ಸಮಯ ಸಂದರ್ಭ

Author : ವೈ. ಅವನೀಂದ್ರನಾಥ್ ರಾವ್

Pages 80

₹ 50.00




Year of Publication: 2008
Published by: ಧರಿಣಿ
Address: 17/18-2. ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40

Synopsys

ಸಮಯ ಸಂದರ್ಭ ಅವನೀಂದ್ರನಾಥ್‌ ರಾವ್‌ ಅವರು ಲೇಖನಗಳ ಸಂಕಲನ. ಹಿರಿಯ ವಿದ್ವಾಂಸರಾದ ಪುರುಷೋತ್ತಮ ಬಿಳಿಮಲೆ ಅವರು ಮುನ್ನುಡಿಯಲ್ಲಿ ’ಸ್ವತಃ ಮಾಹಿತಿ-ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಲೇಖಕರು ಮಾಹಿತಿ ಜ್ಞಾನದ ಈಚಿನ ವಿದ್ಯಮಾನಗಳು ಮತ್ತು ಸ್ವತಂತ್ರ ಭಾರತದಲ್ಲಿ ಗ್ರಂಥಾಲಯದ ಬೆಳವಣಿಗೆ ಎಂಬೆರಡು ಲೇಖನಗಳ ಮೂಲಕ ಈ ಕ್ಷೇತ್ರದ ಮೇಲೆ ತನಗಿರುವ ಹಿಡಿತವನ್ನು ಸ್ಪಷ್ಟಪಡಿಸಿದ್ದಾರೆ.'ಭಾಷಾಭಿವೃದ್ಧಿಗೆ ಪೂರಕವಾದ ಕಾಗದ ಸಂಪತ್ತುಗಳು ನಶಿಸದಂತೆ, ಅವನತಿ ಹೊಂದದಂತೆ ನೋಡಿಕೊಳ್ಳುವುದು ತೀರ ಅವಶ್ಯ. ವಿಶೇಷವಾಗಿ ಇಂತಹ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳು ಗ್ರಾಮಾಂತರ ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ಸ್ಥಾಪನೆಯಾಗಬೇಕು' ಎಂಬಂಥ ಮಾತುಗಳಲ್ಲಿ ಲೇಖಕರು ತಮ್ಮ ಕಳಕಳಿಯನ್ನು ತೋರಿಸಿದ್ದಾರೆ. ಇಲ್ಲಿನ ಬರಹಗಳು ಹೆಚ್ಚು ವಿವಾದಕ್ಕೆ ಒಳಪಡದ ಎಚ್ಚರವನ್ನು ಅವನೀಂದ್ರನಾಥ್ ಅವರು ಕಾಯ್ದುಕೊಂಡು ಬಂದಿದ್ದಾರೆ. ಈ ನಿಟ್ಟಿನಲ್ಲಿ ಸ್ಥಿತ ಪ್ರಜ್ಞೆ' ಲೇಖನದಲ್ಲಿ ಅವರು ಪ್ರಕಟಪಡಿಸಿದ ವಿಚಾರಗಳೆಲ್ಲ ಅವರಿಗೆ ಅನ್ವಯ ವಾಗುವಂತಿದೆ. ಆವೇಶ, ಉದ್ವಿಗ್ನತೆಗಳಿಲ್ಲದ ಸಂಯಮದ ಬರೆಹದ ಶೈಲಿಯೊಂದನ್ನು ಅವರು ಸಿದ್ದಿಸಿಕೊಂಡಿದ್ದಾರೆ. ' ಜ್ಯೋತಿಷಶಾಸ್ತ್ರದ ಬಗ್ಗೆ ಅವರು ಬರೆದ ಲೇಖನ ಇದಕ್ಕೆ ಒಳ್ಳೆಯ ಉದಾಹರಣೆ. ಬೇರೆ ಯಾರು ಬರೆದರೂ ಒಂದು ಬಗೆಯ ವಿವಾದವನ್ನು ಹುಟ್ಟು ಹಾಕಬಹುದಾಗಿದ್ದ ಈ ಲೇಖನವು ಅವನೀಂದ್ರರ ಕೈಯಲ್ಲಿ ವಿವಾದಾತೀತವಾಗಿ ಪ್ರಸ್ತುತಗೊಂಡಿದೆ’ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

About the Author

ವೈ. ಅವನೀಂದ್ರನಾಥ್ ರಾವ್
(12 October 1971)

ವೈ. ಅವನೀಂದ್ರನಾಥ್ ರಾವ್ (1971) ದೆಹಲಿಯ ಸಂಸ್ಕೃತಿ ಮಂತ್ರಾಲಯದ ಕೇಂದ್ರ ಸಚಿವಾಲಯ ಗ್ರಂಥಾಲಯದ ಅಧಿಕಾರಿ. ಉಡುಪಿ ಜಿಲ್ಲೆಯ ಎಲ್ಲೂರಿನವರು. ಉಚ್ಚಿಲದ ಸರಸ್ವತಿ ಮಂದಿರ, ಕುಂದಾಪುರದ ಬೋರ್ಡ್ ಹೈಸ್ಕೂಲ್ ಅಲ್ಲದೆ ಅದಮಾರು, ಪೊಲಿಪು, ಸುಳ್ಯದ ಸಬ್ಬಡ್ಕದಲ್ಲಿ ಆರಂಭಿಕ ಶಿಕ್ಷಣ ಪಡೆದರು. ಬ್ರಹ್ಮಾವರದ ಎಸ್.ಎಂ.ಎಸ್ ಮತ್ತು ಮುಲ್ಕಿಯ ವಿಜಯ ಕಾಲೇಜು ಮೂಲಕ ವಾಣಿಜ್ಯ ಪದವಿ ಪಡೆದರು. ಕ್ರಿಕೆಟಿಗನಾಗಿದ್ದ ಇವರು ವಿಶ್ವವಿದ್ಯಾಲಯದ 'ಬಿ.ಸಿ.ಆಳ್ವ ಟ್ರೋಫಿ' ಪಂದ್ಯಾವಳಿಯಲ್ಲಿ ಆಡಿದ್ದರು. ಕೆಲಸಮಯ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದೋಗಿಯಾಗಿದ್ದರು. ಉನ್ನತ ಶಿಕ್ಷಣದ ಬಳಿಕ ಮೂಡಬಿದರೆ, ಮುಲ್ಕಿ,ಮಂಗಳೂರಿನಲ್ಲಿ ಗ್ರಂಥಪಾಲಕರಾಗಿ ಮತ್ತು ಕೆಲಕಾಲ ಕನ್ನಡ ಉಪನ್ಯಾಸಕರಾಗಿ ಸೇವೆಸಲ್ಲಿಸಿದ್ದರು. ಮಂಗಳೂರು ...

READ MORE

Related Books