್ಭುತ ಚಿತ್ರಣವು ಇಲ್ಲಿ ಮೂಡಿಬಂದಿದೆ. ಒಟ್ಟಾರೆಯಾಗಿ ಆಕಾಶವಾಣಿಯ ಸ್ಟುಡಿಯೋದಲ್ಲಿ ನಾಲ್ಕು ಗೋಡೆಗಳ ಮಧ್ಯೆ ನಡೆದಂತಹ ಮಾತುಕತೆಗಳ ಮೂಲಕ ನಾಲ್ಕು ದಿಕ್ಕಲ್ಲೂ ನಡೆಯುವ ಸ್ವಾರಸ್ಯಕರವಾದ ವಿಷಯಗಳನ್ನು ಸೆರೆಹಿಡಿದು ಇಲ್ಲಿ ದಾಖಲಿಸಲಾಗಿದೆ.
ಲೇಖಕಿ ಬಿ.ಕೆ. ಸುಮತಿ ಅವರು ಆಕಾಶವಾಣಿಯಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಿರೂಪಣೆ, ಭಾಷೆ, ಸಾಹಿತ್ಯ ಕುರಿತಾಗಿ ಹಲವು ಲೇಖನಗಳನ್ನು ಬರೆದಿದ್ದು ‘ನಿರೂಪಣೆ, ಮಾತಲ್ಲ ಗೀತೆ’ ಅವರ ಪ್ರಕಟಿತ ಕೃತಿ. ...
READ MORE